Home News Vitla: ಬಾಲಕಿ ಮೃತ್ಯು ಪ್ರಕರಣ; ಜೋಕಾಲಿಗೆ ಸಿಕ್ಕಿ ಸತ್ತಿಲ್ಲ? ಆತ್ಮಹತ್ಯೆ?

Vitla: ಬಾಲಕಿ ಮೃತ್ಯು ಪ್ರಕರಣ; ಜೋಕಾಲಿಗೆ ಸಿಕ್ಕಿ ಸತ್ತಿಲ್ಲ? ಆತ್ಮಹತ್ಯೆ?

Hindu neighbor gifts plot of land

Hindu neighbour gifts land to Muslim journalist

Vitla: ವಿಟ್ಲದಲ್ಲಿ ಆಟವಾಡುತ್ತಿದ್ದ ವೇಳೆ ಜೋಕಾಲಿಗೆ ಕುತ್ತಿಗೆ ಸಿಲುಕಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆಯೊಂದು ಸುದ್ದಿ ಇಂದು ವರದಿಯಾಗಿತ್ತು. ಆದರೆ ಇದೊಂದು ಆತ್ಮಹತ್ಯೆ ಎಂಬ ವರದಿಯಾಗಿದ್ದು, ಈ ಕುರಿತು ವಿಟ್ಲ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್‌ರವರ ಪುತ್ರಿ ತೀರ್ಥಶ್ರೀ (8 ವರ್ಷ) ಮೃತಪಟ್ಟ ಬಾಲಕಿ.

ಈಕೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ವಿಟ್ಲ ಪೊಲೀಸರು ಬಾಲಕಿಯ ಪೋಷಕರಲ್ಲಿ ಮತ್ತು ಸ್ನೇಹಿತರಲ್ಲಿ ಮಾಹಿತಿ ಸಂಗ್ರಹ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.