

Mumbai: ಶಾಸಕರ ಕ್ಯಾಂಟೀನ್ ನಲ್ಲಿ ಊಟಕ್ಕೆ ತೆರಳಿದ ಸಂದರ್ಭ ಹಳಸಿದ ದಾಲ್ ಬಡಿಸಿದ ಎಂಬ ಕಾರಣಕ್ಕೆ ಶಾಸಕರು ಒಬ್ಬರು ಹೋಟೆಲ್ ಮಾಲೀಕನನ್ನು ಹಿಡಿದು ಹಿಗ್ಗಾಮುಗ್ಗ ತಿಳಿಸಿದ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಹೌದು, ಹೌದು. ಮುಂಬೈನ (Mumbai) ಆಕಾಶವಾಣಿ ಶಾಸಕರ ಕ್ಯಾಂಟೀನ್ (Akashavani MLA Canteen) ಬಳಿ ಘಟನೆ ನಡೆದಿದ್ದು, ಬುಲ್ದಾನಾ ಕ್ಷೇತ್ರದ ಶಿವಸೇನಾ ಪಕ್ಷದ ಶಾಸಕ ಸಂಜಯ್ ಗಾಯಕ್ವಾಡ್ (Sanjay Gaikwad) ಕ್ಯಾಂಟೀನ್‌ನಲ್ಲಿ ಥಾಲಿಯನ್ನು ಆರ್ಡರ್ ಮಾಡಿದ್ದರು. ಈ ವೇಳೆ ದಾಲ್ ದುರ್ವಾಸನೆ ಬರುತ್ತಿತ್ತು ಎಂದು ಹೇಳಲಾಗಿದೆ.
ದಾಲ್ ದುರ್ವಾಸನೆ ಬರುತ್ತಿದ್ದರಿಂದ ಶಾಸಕರು ಕ್ಯಾಂಟೀನ್‌ಗೆ ಹೋಗಿ ಬೇಳೆಯನ್ನು ತಯಾರಿಸಿದ ಸಿಬ್ಬಂದಿಯನ್ನ ಕೇಳಿದ್ರು. ಬಳಿಕ ಅಲ್ಲೇ ಇದ್ದ ಜನರನ್ನ ಕರೆದು ದಾಲ್ ಪ್ಯಾಕೆಟ್ ಅನ್ನು ತೋರಿಸಿದ್ದಾರೆ. ದಾಲ್ ತಯಾರಿಸಿದವನಿಗೂ ಅದರ ದುರ್ವಾಸನೆ ತೋರಿಸಿ ಬಳಿಕ ಮುಖಕ್ಕೆ ರಪ್ಪನೆ ಬಾರಿಸಿದ್ದಾರೆ. ಬಳಿಕ ಕ್ಯಾಂಟೀನ್‌ನ ಸಿಬ್ಬಂದಿ ಬಳಿ ಮಾಲೀಕನಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ಕ್ಯಾಂಟೀನ್ ಮಾಲೀಕ ಬಂದಾಗ ಶಾಸಕ ದಾಲ್ ಪ್ಯಾಕೇಟ್ ತೆರೆದು ಆತನಿಗೆ ತೋರಿಸಿದ್ದಾರೆ.
ಮತ್ತೆ ಆತ ದಾಲ್ ಪ್ಯಾಕೆಟ್ ನೋಡಿ ತಲೆ ಎತ್ತುವಾಗ ಶಾಸಕರು ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಪುನಃ ಎರಡ್ಮೂರು ಬಾರಿ ಹೊಡೆದಿದ್ದಾರೆ. ಈ ವೇಳೆ ಕ್ಯಾಂಟೀನ್ ಮಾಲೀಕ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಶಾಸಕರ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.













