Home News Harry Potter: ‘ಹ್ಯಾರಿ ಪಾಟರ್’ ಚಿತ್ರದ ಖ್ಯಾತ ನಟಿ ನಿಧನ!

Harry Potter: ‘ಹ್ಯಾರಿ ಪಾಟರ್’ ಚಿತ್ರದ ಖ್ಯಾತ ನಟಿ ನಿಧನ!

Hindu neighbor gifts plot of land

Hindu neighbour gifts land to Muslim journalist

Harry Potter: ‘ಹ್ಯಾರಿ ಪಾಟರ್’ (Harry Potter) ಹಾಲಿವುಡ್ ಚಿತ್ರದ ಖ್ಯಾತ ನಟಿ ಮ್ಯಾಗಿ ಸ್ಮಿತ್ 89ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಹಾಲಿವುಡ್‌ನ ಜನಪ್ರಿಯ ನಟಿ ಆಗಿದ್ದ ಮ್ಯಾಗಿ ಸ್ಮಿತ್ (Maggie Smith) ಅವರು ಇಬ್ಬರೂ ಮಕ್ಕಳು ಮತ್ತು 5 ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಾಹಿತಿ ಪ್ರಕಾರ ಮ್ಯಾಗಿ ಸ್ಮಿತ್ ಅವರು ಸೆ.27ರಂದು ನಿಧನರಾಗಿದ್ದು, ಈ ವಿಚಾರವನ್ನು ಮಕ್ಕಳು ಅಧಿಕೃತವಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಂದಹಾಗೆ, ಆಸ್ಕರ್ ಪ್ರಶಸ್ತಿ ವಿಜೇತ ನಟಿ ಮ್ಯಾಗಿ ಸ್ಮಿತ್ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 60ರ ದಶಕದಿಂದ ಸಿನಿಮಾಗಳಲ್ಲಿ ನಟಿಸುವುದ್ದಕ್ಕೆ ಆರಂಭಿಸಿದ್ದ ಮ್ಯಾಗಿ ಸ್ಮಿತ್ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಜನರ ಮನಸು ಗೆದ್ದಿದ್ದಾರೆ.