Home News Kisan Samman Nidhi: ದಸರಾ ಹಬ್ಬದ ನಡುವೆ 9.5 ಕೋಟಿ ರೈತರಿಗೆ ಸಿಹಿ ಸುದ್ದಿ! ಹಣ...

Kisan Samman Nidhi: ದಸರಾ ಹಬ್ಬದ ನಡುವೆ 9.5 ಕೋಟಿ ರೈತರಿಗೆ ಸಿಹಿ ಸುದ್ದಿ! ಹಣ ಸಿಗದಿದ್ದರೆ ಏನು ಮಾಡಬೇಕು ಇಲ್ಲಿದೆ ನೋಡಿ!

Hindu neighbor gifts plot of land

Hindu neighbour gifts land to Muslim journalist

 

Kisan Samman Nidhi: ದಸರಾ ಹಬ್ಬದ ನಡುವೆ ಕೇಂದ್ರ ಸರ್ಕಾರದಿಂದ 9.5 ಕೋಟಿ ರೈತರಿಗೆ ಸಿಹಿ ಸುದ್ದಿ ಇಲ್ಲಿದೆ! ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಪ್ರತಿ ವರ್ಷ 6 ಸಾವಿರ ನೀಡಲಾಗುತ್ತಿತ್ತು. ಇದೀಗ ಪ್ರಧಾನಿ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ 18ನೇ ಕಂತಿನ 2000 ರೂಪಾಯಿ ಹಣವನ್ನು ಇಂದು ಬಿಡುಗಡೆ ಮಾಡಲಿದ್ದಾರೆ.

ಮೋದಿ ಸರ್ಕಾರ ರೈತರಿಗೆ 2000 ರೂಪಾಯಿ ಕಂತು ಬಿಡುಗಡೆ ಮಾಡಲಿದ್ದು, ದೇಶಾದ್ಯಂತ 2.5 ಕೋಟಿ ರೈತರು ವೆಬ್‌ಕಾಸ್ಟ್ ಮೂಲಕ ಯೋಜನೆಗೆ ಸೇರಲಿದ್ದಾರೆ. ಪ್ರಧಾನಿ ಮೋದಿಯವರು 17ನೇ ಕಂತಿನ ಮೂಲಕ ರೈತರ ಖಾತೆಗಳಿಗೆ ಸುಮಾರು 30 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಆದರೆ, ಕೆವೈಸಿ ಪೂರ್ಣಗೊಳ್ಳದ ಕಾರಣ ಹೆಚ್ಚಿನ ಸಂಖ್ಯೆಯ ರೈತರಿಗೆ ಹಣ ಸಿಗದೇ ಬಾಕಿಯಾಗಿದೆ.

ಇದೀಗ ಅರ್ಹತೆ ಇದ್ದರೂ ಕಂತಿನ ಹಣ ಸಿಗದೇ ಇದ್ದಲ್ಲಿ ದೂರು ನೀಡಲು ಸರ್ಕಾರ ಹಲವು ಆಯ್ಕೆಗಳನ್ನು ನೀಡಿದೆ. ಮೊದಲನೆಯದಾಗಿ, ನಿಮ್ಮ ಸಮಸ್ಯೆಯನ್ನು pmkisan-ict@gov.in ನಲ್ಲಿ ಬರೆಯುವ ಮೂಲಕ ನೀವು ದೂರು ನೀಡಬಹುದು. ಇಲ್ಲಿ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಸಹಾಯವಾಣಿ ಸಂಖ್ಯೆ 155261 ಅಥವಾ 1800115526, 011-23381092 ಅನ್ನು ಸಹ ಸಂಪರ್ಕಿಸಬಹುದು.