Home News PWD: ಕಟ್ಟಡ ರೇಖೆ ಅಂತರ 6 ಮೀ.ಗೆ ನಿಗದಿಪಡಿಸಿ ಸರಕಾರ ಆದೇಶ

PWD: ಕಟ್ಟಡ ರೇಖೆ ಅಂತರ 6 ಮೀ.ಗೆ ನಿಗದಿಪಡಿಸಿ ಸರಕಾರ ಆದೇಶ

Hindu neighbor gifts plot of land

Hindu neighbour gifts land to Muslim journalist

Udupi (Kaup): ರಾಜ್ಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳ ರಸ್ತೆ ಭೂ ಗಡಿಯ ಅಂಚಿನಿಂದ ಕಟ್ಟಡಗಳ ರೇಖೆಯ ಅಂತರದ ವಿಷಯವಾಗಿ ಹಿಂದಿನ ಆದೇಶವನ್ನು ಪರಿಷ್ಕರಿಸಲಾಗಿದೆ. ಇದೀಗ ಇದನ್ನು ಆರು ಮೀ.ಗೆ ಸರಕಾರ ನಿಗದಿ ಪಡಿಸಿದೆ.

ಸಿಟಿ ಕಾರ್ಪೋರೇಷನ್‌, ಸಿಟಿ ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಪಂಚಾಯ್‌ ಮತ್ತು ಗ್ರಾಮ ಪಂಚಾಯತ್‌ ಪರಿಮಿತಿಗಳಲ್ಲಿ ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂ ಗಡಿಯ ಅಂಚಿನಿಂದ ಕಟ್ಟಡಗಳ ರೇಖೆಯ ಅಂತರವು ಆರು ಮೀ. ಆಗಿದ್ದು, ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳಿಗೆ 25 ಮೀ. ನಿಗದಿಮಾಡಲಾಗಿತ್ತು. ಇದು ಸಾರ್ವಜನಿಕರಿಗೆ ವಾಣಿಜ್ಯ ಕಟ್ಟಡ, ವಾಸ್ತವ್ಯ ಕಟ್ಟಡ ನಿರ್ಮಾಣ ಮಾಡಲು ಕಷ್ಟವಾಗಿತ್ತು.

ಈ ಕುರಿತು ಪರಿಶೀಲನೆ ಮಾಡಿದೆ ರಾಜ್ಯ ಸರಕಾರವು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಅವರ ಮೂಲಕ ಫೆ.17 ರಂದು ಸುತ್ತೋಲೆಯನ್ನು ಹೊರಡಿಸಿದೆ. ಅ.10,2024 ರಂದು ಹೊರಡಿಸಿದ್ದ ಹಿಂದಿನ ಆದೇಶವನ್ನು ಪರಿಷ್ಕರಿಸಿ 6 ಮೀ. ನಿಗದಿಪಡಿಸಿರುವುದರ ಆದೇಶವನ್ನು ರಾಜ್ಯ ಹೆದ್ದಾರಿಗಳ ಜೊತೆಗೆ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳಿಗೂ ವಿಸ್ತರಿಸಿರುವುದಾಗಿ ತಿಳಿಸಿದೆ.

ಈ ಆದೇಶವು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳಲ್ಲಿ ಬರುವ ಸಿಟಿ ಕಾರ್ಪೋರೇಷನ್‌, ಸಿಟಿ ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಪಂಚಾಯತ್‌ ಮತ್ತು ಗ್ರಾಮ ಪಂಚಾಯತ್‌ನ ಪ್ರತೀ ಗ್ರಾಮ ಠಾಣಾ ಪರಿಮಿತಿಗೂ ಈ ಆದೇಶ ಅನ್ವಯವಾಗಲಿದೆ. ಸಿಟಿ ಕಾರ್ಪೋರೇಷನ್‌ ಪರಿಮಿತಿಯನ್ನು 15 ಕಿ.ಮೀ. ದೂರವರೆಗೆ 12 ಮೀಟರ್‌ ವರೆಗೆ ಪರಿಷ್ಕರಿಸಿದೆ.