Home News Holi: ಹೋಳಿ ವೇಳೆ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಿದರೆ ಕಾನೂನು ಕ್ರಮ

Holi: ಹೋಳಿ ವೇಳೆ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಿದರೆ ಕಾನೂನು ಕ್ರಮ

Hindu neighbor gifts plot of land

Hindu neighbour gifts land to Muslim journalist

 

Holi: ದೇಶಾದ್ಯಂತ ಹೋಳಿ(Holi) ಸಂಭ್ರಮ ಮನೆ ಮಾಡಿದೆ. ವಿವಿಧ ಬಣ್ಣಗಳನ್ನು ಎರಚಾಡಿ ಜನರು ಸಂಭ್ರಮಿಸುತ್ತಿದ್ದಾರೆ. ಇದೀಗ ಈ ಹೋಳಿ ಸಂಭ್ರಮದ ಕುರಿತಾಗಿ ಪೊಲೀಸರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.

 

ಅದರಂತೆ ಹೋಳಿ ಆಡುವಂತಹ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಯಾರ ಮೇಲಾದರೂ ಬಣ್ಣ ಎರಚಿದರೆ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ದಾವಣಗೆರೆಯ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿದಿದ್ದಾರೆ.

 

ಹೌದು, ಸಾರ್ವಜನಿಕರು ಈ ಸಂದರ್ಭದಲ್ಲಿ ಸಡಗರ ಸಂಭ್ರಮದಿಂದ ಕಾಮದಹನ ಹಾಗೂ ಹೋಳಿ ಹಬ್ಬವನ್ನು ಆಚರಿಸಲು ಅಭ್ಯಂತರವಿಲ್ಲ. ಯಾವುದೇ ವ್ಯಕ್ತಿಗಳ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಎರಚುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪಿಯುಸಿ ಪರೀಕ್ಷೆಗಳು ಹಾಗೂ ಇತರೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷೆಗೆ ಹಾಜರಾಗುವಂತಹ ವಿದ್ಯಾರ್ಥಿಗಳಿಗೆ ಯಾವುದೇ ಬಣ್ಣ ಎರಚಬಾರದು, ಯಾರಾದರೂ ಕಿಡಿಗೇಡಿತನಕ್ಕೆ ಮುಂದಾದಲ್ಲಿ ಕಠಿಣ ಕಾನೂನು ಕ್ರಮ ಖಚಿತ ಎಂದು ತಿಳಿಸಿದ್ದಾರೆ.