Home News Jammu-Kashmir: ಬಿಸ್ಕೆಟ್‌ ಬಳಸಿ ಉಗ್ರರ ಬೇಟೆ! ಯೋಧರ ಹೊಸ ಪ್ಲಾನ್ ಸಕ್ಸಸ್!

Jammu-Kashmir: ಬಿಸ್ಕೆಟ್‌ ಬಳಸಿ ಉಗ್ರರ ಬೇಟೆ! ಯೋಧರ ಹೊಸ ಪ್ಲಾನ್ ಸಕ್ಸಸ್!

Hindu neighbor gifts plot of land

Hindu neighbour gifts land to Muslim journalist

Jammu-Kashmir: ಜಮ್ಮು-ಕಾಶ್ಮೀರದಲ್ಲಿ (Jammu-Kashmir) ಶ್ರೀನಗರದಲ್ಲಿ ಶನಿವಾರ ಪಾಕ್ ಮೂಲದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್ ಭಾಯಿಯನ್ನು (Usman Bhai) ಯೋಧರು ಬಿಸ್ಕೆಟ್ ಸಹಾಯದಿಂದ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಹೌದು, ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್ ಭಾಯಿ ಹತ್ಯೆಯಲ್ಲಿ ‘ಬಿಸ್ಕೆಟ್’ ಮಹತ್ವದ ಪಾತ್ರ ವಹಿಸಿದೆ. ಉಗ್ರನು ವಾಸವಿದ್ದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಬೀದಿ ನಾಯಿಗಳು ಇದ್ದು, ಅವುಗಳ ಬೊಗಳುವಿಕೆಯಿಂದ ಉಗ್ರ ಎಚ್ಚೆತ್ತುಕೊಂಡು ಪರಾರಿಯಾಗುವ ಸಾಧ್ಯತೆಯಿತ್ತು. ಆದ್ದರಿಂದ ಯೋಧರು ʼಬಿಸ್ಕೆಟ್‌ʼ ನೀಡಿ ಬೊಗಳುವ ನಾಯಿಗಳ ಬಾಯಿ ಮುಚ್ಚಿಸಿ ತಮ್ಮ ಗುರಿ ತಲುಪುವಲ್ಲಿ ಯಶಸ್ವಿ ಆಗಿದ್ದಾರೆ. 

ಇನ್ಸ್ಪೆಕ್ಟರ್ ಮನ್ಸೂರ್ ವಾನಿ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಉಸ್ಮಾನ್ ಭಾಗಿಯಾಗಿದ್ದ, ಹಲವು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯನಾಗಿದ್ದ ಉಸ್ಮಾನ್, ಶ್ರೀನಗರದ ಜನನಿಬಿಡ ಖಾನ್ಯಾರ್ ಎಂಬಲ್ಲಿ ಅವಿತುಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶನಿವಾರ ಕಾರ್ಯಾಚರಣೆ ನಡೆಸಿವೆ. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. 

ಇದು ಶ್ರೀನಗರ (Srinagar) ಸಿಟಿಯಲ್ಲಿ 2 ವರ್ಷದಲ್ಲಿ ನಡೆದ ಮೊದಲ ಕಾರ್ಯಾಚರಣೆ ಆಗಿದ್ದು, ಈತನ ಹತ್ಯೆ ನಮಗೆ ಒಂದು ದೊಡ್ಡ ಯಶಸ್ಸು. ಲಷ್ಕರ್‌ನ ಅತಿ ಹಿರಿಯ ಕಮಾಂಡರ್ ಆಗಿದ್ದ ಆತನ ಹತ್ಯೆ ಲಷ್ಕರ್‌ಗೆ ದೊಡ್ಡ ಹೊಡೆತ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.