Home News ಇನ್ಮುಂದೆ ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಕಾಳು ಹಾಕುವಂತಿಲ್ಲ: ರಾಜ್ಯ ಸರಕಾರದಿಂದ ಖಡಕ್‌ ಆದೇಶ

ಇನ್ಮುಂದೆ ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಕಾಳು ಹಾಕುವಂತಿಲ್ಲ: ರಾಜ್ಯ ಸರಕಾರದಿಂದ ಖಡಕ್‌ ಆದೇಶ

Pigeon

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಇನ್ಮುಂದೆ ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಕಾಳು ಹಾಕಿದೆ ಜೈಲುಶಿಕ್ಷೆ ಫಿಕ್ಸ್ .! ಹೌದು ಹೀಗಂತ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವು ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿಷೇಧಿಸಿದೆ. ಜಿಬಿಎ ಗುರುತಿಸಿರುವ ಸ್ಥಳದಲ್ಲಿ ಮಾತ್ರ, ಇನ್ಮುಂದೆ ನಿಗದಿತ ಸಮಯದಲ್ಲಿ ಪಾರಿವಾಳಗಳಿಗೆ ಆಹಾರ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತ (ಬಿಎನ್ ಎಸ್) 200, 271 ಮತ್ತು 271ರಂತೆ ಪ್ರಕರಣ ದಾಖಲಿಸಿ, ದಂಡ ಹಾಕುವ ಜೊತೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಅನಿಯಂತ್ರಿತವಾಗಿ ಆಹಾರ ನೀಡುವುದರಿಂದ ಪಕ್ಷಿಗಳ ದೊಡ್ಡ ಗುಂಪುಗಳು, ಅತಿಯಾದ ಮಲ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಪಾರಿವಾಳದ ಮಲ ಮತ್ತು ಗರಿಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಉಸಿರಾಟದ ಕಾಯಿಲೆಗಳು ಉದಾಹರಣೆಗೆ ಅತಿಸೂಕ್ಷ್ಮ ನ್ಯುಮೋನಿಟಿಸ್ ಮತ್ತು ಇತರ ಶ್ವಾಸಕೋಶದ ಕಾಯಿಲೆಗಳು ಉಂಟಾಗುತ್ತಿವೆ ಎಂದು ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗಿದೆ.

ತಜ್ಞರ ವೈದ್ಯಕೀಯ ಅಭಿಪ್ರಾಯ ಮತ್ತು ವರದಿಗಳು ಅಂತಹ ಒಡ್ಡಿಕೊಳ್ಳುವಿಕೆಯು ತೀವು ಮತ್ತು ಕೆಲವೊಮ್ಮೆ ಬದಲಾಯಿಸಲಾಗದ ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು ಎಂದು ಸೂಚಿಸುತ್ತದೆ.ಬಾಂಬೆಯ ಗೌರವಾನ್ವಿತ ಹೈಕೋರ್ಟ್ ಇದೇ ರೀತಿಯ ವಿಷಯದಲ್ಲಿ ಗ್ರೇಟರ್ ಮುಂಬೈ ಕಾರ್ಪೊರೇಷನೆ WP ಸಂಖ್ಯೆ (905) WP ಸಂಖ್ಯೆ (L) 2119 of 2025 ರಲ್ಲಿ ನಿರ್ದೇಶನಗಳನ್ನು ನೀಡಿದೆ ಮತ್ತು ಪರಿಣಾಮವಾಗಿ, ಗ್ರೇಟರ್ ಮುಂಬೈ ಕಾರ್ಪೊರೇಷನ್ ಉಪದ್ರವವನ್ನು ತಡೆಗಟ್ಟಲು, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು, ಪಾರಿವಾಳಗಳಿಗೆ ಆಹಾರ ನೀಡುವ ಆವರಣಗಳನ್ನು (ಕಬುತರ್ಖಾನಗಳು) ಮುಚ್ಚಲು ನಿಯಂತ್ರಕ ಕ್ರಮಗಳನ್ನು ಸೂಚಿಸಿದೆ.