Home News Michael Felps: ಈತ ಒಲಿಂಪಿಕ್ಸ್‌ನಲ್ಲಿ ಬೇಟೆಯಾಡಿದ್ದು ಬರೋಬ್ಬರಿ 28 ಪದಕ: ವಿಶ್ವದ 162 ದೇಶಗಳು ಒಟ್ಟಾಗಿ...

Michael Felps: ಈತ ಒಲಿಂಪಿಕ್ಸ್‌ನಲ್ಲಿ ಬೇಟೆಯಾಡಿದ್ದು ಬರೋಬ್ಬರಿ 28 ಪದಕ: ವಿಶ್ವದ 162 ದೇಶಗಳು ಒಟ್ಟಾಗಿ ಇಷ್ಟು ಚಿನ್ನದ ಪದಕ ಗೆದ್ದಿಲ್ಲ!

Michael Felps

Hindu neighbor gifts plot of land

Hindu neighbour gifts land to Muslim journalist

Michael Felps: ಒಲಿಂಪಿಕ್ಸ್ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾ ಕೂಟದಲ್ಲಿ ಪದಕ್ಕಾಗಿ ಸೆಣಸಾಡುವ ಕ್ರೀಡಾಪಟುಗಳು 200ಕ್ಕೂ ಹೆಚ್ಚು ರಾಷ್ಟ್ರಗಳಿಂದ ಬರುತ್ತಾರೆ. ಬಹುರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆಲ್ಲೋದು ಅಂದ್ರೆ ಅದು ಸುಲಭದ ಮಾತಲ್ಲ. ಆದರೆ ಇಲ್ಲೊಬ್ಬ ಕ್ರೀಡಾಪಟುವಿಗೆ ಪದಕ ಗೆಲ್ಲೋದು ಅದ್ರೆ ಅವನು ನೀರಿನಲ್ಲಿ ಈಜಿದಷ್ಟೇ ಸಲೀಸು. ಹೌದು ಈತ ಗೆದ್ದಿರುವ ಮೆಡಲ್ ಒಂದಲ್ಲ, ಎರಡಲ್ಲ ಬರೋಬ್ಬರಿ 28.

ಈತ ಅಮೆರಿಕದ ಮಾಜಿ ಈಜುಗಾರ ಮೈಕೆಲ್ ಫೆಲ್ಪ್ಸ್. ಅವರು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿಲ್ಲವಾದರು ಇವರ ಪದಕ ಬೇಟೆಯ ದಾಖಲೆ ಮಾತ್ರ ಹಾಗೆ ಇದೆ. ಅವರ ಈ ದಾಖಲೆಯನ್ನು ಯಾರೂ ಮುರಿಯದ ರೀತಿಯಲ್ಲಿ ಬರೆದಿದ್ದಾರೆ. ಒಟ್ಟು 28 ಒಲಿಂಪಿಕ್ಸ್ ಪದಕಗಳನ್ನು ತಮ್ಮದಾಗಿಸಿಕೊಂಡಿರುವ ಅವರ ಖಾತೆಯಲ್ಲಿ 23 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಮೆಡಲ್‌ಗಳಿವೆ. ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಆಟಗಾರನೊಬ್ಬ ಗೆದ್ದಿರುವ ಅತ್ಯಧಿಕ ಪದಕಗಳು ಎಂಬ ಐತಿಹಾಸಿಕ ದಾಖಲೆ ಇದಾಗಿದೆ.

ಫೆಲ್ಪ್ಸ್ ಗೆದ್ದ ಚಿನ್ನದ ಪದಕಗಳ ಸಂಖ್ಯೆಯನ್ನು ವಿಶ್ವದ 162 ದೇಶಗಳ ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕಗಳೊಂದಿಗೆ ಹೋಲಿಸಿದರೆ ಅವರದ್ದೇ ಪದಕಗಳು ಹೆಚ್ಚಾಗುತ್ತವೆ. ನಮ್ಮದೇಶ ಭಾರತ ಒಲಿಂಪಿಕ್ ಇತಿಹಾಸದಲ್ಲಿ ಈ ವರೆಗೆ ಗೆದ್ದ ಒಟ್ಟು ಚಿನ್ನದ ಪದಕ ಕೇವಲ 10. ಫೆಲ್ಪ್ಸ್ ಏಕಾಂಗಿಯಾಗಿ ಗೆದ್ದಿರುವ 23 ಚಿನ್ನದ ಪದಕಗಳ ಮುಂದೆ ಇದು ಏನೂ ಅಲ್ಲ. ಮೈಕೆಲ್ ಫೆಲ್ಪ್ಸ್ ಅವರು ತನ್ನ 15ನೇ ವಯಸ್ಸಿನಲ್ಲೇ ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಿದ್ರು. ಸಿಡ್ನಿಯಲ್ಲಿ ನಡೆದ 2000 ಒಲಿಂಪಿಕ್ಸ್‌ನಲ್ಲಿ ಇವರು ಮೊದಲು ಭಾಗವಹಿಸಿದ್ದು. ಅಲ್ಲಿಂದ ಆರಂಭವಾದ ಚೊಚ್ಚಲ ಒಲಿಂಪಿಕ್ಸ್‌ ನಲ್ಲಿ ಫೆಲ್ಪ್ಸ್ಗೆ ಯಾವುದೇ ಪದಕ ಗೆಲ್ಲಲು ಆಗಲಿಲ್ಲ. 200 ಮೀಟರ್ ಬಟರ್ಫ್ಲೈ ಈಜು ಸ್ಪರ್ಧೆಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಕೇವಲ ಪದಕ ಮಾತ್ರ ಗೆಲ್ಲುವಲ್ಲಿ ಇವರು ಯಶಸ್ವಿಯಾಗದೆ ತನ್ನ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಸದ್ಯ ಫೆಲ್ಪ್ಸ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 100 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ 837 ಕೋಟಿ. ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಇವರೂ ಕೂಡ ಇದ್ದಾರೆ.