

Government Employees : ಕೆಲವು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರವು ಶೇಕಡ ಮೂರರಷ್ಟು ತುಟ್ಟಿಬತ್ತಿಯನ್ನು ಹೆಚ್ಚಿಸಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿತ್ತು. ಇದರ ಬೆನ್ನಲ್ಲೇ ಸರ್ಕಾರವು ಮತ್ತೆ ಸರ್ಕಾರಿ ನೌಕರರಿಗೆ ಹೊಸದೊಂದು ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ಇದೀಗ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, 70 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೊಂದಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 223 ಸಿಜಿಇ 2025, ದಿನಾಂಕ: 17.09.2025 ರಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ವಿವಿಧ ಯೋಜನೆಯಡಿಯಲ್ಲಿ ನೊಂದಾಯಿತಗೊಂಡಿರುವ ಖಾಸಗಿ ಆಸ್ಪತ್ರೆಗಳನ್ನು “ಭಾವಿತ ನೊಂದಾವಣಿ” ಎಂದು ಪರಿಗಣಿಸಿರುವುದರಿಂದ 186 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೊಂದಾವಣೆಗೊಳಿಸಲಾಗಿರುತ್ತದೆ.
ಮುಂದುವರೆದು, ಆಸ್ಪತ್ರೆಗಳು ಹೊಂದಿರಬೇಕಾದ ಮೂಲ ಸೌಕರ್ಯಗಳು ಹಾಗೂ ಇತರೆ ಮಾನದಂಡಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಪರಿಶೀಲಿಸಿಕೊಂಡು, ಆಸ್ಪತ್ರೆಗಳೊಂದಿಗೆ ಸೂಕ್ತ ಒಪ್ಪಂದ (MoU) ಮಾಡಿಕೊಳ್ಳುವ ಷರತ್ತಿಗೊಳಪಟ್ಟು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸಿರುವ ಅನುಬಂಧದಲ್ಲಿನ 70 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾವಣೆಗೊಳಿಸಲಾಗಿದೆ. ಸದರಿ ಅಧಿಸೂಚನೆಯನ್ನು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020, ದಿನಾಂಕ:02.04.2025 ರಲ್ಲಿ ನೀಡಿರುವ ಅಧಿಕಾರ ಪ್ರತ್ಯಾಯೋಜನೆಯ ಮೇರೆಗೆ ಹೊರಡಿಸಲಾಗಿದೆ.













