Home News Bengaluru: ಇನ್ನುಮುಂದೆ ರಜಾ ದಿನಗಳಲ್ಲೂ ‘ಸಬ್ ರಿಜಿಸ್ಟ್ರಾ‌ರ್ ಕಚೇರಿ ಕಾರ್ಯನಿರ್ವಹಿಸಲಿದೆ: ರಾಜ್ಯ ಸರ್ಕಾರ ಆದೇಶ

Bengaluru: ಇನ್ನುಮುಂದೆ ರಜಾ ದಿನಗಳಲ್ಲೂ ‘ಸಬ್ ರಿಜಿಸ್ಟ್ರಾ‌ರ್ ಕಚೇರಿ ಕಾರ್ಯನಿರ್ವಹಿಸಲಿದೆ: ರಾಜ್ಯ ಸರ್ಕಾರ ಆದೇಶ

Hindu neighbor gifts plot of land

Hindu neighbour gifts land to Muslim journalist

Bengaluru: ಸುಗಮ ಹಾಗೂ ಸುಲಲಿತ ಆಡಳಿತ ನೀಡುವ ಸಲುವಾಗಿ ಸಬ್ ರಿಜಿಸ್ಟ್ರಾರ್‌ ಕಚೇರಿಗಳು ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿದ್ದು, ಈ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಸರ್ಕಾರದ ಅಧಿಸೂಚನೆಯಂತೆ ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ ಉಪನೋಂದಣಿ ಕಛೇರಿಗಳು ಸದರಿಯ ಆಧಾರದ ಮೇಲೆ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದುಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಛೇರಿಗೆ ಮಂಗಳವಾರದ ದಿನವನ್ನು ರಜಾ ದಿನವೆಂದು ಘೋಷಿಸಿ ಆದೇಶಿಸಲಾಗಿದೆ. ಇದರಿಂದ ವಿವಾಹ, ಆಸ್ತಿಗಳ ಪರಭಾರೆ, ನೋಂದಣೆ, ವಿಭಾಗಪತ್ರ ಸೇರಿದಂತೆ ಸರ್ಕಾರಿ ಸೇವೆಗಳು ಜನರಿಗೆ ಸಕಾಲದಲ್ಲಿ ಸಿಗಲಿದೆ.