Home News Bengaluru Diwali: ಹಸಿರುಪಟಾಕಿಗಳ ಹವಾ ಹೇಗಿದೆ ನೋಡಿ! ದರ ಎಷ್ಟಿದೆ ಇಲ್ಲಿದೆ ವಿವರ

Bengaluru Diwali: ಹಸಿರುಪಟಾಕಿಗಳ ಹವಾ ಹೇಗಿದೆ ನೋಡಿ! ದರ ಎಷ್ಟಿದೆ ಇಲ್ಲಿದೆ ವಿವರ

Hindu neighbor gifts plot of land

Hindu neighbour gifts land to Muslim journalist

Bengaluru Diwali: ಸಿಲಿಕಾನ್ ಸಿಟಿಯಲ್ಲಿ ದೀಪದ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.‌ ಇದರ ಬೆನ್ನಲ್ಲೇ ಪಟಾಕಿ ಖರೀದಿಸಲು ಬೆಂಗಳೂರಿಗರು ಕುಟುಂಬ ಸಮೇತ ಪಟಾಕಿ ಸ್ಟಾಲ್​ಗಳಿಗೆ ಭೇಟಿ ಕೊಡುತ್ತಿದ್ದಾರೆ. ಬೆಂಗಳೂರಿನ ಸ್ಟಾಲ್​ಗಳಲ್ಲಿ ಯಾವ್ಯಾವ ಪಟಾಕಿಗಳು ಲಭ್ಯವಿವೆ? ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ಸದ್ಯ ದೀಪಾವಳಿ ಹಬ್ಬದ ಸಲುವಾಗಿ ಬೆಂಗಳೂರಿನ 456 ಮೈದಾನಗಳಲ್ಲಿ ಪಟಾಕಿ ಸ್ಟಾಲ್ ತೆರೆಯಲು ವ್ಯಾಪರಸ್ಥರಿಗೆ ಬಿಬಿಎಂಪಿ ಅನುವು ಮಾಡಿಕೊಟ್ಟಿದ್ದು, ಹೀಗಾಗಿ ನಗರದ ಏಳು ವಲಯಗಳ ಎಲ್ಲಾ ಗ್ರೌಂಡ್​ಗಳಲ್ಲಿಯೂ ಪಟಾಕಿ ಸ್ಟಾಲ್​ಗಳನ್ನು ತೆರೆಯಲಾಗುತ್ತಿದ್ದು, ಮತ್ತೊಂದೆ ಪಟಾಕಿ ಗೋದಾಮುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ.

ಅವಘಡ ತಡೆಗೆ ಕಠಿಣ ನಿಯಮ
ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚಿಸಲಾಗಿದೆ. ನಿಯಮಗಳಿಗೆ ಅನುಗುಣವಾಗಿ ಪಟಾಕಿ ಸ್ಟಾಲ್ ತೆರೆಯಲಾಗಿದ್ದು, ಹಸಿರು ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿ ನೀಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಈ ವರ್ಷ ಪಟಾಕಿ ಬೆಲೆ ಕೊಂಚ ಜಾಸ್ತಿಯಾಗಿದೆ. ಇನ್ನು ಈ ವರ್ಷ ಕೂಡ ಹೆಚ್ಚು ಹಸಿರು ಪಟಾಕಿಗಳಿಗಷ್ಟೇ ವ್ಯಾಪಾರಸ್ಥರು ಒತ್ತು ನೀಡಿದ್ದಾರೆ.

ಯಾವ ಪಟಾಕಿಗೆ ಎಷ್ಟು ದರ?
ಸುಸುರಬತ್ತಿ – 100 ರೂ.
ಸ್ಟಾಂಡರ್ಡ್ – 1200 ರೂ.
ಫ್ಲವರ್ ಪಾಟ್ -660 ರೂ.
ನೆಲಚಕ್ರ – 350 ರೂ.
ಲಕ್ಷ್ಮಿ ಪಟಾಕಿ – 1500- 2000 ರೂ.
ಬಿಜಿಲಿ ಪಟಾಕಿ – 250 – 350 ರೂ.

ಪಟಾಕಿಗಳ ಬೆಲೆ ಜಾಸ್ತಿಯಾದರೂ ಕೂಡ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇನ್ನು ಜನ ಹಸಿರುಪಟಾಕಿ ಇರುವ ಚಿಹ್ನೆಗಳನ್ನು ನೋಡಿಯೇ ಖರೀದಿಸುತ್ತಿದ್ದಾರೆ. ಒಟ್ಟಿನಲ್ಲಿ ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಭರದ ಸಿದ್ಧತೆ ಶುರುವಾಗಿದೆ.