Home News Helmet Rules : ಬೈಕ್ ಸವಾರರೇ‌ ಇಲ್ಲಿ ಕೇಳಿ! ಹೆಲ್ಮೆಟ್ ಧರಿಸದಿದ್ದರೆ ಬೀಳುತ್ತೆ ಭಾರೀ ದಂಡ!

Helmet Rules : ಬೈಕ್ ಸವಾರರೇ‌ ಇಲ್ಲಿ ಕೇಳಿ! ಹೆಲ್ಮೆಟ್ ಧರಿಸದಿದ್ದರೆ ಬೀಳುತ್ತೆ ಭಾರೀ ದಂಡ!

Helmet Rules

Hindu neighbor gifts plot of land

Hindu neighbour gifts land to Muslim journalist

Helmet Rules: ಇತ್ತೀಚೆಗೆ ಟ್ರಾಫಿಕ್ ರೂಲ್ಸ್ (traffic rules) ಬ್ರೇಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸಾಕಷ್ಟು ಜನರು ಹೆಲ್ಮೆಟ್ (helmet) ಧರಿಸೋದೇ ಇಲ್ಲ. ಇವರನ್ನು ಹಿಡಿಯುವುದಕ್ಕೆಂದೇ ಅಲ್ಲಲ್ಲಿ ಟ್ರಾಫಿಕ್ ಪೊಲೀಸ್ ಗಳು (traffic police) ಇರುತ್ತಾರೆ. ಜೊತೆಗೆ ದಂಡವೂ ವಿಧಿಸುತ್ತಾರೆ. ಇದೀಗ ಸಂಚಾರ ಪೊಲೀಸರು, ಬೆಂಗಳೂರು ನಗರ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ನಿಗಾ ಇಡಲು ಹೈಡೆಪಿನೇಷನ್ ಕ್ಯಾಮೆರಾ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸದ್ಯ ಬೈಕ್ ಸವಾರರೇ‌, ಹೆಲ್ಮೆಟ್ ಧರಿಸದಿದ್ದರೆ (Helmet Rules) ಭಾರೀ ದಂಡ ಬೀಳೋದು ಖಂಡಿತ!!.

ಬೈಕ್ ಮುಂಬದಿ ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ತಲಾ 500 ರೂ. ನಂತೆ 1 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ (Bengaluru) ಹೆಲ್ಮೆಟ್ ನಿಯಮ ಉಲ್ಲಂಘಿಸಿದ ಬೈಕ್ ಸವಾರರ ಬರೋಬ್ಬರಿ 10 ಲಕ್ಷ ಕೇಸ್ ದಾಖಲಾಗಿದೆ.

ನಗರ ಸಂಚಾರ ಪೊಲೀಸರ ಅಂಕಿ ಅಂಶಗಳ ಪ್ರಕಾರ, ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ 8,84,166 ಗಳು ದಾಖಲಾಗಿವೆ. ಹಾಗೆಯೇ
ಬೈಕ್ ಹಿಂಬದಿ ಸವಾರರ ವಿರುದ್ಧ 1,66,000 ಕೇಸ್ ಗಳು ದಾಖಲಾಗಿವೆ ಎನ್ನಲಾಗಿದೆ. ಇದರಲ್ಲಿ ಅರ್ಧ ಹೆಮ್ಮೆಟ್‌ ಧರಿಸಿದವರ ವಿರುದ್ಧ ಕೂಡ ಪ್ರಕರಣ ದಾಖಲಾಗಿವೆ ಎಂದು ಹೇಳಲಾಗಿದೆ. ಬೈಕ್ ಸವಾರರೇ‌, ಪ್ರಾಣ ರಕ್ಷಣೆಯ ಹೆಲ್ಮೆಟ್ ಧರಿಸಿ, ಇದು ಉತ್ತಮ.