Home News Bengaluru: ಬೆಂಗಳೂರಿಗೆ ಬರಲಿದೆ ವಿದೇಶಿ ಕಸ ಗುಡಿಸುವ ಯಂತ್ರ; ಬಿಬಿಎಂಪಿ ಯೋಜನೆ

Bengaluru: ಬೆಂಗಳೂರಿಗೆ ಬರಲಿದೆ ವಿದೇಶಿ ಕಸ ಗುಡಿಸುವ ಯಂತ್ರ; ಬಿಬಿಎಂಪಿ ಯೋಜನೆ

Hindu neighbor gifts plot of land

Hindu neighbour gifts land to Muslim journalist

Bengaluru: ಬೆಂಗಳೂರನ್ನು (Bengaluru) ಸ್ವಚ್ಛ ನಗರ ಮಾಡುತ್ತೇವೆ ಎಂದು ಹೊರಟಿರುವ ಬಿಬಿಎಂಪಿ ಕೋಟ್ಯಂತರ ರೂಪಾಯಿ ಹಣ ಖರ್ಚುಮಾಡಿ ಸ್ವೀಪಿಂಗ್ ಮಷಿನ್​ಗಳನ್ನು (ಕಸಗುಡಿಸುವ ಯಂತ್ರಗಳು) ಬಳಸಿಕೊಳ್ಳಲು ಮುಂದಾಗಿದೆ.

 

ಮುಂದಿನ ಏಳು ವರ್ಷಗಳಲ್ಲಿ ರಾಜಧಾನಿಯನ್ನು ಧೂಳುಮುಕ್ತ ನಗರ ಮಾಡುವ ಉದ್ದೇಶದೊಂದಿಗೆ 764 ಕೋಟಿ ರೂಪಾಯಿ ವೆಚ್ಚದಲ್ಲಿ 20 ಸ್ವೀಪಿಂಗ್ ಮಷಿನ್​ಗಳನ್ನು ಆಮದು ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದ್ದು, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

 

2024-25ರ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಕಸ ಗುಡಿಸುವ ಯಂತ್ರಗಳಿಗಾಗಿ 30 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ.

ಇದಕ್ಕೆ ನಗರವಾಸಿಗಳ ವಿರೋಧವೂ ವ್ಯಕ್ತವಾಗಿದೆ. ಈಗಾಗಲೇ ಇರುವ ಕಸ ಗುಡಿಸುವ ಯಂತ್ರಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ಇದು ಹಣ ದೋಚುವ ತಂತ್ರವಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.