Home News ಹಿಂದು ಯುವತಿಗೆ ಸಾಲ ನೀಡಿ ಮಂಚಕ್ಕೆ ಕರೆದ ಅನ್ಯಕೋಮಿನ ಯುವಕ | ಹಿಂ.ಜಾ.ವೇ.ಯಿಂದ ಆರೋಪಿ ಪೊಲೀಸರ...

ಹಿಂದು ಯುವತಿಗೆ ಸಾಲ ನೀಡಿ ಮಂಚಕ್ಕೆ ಕರೆದ ಅನ್ಯಕೋಮಿನ ಯುವಕ | ಹಿಂ.ಜಾ.ವೇ.ಯಿಂದ ಆರೋಪಿ ಪೊಲೀಸರ ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

ಉಡುಪಿ : ಹಿಂದು ಯುವತಿಯೊಬ್ಬಳಿಗೆ ಅನ್ಯಕೋಮಿನ ಯುವಕನೊಬ್ಬ ಸಾಲ ನೀಡಿ ಮಂಚಕ್ಕೆ ಕರೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪತ್ತೊಂಜಿಕಟ್ಟೆಯಿಂದ ವರದಿಯಾಗಿದೆ. ಯುವತಿಯೊಂದಿಗೆ ಅನ್ಯಕೋಮಿನ ಯುವಕ ಇದ್ದಾನೆ ಎಂದು ತಿಳಿದ ಹಿಂ.ಜಾ.ವೇ.ಕಾರ್ಯಕರ್ತರು ಆರೋಪಿ ಸಾದಿಕ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಿಂದು ಯುವತಿಯೋರ್ವಳಿಗೆ 2 ವರ್ಷದ ಹಿಂದೆ ಸಾದಿಕ್ ಎಂಬಾತನ ಪರಿಚಯವಾಗಿದ್ದು, ಬಳಿಕ ಆತನಿಂದ ಸಾಲವಾಗಿ ರೂ. 15 ಸಾವಿರ ಪಡೆದಿರುತ್ತಾರೆ. ಕೆಲ ಸಮಯದ ಅನಂತರ ಸಾದಿಕ್ ಸಾಲ ವಾಪಾಸು ನೀಡುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಮೂರು ತಿಂಗಳ ಹಿಂದೆ ಕಾರ್ಕಳ ಪತ್ತೊಂಜಿಕಟ್ಟೆಯ ಒಂದು ಮನೆಗೆ ಕರೆದುಕೊಂಡು ಹೋದ ಸಾದಿಕ್ ಯುವತಿಯಲ್ಲಿ ಸಾಲ ವಾಪಾಸು ಕೊಡಬೇಕು. ಇಲ್ಲವಾದರೆ ತನ್ನ ಜೊತೆ ಮಲಗಿ ಲೈಂಗಿಕ ಸುಖ ಕೊಡಬೇಕು ಎಂದು ಬೆದರಿಕೆಯೊಡ್ಡಿರುತ್ತಾನೆ.

ಯುವತಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಮಾಡಿ ಬಳಿಕ ನಗ್ನ ಚಿತ್ರಗಳನ್ನು ಆತನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾದಿಕ್ ನಂತರದ ದಿನದಲ್ಲಿ ಕರೆ ಮಾಡಿ ತನ್ನ ಜೊತೆ ಮಲಗಲು ಬರಬೇಕು ಬರದಿದ್ದಲ್ಲಿ ಮೊಬೈಲಿನಲ್ಲಿ ತೆಗೆದ ಪೋಟೊವನ್ನು ನಿನ್ನ ಅಕ್ಕನ ಮೊಬೈಲಿಗೆ ಕಳುಹಿಸಿ ಮಾನ ಹರಾಜು ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದನು. ಅಲ್ಲದೇ ಅ. 5ರಂದು ರಾತ್ರಿ 11 ಗಂಟೆ ಸುಮಾರಿಗೆ ಸಾದಿಕ್ ಕರೆ ಮಾಡಿ ಅ. 6ರಂದು ಬೆಳಿಗ್ಗೆ ಪತ್ತೊಂಜಿಕಟ್ಟೆಯ ಮನೆಗೆ ಬರಬೇಕು ಬರದಿದ್ದರೆ ಕೆಲಸ ಮಾಡುವ ಪ್ಯಾಕ್ಟರಿಗೆ ಬಂದು ಮೊಬೈಲಿನಲ್ಲಿದ್ದ ಪೋಟೋವನ್ನು ಎಲ್ಲರಿಗೂ ತೋರಿಸುವುದಾಗಿ ಬೆದರಿಕೆ ಹಾಕಿದ ಕಾರಣ ಯುವತಿ ಹೆದರಿ ಪತ್ತೊಂಜಿಕಟ್ಟೆಯ ಮನೆಗೆ ಹೋದಾಗ ಮನೆಯಲ್ಲಿ ಒಬ್ಬನೇ ಇದ್ದು ಬಿಗಿಯಾಗಿ ಹಿಡಿದುಕೊಂಡಿರುತ್ತಾನೆ. ಗಾಬರಿಗೊಂಡ ಆಕೆ ತಪ್ಪಿಸಿಕೊಂಡು ಮನೆಯಿಂದ ಹೊರಗಡೆ ಓಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯುವತಿಯೊಂದಿಗೆ ಅನ್ಯಕೋಮಿನ ಯುವಕ ಇದ್ದಾನೆ ಎಂದು ತಿಳಿದ ಹಿಂ.ಜಾ.ವೇ.ಕಾರ್ಯಕರ್ತರು ಆರೋಪಿ ಸಾದಿಕ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.