Home News Man Kills Wife: ‘ ಅದು ಬೇಕು – ಈಗ ಬೇಡ ‘ ಕೂಡೋ ವಿಷಯದಲ್ಲಿ...

Man Kills Wife: ‘ ಅದು ಬೇಕು – ಈಗ ಬೇಡ ‘ ಕೂಡೋ ವಿಷಯದಲ್ಲಿ ದಂಪತಿ ಕಲಹ : ಬಾವಿಗೆ ಜಿಗಿದ ಪತ್ನಿಯನ್ನು ರಕ್ಷಿಸಿ, ಬಳಿಕ ಕೊಂದ ಪತಿ !

Man Kills Wife

Hindu neighbor gifts plot of land

Hindu neighbour gifts land to Muslim journalist

Man Kills Wife: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತು ಕೇಳಿದ್ದೇವೆ. ಎಷ್ಟೋ ಬಾರಿ ಈ ಮಾತು ನಿಜ ಆಗಿರಬಹುದು. ಆದರೆ ಇಲ್ಲೊಂದು ಘಟನೆ ನೋಡಿದರೆ ಖಂಡಿತಾ ಆಶ್ಚರ್ಯ ಪಡುತ್ತೀರಿ. ಯಾಕೆಂದರೆ ಸಾಯಲೆಂದು ಬಾವಿಗೆ ಬಿದ್ದಿದ್ದ ಹೆಂಡತಿಯನ್ನು ಕಾಪಾಡಿದ ಗಂಡ, ಸ್ವಲ್ಪ ಸಮಯದ ಬಳಿಕ ತಾನೇ ಆಕೆಯನ್ನು ಕೊಲೆ ಮಾಡಿದ್ದಾನೆ.

ಸಾಮಾನ್ಯವಾಗಿ ಸರಸ ಸಲ್ಲಾಪಗಳಿಂದ ಗಂಡ ಹೆಂಡತಿ (Man Kills Wife) ಕೋಪ ತನ್ನಗಾಗುತ್ತದೆ. ಆದರೆ ಸರಸದ ವಿಚಾರದಲ್ಲಿಯೇ ವಿರಸ ಉಂಟಾಗಿ ಕೊಲೆ ಮಾಡುವ ಮಟ್ಟಿಗೆ ಸಂದರ್ಭ ಮಿತಿ ಮೀರಿದೆ.

ಈ ಆಘಾತಕಾರಿ ಘಟನೆ ನಡೆದಿರುವುದು ಛತ್ತೀಸಗಡದ ಜಶ್ಪುರ ಜಿಲ್ಲೆಯಲ್ಲಿ. ಶಂಕರ್ ರಾಮ್ ಮತ್ತು ಆತನ ಹೆಂಡತಿ ಆಶಾ ಬಾಯಿ ಇಬ್ಬರೂ ಸೋಮವಾರ ರಾತ್ರಿ ಮದ್ಯದ ನಶೆ ಏರಿಸಿಕೊಂಡಿದ್ದರು. ಎಣ್ಣೆ ಹೊಡೆದು ಸುಸ್ತಾದ ಬಳಿಕ ಮಲಗಲು ಹಾಸಿಗೆಯತ್ತ ತೆರಳಿದ್ದರು. ಶಂಕರ್‌ಗೆ ಪತ್ನಿ ಜತೆ ಲೈಂಗಿಕ ಕ್ರಿಯೆ ನಡೆಸುವ ಬಯಕೆ ಉಂಟಾಗಿತ್ತು. ಆದರೆ ಹೆಂಡತಿ ಆಶಾಳಿಗೆ ಅದರ ಬಗ್ಗೆ ಆಸಕ್ತಿ ಇರಲಿಲ್ಲ. ಹೀಗಾಗಿ ಒಲ್ಲೆ ಎಂದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿತ್ತು.

ದೈಹಿಕ ಸಂಪರ್ಕದ ಕುರಿತಾಗಿ ಶುರುವಾದ ಜಗಳ ತಾರಕಕ್ಕೇರಿತ್ತು. ಒಂದೆಡೆ ಕುಡಿದ ಅಮಲಿನಲ್ಲಿದ್ದ ಆಶಾ, ಗಂಡನ ಕಾಟದಿಂದ ಸಿಟ್ಟಿಗೆದ್ದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮನೆಯ ಹೊರಗಿನ ಬಾವಿಗೆ ಜಿಗಿದಿದ್ದಳು. ದುಡುಕಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸ್ವತಃ ಆಕೆಯ ಗಂಡ ಬಾವಿಗೆ ಜಿಗಿದು ಬದುಕಿಸಿದ್ದ.

ಬದುಕಿಸಿದ ನಂತರ ನೀವು ಏನು ಊಹೆ ಮಡಿದಿರೋ ಅದಕ್ಕಿಂತ ವಿಪರೀತ ಘಟನೆ ನಡೆದು ಹೋಗಿದೆ. ಕೋಪದ ಭರದಲ್ಲಿ ಶಂಕರ್, ಹೆಂಡತಿ ಆಶಾಳ ಖಾಸಗಿ ಅಂಗಗಳ ಮೇಲೆ ಬಲವಾಗಿ ಆಕ್ರಮಣ ನಡೆಸಿದ್ದಾನೆ. ಇದರಿಂದ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಹೆಂಡತಿಯನ್ನು ಕೊಂದ ನಂತರ ರಾತ್ರಿಯಿಡೀ ಆಕೆಯ ಶವದ ಪಕ್ಕದಲ್ಲಿಯೇ ಕುಳಿತುಕೊಂಡಿದ್ದಾನೆ.

ಪೊಲೀಸರಿಗೆ ಬೆಳಗ್ಗೆ ಈ ಘಟನೆ ಬಗ್ಗೆ ಮಾಹಿತಿ ದೊರೆತಿದ್ದು, ವಿಚಾರಣೆ ವೇಳೆ ಶಂಕರ್, ರಾತ್ರಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾನೆ. ನಂತರ ಶಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

 

ಇದನ್ನು ಓದಿ : Think before you lend: ಸಾಲ ಕೊಡೋಕು ಮುಂಚೆ ಚಿಂತಿಸಿ ಹಣ ವಾಪಸ್ಸು ಬರುವತ್ತ : ಯಾಕಂದ್ರೆ ಈ ಟೈಮ್ ಅಲ್ಲಿ ಸಾಲ ನೀಡಿದ್ರೆ ಬರೋದೇ ಇಲ್ಲ ಹಣ!