Home News ಗೆಳೆಯರೊಂದಿಗೆ ಸಹಕರಿಸುವಂತೆ ಮಹಿಳೆಗೆ ಪತಿಯಿಂದ ಕಿರುಕುಳ!! ಸಂತ್ರಸ್ತ ಮಹಿಳೆಯಿಂದ ಪೊಲೀಸರಿಗೆ ದೂರು-ಆರೋಪಿಗಳ ಬಂಧನ

ಗೆಳೆಯರೊಂದಿಗೆ ಸಹಕರಿಸುವಂತೆ ಮಹಿಳೆಗೆ ಪತಿಯಿಂದ ಕಿರುಕುಳ!! ಸಂತ್ರಸ್ತ ಮಹಿಳೆಯಿಂದ ಪೊಲೀಸರಿಗೆ ದೂರು-ಆರೋಪಿಗಳ ಬಂಧನ

Hindu neighbor gifts plot of land

Hindu neighbour gifts land to Muslim journalist

ಸ್ನೇಹಿತರ ಮುಂದೆ ತನ್ನ ಪತ್ನಿಯನ್ನು ಬೆತ್ತಲೆ ಕುಣಿಸುತ್ತಿದ್ದದಲ್ಲದೇ, ಆಕೆಯ ಮೇಲೆ ಪತಿ ಹಾಗೂ ಆತನ ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪತಿಯ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆಕೆಯ ಪತಿ ಹಾಗೂ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಶಾಲಾ ಶಿಕ್ಷಕನಾಗಿದ್ದ ಬಂಧಿತ ಪತಿಗೆ ಈ ಮೊದಲೊಂದು ವಿವಾಹವಾಗಿದ್ದು, ಆದರೂ ಮ್ಯಾಟ್ರೊಮನಿಯಲ್ಲಿ ಮಹಿಳೆಯ ಪರಿಚಯವಾಗಿ ಮದುವೆಯಾಗಿದ್ದಾನೆ.ಈ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದಾಗ ಬೇರೆಯೇ ನೆಲೆಸಿದ್ದರು.

ಪ್ರತೀ ದಿನ ಪತಿ ಮತ್ತು ಆತನ ಸ್ನೇಹಿತರು ಮನೆಗೆ ಬಂದು ಪಾರ್ಟಿ ಮಾಡುವುದಲ್ಲದೇ, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಮಹಿಳೆಯನ್ನು ಬೆತ್ತಲೆ ಕುಣಿಯಲು ಹೇಳುವುದಲ್ಲದೆ, ಗೆಳೆಯರೊಂದಿಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಎಂದು ಮಹಿಳೆ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.