Home News Puttur: ನಾನು ಶಾಸಕನಾಗಬೇಕೆಂದು ಹೆಚ್ಚು ಆಸೆಪಟ್ಟವರು ಪುತ್ತೂರಿನ ಬಿಜೆಪಿ ಅಧ್ಯಕ್ಷರು:ಶಾಸಕ ಅಶೋಕ್ ರೈ

Puttur: ನಾನು ಶಾಸಕನಾಗಬೇಕೆಂದು ಹೆಚ್ಚು ಆಸೆಪಟ್ಟವರು ಪುತ್ತೂರಿನ ಬಿಜೆಪಿ ಅಧ್ಯಕ್ಷರು:ಶಾಸಕ ಅಶೋಕ್ ರೈ

Ashok Rai

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರು ಸಮೀಪ ಚಂದಳಿಕೆ (Puttur) ಯುವ ಕೇಸರಿ ಸಂಘಟನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು, “ನಾನು ಶಾಸಕನಾಗಬೇಕೆಂದು ಅತೀ ಹೆಚ್ಚು ಆಸೆಪಟ್ಟವರಲ್ಲಿ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಕೂಡಾ ಒಬ್ಬರಾಗಿದ್ದರು, ಅವರ ಆಸೆಯನ್ನು ದೇವರು ಸ್ವೀಕರಿಸಿದ್ದಾನೆ” ಎಂದು ಹೇಳಿದರು.

” ಅದಕ್ಕೂ ಮೀರಿ ದಯಾನಂದರು ಮತ್ತು ನಾನು 20 ವರ್ಷದ ಗೆಳೆತನ. ನಾನು ಬಿಜೆಪಿಯಲ್ಲಿರುವಾಗ ನನ್ನಲ್ಲಿ ಅತೀವ ಪ್ರೀತಿಯನ್ನು ಹೊಂದಿದ್ದರು. ನನ್ನ ಕಚೇರಿಗೆ ಆಗಾಗ ಭೇಟಿ ನೀಡಿ ನನಗೆ ಸಲಹೆ ಕೊಡುವ ಕೆಲಸವನ್ನು ಮಾಡುತ್ತಿದ್ದರು. ಏನಾದರೂ ಸರಿ ಅಶೋಕಣ್ಣ ನೀವು ಪುತ್ತೂರಿನ ಶಾಸಕರಾಗಲೇಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಅವರ ಪಕ್ಷದವರು ನನಗೆ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ನನಗೆ ಅವಕಾಶ ನೀಡಿದ್ದರಿಂದ ನಾನು ಇಂದು ಶಾಸಕನಾಗಿದ್ದೇನೆ. ಅದಲ್ಲದೆ ಬಹುಷಃ ದಯಾನಂದ ಉಜಿರೆಮಾರು ಅವರು ನನಗೆ ವೋಟು ಹಾಕಿರಬಹುದು ಎಂಬ ನಂಬಿಕೆಯೂ ಇದೆ” ಎಂದು ಶಾಸಕರು ಹೇಳಿದರು.