Home News ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಮಾತಿಗೆ ತಕ್ಕಂತೆ ಇದೆ ಈ ಘಟನೆ | ಲಾಕ್...

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಮಾತಿಗೆ ತಕ್ಕಂತೆ ಇದೆ ಈ ಘಟನೆ | ಲಾಕ್ ಹಾಕಿ ಹೋಗಿದ್ದ ಮನೆಯ ಬೀಗ ಮುರಿದು ಗೃಹ ಪ್ರವೇಶ ಮಾಡಿ ಅಲ್ಲೇ ನೆಲೆಸಿದ ವ್ಯಕ್ತಿ !!

Hindu neighbor gifts plot of land

Hindu neighbour gifts land to Muslim journalist

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ…. ಬಹು ಪ್ರಚಲಿತ ನುಡಿ. ಈ ಮಾತಿಗೆ ತಕ್ಕ ಘಟನೆಯೊಂದು ಮಲೆನಾಡಿನಲ್ಲಿ ನಡೆದಿದೆ. ಬೀಗ ಹಾಕಿದ್ದ ಮನೆಯೊಂದರ ಬೀಗ ಒಡೆದು, ಗೃಹಪ್ರವೇಶ ಮಾಡಿ ಹಾಯಾಗಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮುಖವಾಡ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಕಳಚಿ ಬಿದ್ದಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿರುವ ಜಯಮ್ಮ ಎಂಬುವರು 12 ವರ್ಷಗಳ ಹಿಂದೆ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಟ್ವಿನ್ ಹೌಸ್ ಖರೀದಿ ಮಾಡಿ ಕ್ರಯ ಪತ್ರ ಮಾಡಿಸಿಕೊಂಡಿದ್ದು, ವಿದ್ಯುತ್ ಸಂಪರ್ಕವನ್ನೂ ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿಕೊಂಡಿದ್ದರು.

ಟ್ವಿನ್ ಹೌಸ್‌ನಲ್ಲಿ ಒಂದು ಮನೆಯನ್ನು ಲೀಸ್‌ಗೆ ಕೊಟ್ಟಿದ್ದರು. ಖಾಲಿ ಇದ್ದ ಮತ್ತೊಂದು ಮನೆಗೆ ಬೀಗ ಹಾಕಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಲಗೇಜು ಸಮೇತ ಬಂದ ವ್ಯಕ್ತಿಯೊಬ್ಬ ಮನೆಗೆ ಹಾಕಿದ್ದ ಬೀಗ ಒಡೆದು ಗೃಹ ಪ್ರವೇಶ ಮಾಡಿಬಿಟ್ಟ. ಈ ಟ್ವಿನ್ ಹೌಸ್‌ನ ಮತ್ತೊಂದು ಮನೆಯಲ್ಲಿ ಲೀಸ್‌ಗೆ ಇದ್ದವರು ಬೆಂಗಳೂರಿನಲ್ಲಿರುವ ಈ ಮನೆಯ ಮಾಲೀಕರಾದ ಜಯಮ್ಮ ಅವರಿಗೆ ಫೋನ್ ಮಾಡಿ ಯಾರೋ ಬಂದು ಬೀಗ ಒಡೆದು ಗೃಹ ಪ್ರವೇಶ ಮಾಡಿದ್ದಾರೆ. ಅವರಿಗೆ ಮನೆಯನ್ನು ಲೀಸ್‌ಗೆ ಕೊಟ್ಟಿದ್ದೀರೋ? ಅಥವಾ ಬಾಡಿಗೆಗೋ ಎಂದು ಕೇಳಿದ್ದಾರೆ.

ಈ ಮಾತು ಕೇಳುತ್ತಿದ್ದಂತೆ ಮನೆಯ ಮಾಲೀಕರು ಗಾಬರಿಯಾಗಿದ್ದಾರೆ. ಯಾಕೆಂದರೆ ಅವರು ಖಾಲಿ ಇರುವ ಮತ್ತೊಂದು ಮನೆಯನ್ನು ಯಾರಿಗೂ ಕೊಟ್ಟಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗಕ್ಕೆ ಆಗಮಿಸಿದ ಅವರು, ಮನೆ ಬೀಗ ಒಡೆದು ವಾಸವಾಗಿರುವ ವ್ಯಕ್ತಿಯನ್ನು ಯಾರಪ್ಪಾ ನೀನು? ಎಂದು ಕೇಳಿದರೆ ಇದು ನನ್ನದೇ ಮನೆ. ನಿಮಗೆ ಏನಾಗಬೇಕಿತ್ತು? ಎಂದು ಕೇಳಿದ್ದಾನೆ. ಈ ಮನೆ ಓನರ್ ನಾನು ಎಂದು ಜಯಮ್ಮ ಹೇಳಿದ್ದಾರೆ. ವ್ಯಕ್ತಿಯನ್ನು ಬೇರೆ ಪ್ರಶ್ನೆ ಮಾಡಿದಾಗ ಆತ ಅವರಿಗೆ ಮನೆಯ ಕರೆಂಟ್ ಬಿಲ್ ಕೊಟ್ಟಿದ್ದಾನೆ. ಕರೆಂಟ್ ಬಿಲ್ ನೋಡಿ ಮನೆಯ ಮಾಲೀಕರಿಗೆ ಶಾಕ್ ಆಗಿದೆ. ಏಕೆಂದರೆ ಆ ಮನೆಯ ವಾಸವಾಗಿರುವ ವ್ಯಕ್ತಿಯ ಹೆಸರಿನಲ್ಲೇ ಕರೆಂಟ್ ಬಿಲ್ ಇದೆ.

ಮನೆ ಖರೀದಿ ಮಾಡಿದಾಗ ಜಯಮ್ಮ ವಿದ್ಯುತ್ ಸಂಪರ್ಕವನ್ನೂ ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿಕೊಂಡಿದ್ದರು. ಈಗ ನೋಡಿದರೆ ಟ್ವಿನ್ ಹೌಸ್‌ನಲ್ಲಿ ಒಂದು ಮನೆಯ ಕರೆಂಟ್ ಬಿಲ್ ಬೇರೆಯವರ ಹೆಸರಿನಲ್ಲಿದೆ. ಕೆದಕಿದಾಗ ಫೋರ್ಜರಿ ಸಹ ಮಾಡಿರುವುದು ಗೊತ್ತಾಗಿದೆ. ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.