Home News Chikkamaglur : ಇನ್ಮುಂದೆ ಬೀದಿನಾಯಿಗಳಿಗೆ ರಸ್ತೆಯಲ್ಲಿ ಊಟ ಹಾಕಿದ್ರೆ ಬೀಳುತ್ತೆ ಕೇಸ್.!

Chikkamaglur : ಇನ್ಮುಂದೆ ಬೀದಿನಾಯಿಗಳಿಗೆ ರಸ್ತೆಯಲ್ಲಿ ಊಟ ಹಾಕಿದ್ರೆ ಬೀಳುತ್ತೆ ಕೇಸ್.!

Hindu neighbor gifts plot of land

Hindu neighbour gifts land to Muslim journalist

Chikkamaglur : ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ ಭಾಗ್ಯ ಕಲ್ಪಿಸಿದ ಬೆನ್ನಲ್ಲೇ ಚಿಕ್ಕಮಗಳೂರು ಪುರಸಭೆ ಬೀದಿ ನಾಯಿಗಳಿಗೆ ರಸ್ತೆಯಲ್ಲಿ ಊಟ ಹಾಕಿದ್ರೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ.

ಹೌದು, ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಬೀಡಾಡಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಯಿ ಸಾಕಾಣಿಕೆದಾರರು ನಿಮ್ಮ ನಾಯಿಗಳನ್ನು ರಸ್ತೆಗೆ ಬಿಡದೆ ಬೆಲ್ಟ್/ಹಗ್ಗದಿಂದ ಕಟ್ಟಿ ನಿಮ್ಮ ಆವರಣದಲ್ಲೇ ಇಟ್ಟುಕೊಳ್ಳತಕ್ಕದ್ದು, ಹಾಗೂ ಸಾರ್ವಜನಿಕರು ತಮ್ಮ ಮನೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ನಾಯಿಗಳಿಗೆ ಆಹಾರವನ್ನು ಹಾಕುತ್ತಿರುವುದು ಕಂಡುಬಂದಿರುವುದರಿಂದ ನಗರ ವ್ಯಾಪ್ತಿಯಲ್ಲಿ ಬೀಡಾಡಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಲ್ಲದೇ ಇದರಿಂದ ಸಾರ್ವಜನಿಕರಿಗೆ ಉಪದ್ರವಗಳೊಂದಿಗೆ ನಾಯಿ ಕಡಿತಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಈ ಕಛೇರಿಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆಹಾರವನ್ನು ಹಾಕುವುದು ಕಂಡುಬಂದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಂಬಂಧಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದೆ.

ಇದನ್ನೂ ಓದಿ: Koppala: ಗವಿಮಠದಲ್ಲಿ ಅಚ್ಚರಿ ಘಟನೆ – ನಾಗದೇವರೆದರು ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ !!