Home News JCB ಡ್ರೈವರ್ ಆದ್ರೆ ಒಂದು ಗಂಟೆಗೆ ಎಷ್ಟು ಗಳಿಸಬಹುದು? ತಿಂಗಳಾಂತ್ಯಕ್ಕೆ ಎಷ್ಟು ಸಂಬಳ ಸಿಗುತ್ತೆ?

JCB ಡ್ರೈವರ್ ಆದ್ರೆ ಒಂದು ಗಂಟೆಗೆ ಎಷ್ಟು ಗಳಿಸಬಹುದು? ತಿಂಗಳಾಂತ್ಯಕ್ಕೆ ಎಷ್ಟು ಸಂಬಳ ಸಿಗುತ್ತೆ?

Hindu neighbor gifts plot of land

Hindu neighbour gifts land to Muslim journalist

JCB: ದುಡಿಮೆಗೆ ಇಂಥದ್ದೇ ಒಂದು ನಿರ್ದಿಷ್ಟ ಮಾರ್ಗವೆಂಬುದಿಲ್ಲ. ಚೆನ್ನಾಗಿ ದುಡಿಯಬೇಕು, ಒಳ್ಳೆಯ ಹಣ ಸಂಪಾದನೆ ಮಾಡಬೇಕು ಎಂದರೆ ಯಾವುದಾದರೂ ಕೂಡ ಕೆಲಸವನ್ನು ಆರಿಸಿಕೊಂಡು ಮಾಡಬೇಕಾಗುತ್ತದೆ. ಅದರಲ್ಲೂ ಇಂದಿನ ಯುವ ಪೀಳಿಗೆಯವರು ಹೆಚ್ಚಾಗಿ ಡ್ರೈವಿಂಗ್ ವೃತ್ತಿಯ ಕಡೆ ವಾಲುತ್ತಿದ್ದಾರೆ. ಕಾರು, ಕ್ಯಾಬ್, ಬಸ್ಸು, ಲಾರಿ ಸೇರಿದಂತೆ ಜೆಸಿಬಿಯಂತಹ ಅನೇಕ ವಾಹನಗಳಿಗೆ ಡ್ರೈವರ್ ಆಗಿ ಹೋಗುತ್ತಿದ್ದಾರೆ. ಅದರಲ್ಲಿ ಜೆಸಿಬಿ ಡ್ರೈವರ್ ಗಳಂತೂ ತುಸು ಹೆಚ್ಚಾಗಿಯೇ ಗಳಿಕೆ ಮಾಡುತ್ತಾರೆ ಎನ್ನಬಹುದು. ಹಾಗಾದ್ರೆ ಜೆಸಿಪಿ ಡ್ರೈವರ್ ಗಳು ಒಂದು ಗಂಟೆಗೆ ಎಷ್ಟು ಹಣಗಳಿಸುತ್ತಾರೆ, ತಿಂಗಳಾಂತ್ಯಕ್ಕೆ ಅವರ ಸಂಬಳವೆಷ್ಟು? ನೋಡೋಣ ಬನ್ನಿ.

ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಸಣ್ಣ ಹಳ್ಳಿಗಳಲ್ಲಿ ಕೂಡ ಜೆಸಿಬಿಯ ಕಾರು ಬಾರು ಜೋರಾಗಿದೆ. ನಗರಗಳಲ್ಲಿ ಕಟ್ಟಡ, ಚರಂಡಿ ಸೇರಿದಂತೆ ಮುಂತಾದ ಕಾರ್ಯಗಳಲ್ಲಿ ಜೆಸಿಬಿ ಬಳಕೆಯಾದರೆ ಹಳ್ಳಿಗಳ ಕಡೆ ರಸ್ತೆ ನಿರ್ಮಾಣ, ಹೊಲಗದ್ದೆಗಳ ಕೆಲಸಗಳಿಗೆ ಇಂದು ಜೆಸಿಬಿ ಅನಿವಾರ್ಯವಾಗಿ ಬಿಟ್ಟಿದೆ. ಹೀಗಾಗಿ ಭಾರತದ ವಿವಿಧ ರಾಜ್ಯಗಳಲ್ಲಿ ಜೆಸಿಬಿ ಚಾಲಕರಿಗೆ ಗಂಟೆಗೆ ₹700 ರಿಂದ ₹1,000 ವರೆಗೆ ದರ ಸಿಗುತ್ತದೆ. ಈ ದರವು ರಾಜ್ಯ, ಜೆಸಿಬಿಯ ಮಾದರಿ, ಮತ್ತು ಕೆಲಸದ ಸ್ವರೂಪವನ್ನು ಅವಲಂಬಿಸಿ ಬದಲಾಗುತ್ತದೆ. ಒಬ್ಬ ಚಾಲಕ ದಿನಕ್ಕೆ ಸರಾಸರಿ 8 ಗಂಟೆಗಳ ಕಾಲ ಕೆಲಸ ಮಾಡಿದರೆ, ಅವನ ದೈನಂದಿನ ಗಳಿಕೆ ₹5,600 ರಿಂದ ₹8,000 ವರೆಗೆ ಇರಬಹುದು. ಇದೇ ರೀತಿ 30 ದಿನಗಳವರೆಗೆ (ಒಂದು ತಿಂಗಳು) ಸತತವಾಗಿ ಕೆಲಸ ಮಾಡಿದರೆ, ಜೆಸಿಬಿ ಚಾಲಕನ ಒಟ್ಟು ಗಳಿಕೆ ₹1.5 ಲಕ್ಷದಿಂದ ₹2.4 ಲಕ್ಷದವರೆಗೆ ಇರಬಹುದು. ಇದು ಮಾಲೀಕರಿಗೆ ಗಳಿಕೆ.

ಕೆಲವು ಮಾಲೀಕರು ಡ್ರೈವರ್ ಗಳನ್ನು ಇಟ್ಟುಕೊಂಡು ಜೆಸಿಬಿಯನ್ನು ನಡೆಸುತ್ತಾರೆ. ಇಂತಹ ಸಮಯದಲ್ಲಿ ಡ್ರೈವರ್ ಗಳಿಗೆ ಒಂದು ಗಂಟೆಗೆ ಐವತ್ತು ರೂಪಾಯಿಯಂತೆ ಬಾಟ ನೀಡಲಾಗುತ್ತದೆ. ಡ್ರೈವರ್ ಗಳಿಗೆ ಮಾಲೀಕರು ದಿನಕ್ಕೆ 800 ರಿಂದ 1000 ಸಂಬಳವನ್ನು ಕೂಡ ನೀಡುತ್ತಾರೆ. ಹೀಗಾಗಿ ಜೆಸಿಬಿ ಡ್ರೈವರ್ ಗಳು ತಿಂಗಳಿಗೆ 25,000 ದಿಂದ 30,000 ದಷ್ಟು ಸಂಬಳವನ್ನು ಪಡೆಯಬಹುದು. ಇದರೊಂದಿಗೆ ದಿನಕ್ಕೆ ಅವರಿಗೆ 300 ರಿಂದ 400 ಬಾಟ ಕೂಡ ಸಿಗುತ್ತದೆ.

ಇನ್ನು ಜೆಸಿಬಿಗಳು ಡೀಸೆಲ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಸರಾಸರಿಯಾಗಿ ಒಂದು ಲೀಟರ್‌ಗೆ 5 ಕಿಲೋಮೀಟರ್ ಮೈಲೇಜ್ ನೀಡುತ್ತವೆ. ಆದರೆ, ಜೆಸಿಬಿಯ ಕೆಲಸವು ಸಾಮಾನ್ಯವಾಗಿ ಸ್ಥಳದಲ್ಲೇ (ತೋಡುವಿಕೆ, ಎತ್ತುವಿಕೆ) ನಡೆಯುವುದರಿಂದ, ಇಂಧನ ಬಳಕೆಯು ಕೆಲಸದ ತೀವ್ರತೆಯನ್ನು ಅವಲಂಬಿಸಿರುತ್ತದೆ. ದೀರ್ಘ ಗಂಟೆಗಳ ಕೆಲಸದಲ್ಲಿ ಇಂಧನ ವೆಚ್ಚವೂ ಹೆಚ್ಚಿರುತ್ತದೆ ಆದ್ದರಿಂದ, ಚಾಲಕರು ಅಥವಾ ಗುತ್ತಿಗೆದಾರರು ಇಂಧನ ವೆಚ್ಚ ಮತ್ತು ಗಳಿಕೆಯನ್ನು ಸಮತೋಲನಗೊಳಿಸಬೇಕು.

ಇದನ್ನೂ ಓದಿ:Bigg Boss: ಎಲ್ಲರ ಫೆವರೇಟ್ ಶೋ ‘ಬಿಗ್ ಬಾಸ್’ ಹುಟ್ಟಿಕೊಂಡಿದ್ದು ಹೇಗೆ?

ಇದರೊಂದಿಗೆ ಜೆಸಿಬಿಗಳು ಡೀಸೆಲ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಸರಾಸರಿಯಾಗಿ ಒಂದು ಲೀಟರ್‌ಗೆ 5 ಕಿಲೋಮೀಟರ್ ಮೈಲೇಜ್ ನೀಡುತ್ತವೆ. ಆದರೆ, ಜೆಸಿಬಿಯ ಕೆಲಸವು ಸಾಮಾನ್ಯವಾಗಿ ಸ್ಥಳದಲ್ಲೇ (ತೋಡುವಿಕೆ, ಎತ್ತುವಿಕೆ) ನಡೆಯುವುದರಿಂದ, ಇಂಧನ ಬಳಕೆಯು ಕೆಲಸದ ತೀವ್ರತೆಯನ್ನು ಅವಲಂಬಿಸಿರುತ್ತದೆ. ದೀರ್ಘ ಗಂಟೆಗಳ ಕೆಲಸದಲ್ಲಿ ಇಂಧನ ವೆಚ್ಚವೂ ಹೆಚ್ಚಿರುತ್ತದೆ ಆದ್ದರಿಂದ, ಚಾಲಕರು ಅಥವಾ ಗುತ್ತಿಗೆದಾರರು ಇಂಧನ ವೆಚ್ಚ ಮತ್ತು ಗಳಿಕೆಯನ್ನು ಸಮತೋಲನಗೊಳಿಸಬೇಕು.