Home News Mysore : ಉದಯಗಿರಿ ಗಲಭೆಯ ಸೂತ್ರಧಾರಿ ಮೌಲ್ವಿಗೆ ಹೈಕೋರ್ಟ್ ಜಾಮೀನು !!

Mysore : ಉದಯಗಿರಿ ಗಲಭೆಯ ಸೂತ್ರಧಾರಿ ಮೌಲ್ವಿಗೆ ಹೈಕೋರ್ಟ್ ಜಾಮೀನು !!

Hindu neighbor gifts plot of land

Hindu neighbour gifts land to Muslim journalist

Mysore : ಮೈಸೂರಿನ ಉದಯಗಿರಿ ಗಲಭೆಯ ಸೂತ್ರಧಾರಿ ಆಗಿದ್ದ ಮೌಲ್ವಿ ಮುಷ್ತಾಕ್​ಗೆ (Maulvi Mufti Mustaq) ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಹೌದು, ವಿವಾದಿತ ಪೋಸ್ಟ್​ನಿಂದ ಉದಯಗಿರಿ (Udayagiri) ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪಿ ಮೌಲ್ವಿ ಮುಷ್ತಾಕ್​ಗೆ (Maulvi Mufti Mustaq) ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ, ಶುಕ್ರುವಾರ ಆದೇಶ ಹೊರಡಿಸಿದೆ.

ಮೈಸೂರಿನ ಉದಯಗಿರಿ ಗಲಾಟೆ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಠಾಣೆ, ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ ದಾಂಧಲೆ ಮಾಡಲಾಗಿತ್ತು. ಮೈಸೂರು ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಗೊಂಡ 12 ಗಂಟೆಯಲ್ಲೇ 8 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಬಂಧಿತರೆಲ್ಲರೂ ಉದಯಗಿರಿ ಅಕ್ಕಪಕ್ಕದ ಬಡವಾಣೆಗಳ ನಿವಾಸಿಗಳಾಗಿದ್ದರು.

ಗಲಭೆ ವೇಳೆ ಮೌಲ್ವಿ ಮುಷ್ತಾಕ್ ಪ್ರಚೋದನೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಮುಸ್ಲಿಂ ಯುವಕರು ಕಲ್ಲು ತೂರಲು ಪ್ರೇರೇಪಣೆ ಮಾಡಿದ್ದ ಆರೋಪ ಹೊತ್ತಿದ್ದ. ಘಟನೆ ಬಳಿಕ ಆರೋಪಿ ನಾಪತ್ತೆಯಾಗಿದ್ದ. 11 ದಿನಗಳ ಬಳಿಕ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದರು.