Home News GST ಕಡಿತ ಎಫೆಕ್ಟ್ – ಹಾಲಿನ ಬೆಲೆಯಲ್ಲಿ 2 ರೂ, ತುಪ್ಪದ ಬೆಲೆ 30 ರೂ...

GST ಕಡಿತ ಎಫೆಕ್ಟ್ – ಹಾಲಿನ ಬೆಲೆಯಲ್ಲಿ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ !!

Hindu neighbor gifts plot of land

Hindu neighbour gifts land to Muslim journalist

GST: ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣಿಯನ್ನು ನಡೆಸಿದ್ದು, ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಈಗಾಗಲೇ ಕಾರು ಮತ್ತು ಮೊಬೈಲ್ ಕಂಪನಿಗಳು ತಮ್ಮ ಬೆಲೆ ವ್ಯತ್ಯಾಸವನ್ನು ಘೋಷಿಸಿಕೊಂಡಿದೆ. ಇದರ ಬೆನ್ನಲ್ಲೇ ಹಾಲು ಹಾಗೂ ತುಪ್ಪದ ದರದಲ್ಲಿ ಬೆಲೆ ಇಳಿಕೆಯಾಗಿದೆ.

ಹೌದು, ಎನ್​ಡಿಡಿಬಿ (ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್) ಅಂಗಸಂಸ್ಥೆ ಹಾಗೂ ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿಯು (Mother Dairy) ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಇತ್ಯಾದಿ ಉತ್ಪನ್ನಗಳ ಬೆಲೆಯನ್ನು ಮದರ್ ಡೈರಿ ಕಡಿಮೆಗೊಳಿಸಿದೆ.

ಮದರ್ ಡೈರಿಯ ಉತ್ಪನ್ನಗಳ ಬೆಲೆ ವಿವರ

ಒಂದು ಲೀಟರ್ ಯುಎಚ್​ಟಿ ಹಾಲು (ಟೆಟ್ರಾ ಪ್ಯಾಕ್): 77 ರೂನಿಂದ 75 ರೂಗೆ ಇಳಿಕೆ

450 ಎಂಎಲ್ ಯುಎಚ್​ಟಿ ಡಬಲ್ ಟೋನ್ಡ್ ಹಾಲು: 33 ರೂನಿಂದ 32 ರೂಗೆ ಇಳಿಕೆ

ಪನೀರ್ 200 ಗ್ರಾಮ್ ಪ್ಯಾಕ್ ಬೆಲೆ 95 ರೂನಿಂದ 92 ರೂಗೆ ಇಳಿಕೆ

ಪನೀರ್ 400 ಗ್ರಾಮ್ ಪ್ಯಾಕ್: 180 ರೂನಿಂದ 174 ರೂಗೆ ಇಳಿಕೆ

ಮಲೈ ಪನೀರ್ 200 ಗ್ರಾಮ್ ಪ್ಯಾಕ್: 100 ರೂನಿಂದ 97 ರೂಗೆ ಇಳಿಕೆ

ಬೆಣ್ಣೆ 500 ಗ್ರಾಮ್ ಪ್ಯಾಕ್: 305 ರೂನಿಂದ 285 ರೂಗೆ ಇಳಿಕೆ

ಬೆಣ್ಣೆ 100 ಗ್ರಾಮ್ ಪ್ಯಾಕ್: 62 ರೂನಿಂದ 58 ರೂಗೆ ಇಳಿಕೆ

ಮಿಲ್ಕ್​ಶೇಕ್ 180 ಎಂಎಲ್ ಪ್ಯಾಕ್: 30 ರೂನಿಂದ 28 ರೂಗೆ ಇಳಿಕೆ

ತುಪ್ಪ 1 ಲೀಟರ್ ಕಾರ್ಟನ್ ಪ್ಯಾಕ್: 675 ರೂನಿಂದ 645 ರೂಗೆ ಇಳಿಕೆ

ತುಪ್ಪ 1 ಲೀಟರ್ ಟಿನ್ ಪ್ಯಾಕ್: 750 ರೂನಿಂದ 720 ರೂಗೆ ಇಳಿಕೆ

ತುಪ್ಪ 1 ಲೀಟರ್ ಪೌಚ್: 675 ರೂನಿಂದ 645 ರೂಗೆ ಇಳಿಕೆ

ಹಸುವಿನ ತುಪ್ಪ 500 ಎಂಎಲ್ ಬಾಟಲ್: 380 ರೂನಿಂದ 365 ರೂಗೆ ಇಳಿಕೆ

ಗಿರ್ ಹಸುವಿನ ತುಪ್ಪ, 500 ಎಂಎಲ್ ಪ್ಯಾಕ್: 999 ರೂನಿಂದ 984 ರೂಗೆ ಇಳಿಕೆ

ಇದನ್ನೂ ಓದಿ:Mobile Number : ಮೊಬೈಲ್ ನಂಬರ್ ಯಾಕೆ 10 ಸಂಖ್ಯೆಗಳು ಇರುತ್ತವೆ? 99% ಜನರಿಗೆ ಈ ವಿಷ್ಯ ಗೊತ್ತಿಲ್ಲ