Home News ಹಿಜಾಬ್ ಗಾಗಿ ಪಟ್ಟು ಹಿಡಿದು ತರಗತಿಯಿಂದ ಹೊರನಡೆದ ಉಪನ್ಯಾಸಕಿಯರು!! ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆಯಿತು ಉಪನ್ಯಾಸಕಿಯರಿಂದ ಧರಣಿ

ಹಿಜಾಬ್ ಗಾಗಿ ಪಟ್ಟು ಹಿಡಿದು ತರಗತಿಯಿಂದ ಹೊರನಡೆದ ಉಪನ್ಯಾಸಕಿಯರು!! ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆಯಿತು ಉಪನ್ಯಾಸಕಿಯರಿಂದ ಧರಣಿ

Hindu neighbor gifts plot of land

Hindu neighbour gifts land to Muslim journalist

ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಹಿಜಾಬ್ ವಿವಾದ ರಾಜ್ಯದೆಲ್ಲೆಡೆ ಹಬ್ಬಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸದ್ಯ ಹಿಜಾಬ್ ಧರಿಸಿಯೇ ಕಾಲೇಜು ಪ್ರವೇಶಕ್ಕೆ ಪಟ್ಟು ಹಿಡಿದಿದ್ದ ವಿದ್ಯಾರ್ಥಿಗಳಿಗೆ ಉಪನ್ಯಾಸಕಿಯರೂ ಸಾಥ್ ನೀಡಿದ್ದಾರೆ.

ಶಿವಮೊಗ್ಗದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂತಹ ಬೆಳವಣಿಗೆ ಕಂಡು ಬಂದಿದ್ದು, ಹಿಜಾಬ್ ಧರಿಸಿ ಬೋಧಿಸುತ್ತಿದ್ದ ಮೂವರು ಉಪನ್ಯಾಸಕಿಯರಿಗೆ ಹಿಜಾಬ್ ತೆಗೆದಿಟ್ಟು ಪಾಠ ಮಾಡಲು ಕಾಲೇಜು ಪ್ರಾಂಶುಪಾಲರು ಸೂಚನೆ ನೀಡಿದ ಬೆನ್ನಲ್ಲೇ ಅವಕಾಶಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದಾರೆ.

ನಮಗೆ ಹಿಜಾಬ್ ಧರಿಸಿ ಪಾಠ ಮಾಡಲು ಅವಕಾಶ ನೀಡಿ, ಇಲ್ಲದಿದ್ದಲ್ಲಿ ಸುಪ್ರೀಂ ಕೋರ್ಟ್ ಆದೇಶ ಬರುವ ವರೆಗೆ ರಜೆ ನೀಡಿ ಎಂದು ಧರಣಿ ಕುಳಿತಿದ್ದು, ಇದರಿಂದ ಗೊಂದಲಕ್ಕೆ ಒಳಗಾದ ಪ್ರಾಂಶುಪಾಲರು ಸಮಸ್ಯೆಗೆ ಸೂಕ್ತ ನಿರ್ದೇಶನ, ಮಾರ್ಗದರ್ಶನ ನೀಡಲು ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾರೆ.