Home News Gang rape: ‘ಅತ್ಯಾಚಾರವೆಂದರೇನು ಅಮ್ಮ?’ ತನ್ನ ಮೇಲೆ ಗ್ಯಾಂಗ್ ರೇಪ್ ನಡೆಯುವ 2 ದಿನದ ಮೊದಲು...

Gang rape: ‘ಅತ್ಯಾಚಾರವೆಂದರೇನು ಅಮ್ಮ?’ ತನ್ನ ಮೇಲೆ ಗ್ಯಾಂಗ್ ರೇಪ್ ನಡೆಯುವ 2 ದಿನದ ಮೊದಲು ಕೇಳಿದ ಮಗಳ ಪ್ರಶ್ನೆ!

Gang rape

Hindu neighbor gifts plot of land

Hindu neighbour gifts land to Muslim journalist

Gang rape: ಸಮಾಜ ಇಷ್ಟು ಕ್ರೂರವಗಿದೆಯೇ ಅನ್ನೋದು ಆ ಹೆಣ್ಣಿಗೆ ಊಹೆ ಕೂಡಾ ಇರಲಿಲ್ಲ. ಹಾಗಿರುವಾಗ ಅತ್ಯಾಚಾರ ನಡೆಯುವ ಎರಡು ದಿನದ ಮೊದಲು ಅತ್ಯಾಚಾರವೆಂದರೇನು ಎಂದು ಮನೆಯಲ್ಲಿ ಕೇಳಿದ್ದ ಬಾಲಕಿಯ ಸ್ಥಿತಿ ಇಂದು ಚಿಂತಾಜನಕವಾಗಿದೆ. ಹೌದು, ಒಂದು ಮುಗ್ಧ ಬಾಲೆಯ ಮನಸ್ಸು ಮತ್ತು ದೇಹವನ್ನು ರಾಕ್ಷಸರು ಕಿವಿಚಿ ಬಿಟ್ಟಿದ್ದಾರೆ.

ಈ ಬಾಲಕಿ ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ತಿಳಿದ ನಂತರ ಅತ್ಯಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಳು ಎಂದು ಬಾಲಕಿ ಚಿಕ್ಕಮ್ಮ ತಿಳಿಸಿದ್ದಾರೆ. ಈ ಘಟನೆ ಬಳಿಕ ಮನಸ್ಸು ಛಿದ್ರ ಛಿದ್ರವಾಗಿದೆ ಎಂದಿದ್ದಾರೆ. ಸಮಾಜದಲ್ಲಿ ಆಕೆಯನ್ನು ರಕ್ಷಣೆ ಮಾಡುವುದರಲ್ಲಿ ನಾನು ಸೋತಿದ್ದೇನೆ ಎಂದು ನೊಂದುಕೊಂಡಿದ್ದಾರೆ.

ಬಾಲಕಿ ತನ್ನ ಚಿಕ್ಕಮ್ಮ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದಳು, ಸಾಮಾನ್ಯವಾಗಿ ಚಿಕ್ಕಮ್ಮ ಅಥವಾ ರಿಕ್ಷಾದಲ್ಲಿ ಮನೆಗೆ ಬರುತ್ತಿದ್ದಳು, ಆದರೆ ಆಗಸ್ಟ್​ 22ರಂದು ಸೈಕಲ್​ನಲ್ಲಿ ಟ್ಯೂಷನ್​ಗೆ ಹೋಗಿದ್ದಳು ಸಂಜೆ 6 ಗಂಟೆ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಮನೆಯಿಂದ 1 ಕಿ.ಮೀ ದೂರದ ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ (Gang rape) . ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕಂಡು ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂನಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಆಕೆಗೆ ನ್ಯಾಯ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಲಾಗಿದೆ. ಬಾಲಕಿ ತಂದೆ ಗುವಾಹಟಿಯಲ್ಲಿದ್ದಾರೆ, ಅವರು ಆರ್ಥಿಕವಾಗಿ ಅಷ್ಟು ಸಬಲರಲ್ಲದ ಕಾರಣ ಚಿಕ್ಕಮ್ಮನ ಮನೆಗೆ ಓದಲು ಕಳುಹಿಸಿದ್ದರು.

ಇದೀಗ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ತಫಾಜುಲ್ ಇಸ್ಲಾಂ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳಕ್ಕೆ ಹಾರಿ ಸಾವನ್ನಪ್ಪಿದ್ದಾನೆ, ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.