Home News ಬೊಮ್ಮಾಯಿ ತವರೂರು ಹಾನಗಲ್ ನ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತೇ ಪವರ್ ಸ್ಟಾರ್ ಪುನೀತ್...

ಬೊಮ್ಮಾಯಿ ತವರೂರು ಹಾನಗಲ್ ನ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವು !??

Hindu neighbor gifts plot of land

Hindu neighbour gifts land to Muslim journalist

ಹುಬ್ಬಳ್ಳಿ:ಹಾನಗಲ್ ನಲ್ಲಿ ಬಿಜೆಪಿ ಸೋಲು ಕಂಡಿದ್ದಕ್ಕೆ ಹಲವಾರು ಕಾರಣಗಳು ಕೇಳಿ ಬರುತ್ತಿದೆ. ಇದೀಗ ಸಿಎಂ ಬೊಮ್ಮಾಯಿ ತನ್ನ ತವರು ಜಿಲ್ಲೆಯಲ್ಲಿ ಸೋಲಿಗೆ ಪುನೀತ್ ರಾಜಕುಮಾರ್ ಸಾವೇ ಕಾರಣವಾಯಿತೇ ಎಂಬ ಪ್ರಶ್ನೆ ಹುಟ್ಟುತ್ತಿದೆ.

ಹೌದು.ಅಕ್ಟೋಬರ್ 30 ರಂದು ಹಾನಗಲ್ ವಿಧಾನಸಭೆ ಉಪ ಚುನಾವಣೆಗೆ ಮತದಾನ ನಡೆದಿತ್ತು,ಅಂದೇ ನಟ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದ್ದರು. ಇದೇ ಕಾರಣದಿಂದ ಮತದಾರರು ಮತ ನೀಡದೆ ಸೋಲು ಕಂಡಿತೇ ಎಂಬ ಕಾರಣ ಕೇಳಿಬರುತ್ತಿದೆ.

ನಟ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಅಚ್ಚು ಕಟ್ಟಾಗಿ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಜನತೆಯ ಹೃದಯ ಗೆದ್ದಿದ್ದಾರೆ.ಆದರೆ ಮತ್ತೊಂದೆಡೆ ತಮ್ಮ ತವರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಲ್ಲಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರು ಗ್ರಾಮಸ್ಥರ ಮನೆ ಬಳಿಗೆ ವಾಹನ ತೆಗೆದುಕೊಂಡು ಹೋಗಿ ಮತದಾನ ಮಾಡುವಂತೆ ಹೇಳಿದ್ದಾರೆ.’ನಮ್ಮ ನೆಚ್ಚಿನ ನಾಯಕ ಸಾವನ್ನಪ್ಪಿದ್ದಾನೆ ನಮಗೆ ಮತದಾನ ಮಾಡಲು ಮೂಡ್ ಇಲ್ಲ’ ಎಂದು ಗ್ರಾಮಸ್ಥರು ಹೇಳಿ ಕಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಜನರನ್ನು ಕರೆದುಕೊಂಡು ಬಂದು ಮತದಾನ ಮಾಡಿಸುವುದು ಕಾರ್ಯಕರ್ತರಿಗೆ ದೊಡ್ಡ ಸವಾಲಾಗಿತ್ತು, ವಿಶೇಷವಾಗಿ ಯುವಕರು ಮತ್ತು ಹಿರಿಯರು, ಇದರ ಜೊತೆಗೆ ಹಲವು ಹಿರಿಯ ಮಹಿಳೆಯರು ಕೂಡ ಮತದಾನ ಮಾಡಲು ನಿರಾಕರಿಸಿದರು.ಪುನೀತ್ ರಾಜಕುಮಾರ್ ನಿಧನದ ನಂತರ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳನ್ನು ನೋಡುತ್ತಾ ಜನರು ಕುಳಿತಿದ್ದರು, ಇದರ ಪರಿಣಾಮ ಮೂರು ದಿನಗಳ ಕಾಲ ಟಿವಿಯ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಎಲ್ಲರೂ ಬಂದು ಮತದಾನ ಮಾಡಿದ್ದರೇ ಬಿಜೆಪಿ ಗೆಲುವು ಸಾಧಿಸುತ್ತಿತ್ತು ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.