Home News Hyderabad Biriyani: ಬೌ ಬೌ ಬಿರಿಯಾನಿ ಆಯ್ತು ಇದೀಗ ಕಪ್ಪೆ ಬಿರಿಯಾನಿ? ಜಗತ್‌ಪ್ರಸಿದ್ಧ ಹೈದರಾಬಾದ್‌ ಚಿಕನ್...

Hyderabad Biriyani: ಬೌ ಬೌ ಬಿರಿಯಾನಿ ಆಯ್ತು ಇದೀಗ ಕಪ್ಪೆ ಬಿರಿಯಾನಿ? ಜಗತ್‌ಪ್ರಸಿದ್ಧ ಹೈದರಾಬಾದ್‌ ಚಿಕನ್ ಬಿರಿಯಾನಿಯಲ್ಲಿ, ಬಿಸಿ ಬಿಸಿ ಕಪ್ಪೆ!

Hindu neighbor gifts plot of land

Hindu neighbour gifts land to Muslim journalist

Hyderabad Biriyani: ಮಾಂಸಹಾರಿಗಳಿಗೆ(Non-veg) ಹೈದರಾಬಾದ್ ಬಿರಿಯಾನಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಜಗತ್‌ಪ್ರಸಿದ್ಧ ಈ ಬಿರಿಯಾನಿಗೆ ಮಾರೂ ಹೋಗದ ಖಾದ್ಯ ಪ್ರಿಯರೇ ಇಲ್ಲ. ಈ ಬಿರಿಯಾನಿಯ ರುಚಿಯೇ ಬೇರೆ. ಇದೀಗ ಈ ಬಿರಿಯಾನಿ(Biriyani) ತಯಾರಿಸುವ ಗಚ್ಚಿಬೌಲಿಯಲ್ಲಿರುವ ಐಐಐಟಿ(IIIT) ಮೆಸ್ ಬಿರಿಯಾನಿ ಪ್ರಿಯರಿಗೆ ಭಾರಿ ವಂಚನೆ ಮಾಡಿದೆ. ಬಿರಿಯಾನಿಯಲ್ಲಿ ಚಿಕನ್ ತುಂಡುಗಳ ಜೊತೆಗೆ ಕಪ್ಪೆಯನ್ನೂ(Frog) ಒಟ್ಟಿಗೆ ಬೇಯಿಸಿ ನೀಡಿದೆ.

ಈ ಅಚಾತುರ್ಯದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅ.17 ರಂದು ಕಾಲೇಜೊಂದರ ಕದಂಬ ಮೆಸ್ನಲ್ಲಿ ತಯಾರಿಸಿದ್ದ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಜೊತೆ ಫುಲ್‌ ಕಪ್ಪೆ ಪತ್ತೆಯಾಗಿದೆ. ವಿದ್ಯಾರ್ಥಿಯೊಬ್ಬರಿಗೆ ನೀಡಿದ ಪ್ಲಾಟ್‌ನಲ್ಲಿ ಇದು ಪತ್ತೆಯಾಗಿದ್ದು, ಆತ ಬೆಚ್ಚಿ ಬಿದ್ದಿದ್ದಾನೆ. ಕಪ್ಪೆಯನ್ನು ಬಿರಿಯಾನಿ ಮಸಾಲೆಯೊಂದಿಗೆ ಹದವಾಗಿ ಬೇಯಿಸಲಾಗಿತ್ತು. ತಟ್ಟೆಯಲ್ಲಿದ್ದ ಮಂಡೂಕವನ್ನು ಕಂಡು ವಿದ್ಯಾರ್ಥಿಗಳು ಆಶ್ಚರ್ಯಗೊಂಡಿದ್ದಾರೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡದ ಮೆಸ್ನ ಯಡವಟ್ಟಿಗೆ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಅಷ್ಟೆ ಅಲ್ಲದೆ ತಟ್ಟೆಯಲ್ಲಿರುವ ಕಪ್ಪೆ ಬಿರಿಯಾನಿ ವಿಡೀಯೋ ಮಾಡಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಮೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಪ್ಪೆ, ಬಿರಿಯಾನಿ ಪಾತ್ರೆಗೆ ಹೇಗೆ ಬಂತು ಎಂದು ಅಚ್ಚರಿ ವ್ಯಕ್ತವಾಗಿದೆ.

ಈ ಬಗ್ಗೆ ವಿದ್ಯಾರ್ಥಿಗಳು ಮೆಸ್‌ ಮೇಲುಸ್ತುವಾರಿಗಳಿಗೆ ದೂರನ್ನು ಕೂಡ ನೀಡಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯದ ಕಾಳಜಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಿರಿಯಾನಿ ತಯಾರಿಸುವಾಗ ಅಚಾನಕ್‌ ಆಗಿ ಮಂಡೂಕ, ಬಿರಿಯಾನಿ ಪಾತ್ರೆಗೆ ಬಿದ್ದಿರಬಹುದು ಎಂದು ಪ್ರಾಥಮಿಕ ವರದಿಯಿಂದ ತಿಳಿಸು ಬಂದಿದೆ.