Home News Congress: ಮಹಿಳೆಗೆ ಖಾಸಗಿ ಅಂಗ ತೋರಿಸಿ ಕಾಂಗ್ರೆಸ್ ನಾಯಕನಿಂದ ಕಿರುಕುಳ: ವಿಡಿಯೋ ವೈರಲ್

Congress: ಮಹಿಳೆಗೆ ಖಾಸಗಿ ಅಂಗ ತೋರಿಸಿ ಕಾಂಗ್ರೆಸ್ ನಾಯಕನಿಂದ ಕಿರುಕುಳ: ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Congress: ಉತ್ತರ ಪ್ರದೇಶದ ಕಾಂಗ್ರೆಸ್‌ (Congress) ನಾಯಕ ಯುನುಸ್ ಚೌಧರಿ (Yunus Chaudhary) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ (Viral Video).

ಹೌದು, ಉತ್ತರ ಪ್ರದೇಶದ ಬಾಗ್ಪತ್‌ನ (Baghpat) ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಯುನುಸ್ ಚೌಧರಿ ತಮ್ಮ ಖಾಸಗಿ ಅಂಗವನ್ನು ಮಹಿಳೆಯ ಮುಂದೆ ಪ್ರದರ್ಶಿಸಿ ಆಕೆಗೆ ಕಿರುಕುಳ ನೀಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ

https://x.com/SachinGuptaUP/status/1852641282591473678

ಸಚಿನ್ ಗುಪ್ತಾ ಎನ್ನುವವರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ದಲ್ಲಿ ಯುನುಸ್ ಚೌಧರಿ ಮೊದಲು ಮಹಿಳೆಗೆ ತನ್ನ ಮರ್ಮಾಂಗವನ್ನು ತೋರಿಸಿ, ನಂತರ ಆಕೆ ಜತೆ ಅಸಭ್ಯವಾಗಿ ನಡೆದುಕೊಂಡಿರುವುದು, ಮಹಿಳೆ ತನ್ನನ್ನು ಹೋಗಲು ಬಿಡುವಂತೆ ಕೇಳಿದರೂ ಯುನುಸ್ ಚೌಧರಿ ಆಕೆಯನ್ನು ತಡೆಯುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಇದೀಗ ಈ ವಿಡಿಯೊ ವೈರಲ್‌ ಆಗಿದ್ದು ಕಾಂಗ್ರೆಸ್‌ಗೆ ಮುಜುಗರ ತಂದಿದೆ. ಈ ಬಗ್ಗೆ ಯುನುಸ್ ಚೌಧರಿ ಪ್ರತಿಕ್ರಿಯಿಸಿ, ಇದು ರಾಜಕೀಯ ವಿರೋಧಿಗಳ ಪಿತೂರಿ ಎಂದು ದೂರಿದ್ದಾರೆ. ಎಡಿಟ್ ಮಾಡಿರುವ ವಿಡಿಯೊ ಇದಾಗಿದ್ದು ತನ್ನನ್ನು ರಾಜಕೀಯವಾಗಿ ಮುಗಿಸಲು ವಿರೋಧಿಗಳು ನಡೆಸಿದ ಪಿತೂರಿ ಇದು ಎಂದು ಆರೋಪಿಸಿದ್ದಾರೆ. ಇನ್ನೂ ಅಧಿಕೃತವಾಗಿ ದೂರು ದಾಖಲಿಸದಿದ್ದರೂ ವಿಡಿಯೊವನ್ನು ಪ್ರಸಾರ ಮಾಡಿದವರನ್ನು ಗುರುತಿಸುವಂತೆ ಪೊಲೀಸರಿಗೆ ಮೌಖಿಕವಾಗಿ ವಿನಂತಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಅಲ್ಲದೇ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿ, ತನಿಖೆ ನಡೆಸಲಾಗುವುದು ಮತ್ತು ಅದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಪಕ್ಷದ ಹೈಕಮಾಂಡ್ ತ್ವರಿತ ಕ್ರಮ ಕೈಗೊಂಡು ಜಿಲ್ಲಾಧ್ಯಕ್ಷ ಯೂನುಸ್ ಚೌಧರಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿದೆ.