Home News Karnataka Assembly : ‘ಇ-ಖಾತಾ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ – ಸಧ್ಯದಲ್ಲೇ ‘ಅಕ್ರಮ ನಿವೇಶನ, ಮನೆ...

Karnataka Assembly : ‘ಇ-ಖಾತಾ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ – ಸಧ್ಯದಲ್ಲೇ ‘ಅಕ್ರಮ ನಿವೇಶನ, ಮನೆ ಸಕ್ರಮ’!!

Hindu neighbor gifts plot of land

Hindu neighbour gifts land to Muslim journalist

Karnataka Assembly : ಇ-ಖಾತಾ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಒಂದು ಹೊರ ಬಿದ್ದಿದ್ದು ಸದ್ಯದಲ್ಲೇ ಅಕ್ರಮ ನಿವೇಶನ, ಮನೆ ಸಕ್ರಮ ಆಗಲಿದೆ ಎಂದು ತಿಳಿದು ಬಂದಿದೆ.

ಹೌದು, ರಾಜ್ಯದ ಅಕ್ರಮ ನಿವೇಶನ, ಮನೆಗಳಿಗೆ ಇ-ಖಾತಾ ನೀಡುವ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿ ಮಸೂದೆಯನ್ನು ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ಸರ್ಕಾರ ಮಂಡಿಸಲಿದೆ. ಎರಡು ಸದನದಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದೇ ಆದರೇ ಗ್ರಾಮೀಣ ಭಾಗದ ಸಮಸ್ಯೆಯೇ ತೀರಿದಂತೆ ಆಗಲಿದೆ.

ಜೊತೆಗೆ ಗ್ರಾಮೀಣ ಹಾಗೂ ನಗರ ಭಾಗದ ಅಕ್ರಮ ನಿವೇಶನ, ಮನೆ ಮಾಲೀಕರಿಗೆ ಸಿಹಿಸುದ್ದಿ ಸಿಗಲಿದೆ. ಗ್ರಾಮೀಣ ಭಾಗದ ಕಂದಾಯ ಬಡಾವಣೆ, ಗ್ರಾಮ ಠಾಣೆ ವ್ಯಾಪ್ತಿಯ ಮನೆ, ನಿವೇಶನ ಸಕ್ರಮಕ್ಕೆ ಅವಕಾಶ ದೊರೆಯುವಂತಾಗಲಿದ್ದು, ಇ-ಖಾತಾ ಲಭ್ಯವಾಗಲಿದೆ.