Home News BJP: ವಿಜಯೋತ್ಸವದ ವೇಳೆ ಅಗ್ನಿ ಅವಘಡ: ನೂತನ ಶಾಸಕನಿಗೆ ಗಾಯ

BJP: ವಿಜಯೋತ್ಸವದ ವೇಳೆ ಅಗ್ನಿ ಅವಘಡ: ನೂತನ ಶಾಸಕನಿಗೆ ಗಾಯ

Hindu neighbor gifts plot of land

Hindu neighbour gifts land to Muslim journalist

BJP: ಮಹಾರಾಷ್ಟ್ರದ (Maharashtra) ಕೊಲ್ಲಾಪೂರ ಜಿಲ್ಲೆಯ ಮಹಗಾಂವ್ ಪಟ್ಟಣದಲ್ಲಿ ನೂತನ ಶಾಸಕನ ವಿಜಯೋತ್ಸವ ಸಂದರ್ಭದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ಹೌದು, ಚಂದಗಡ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಶಿವಾಜಿ ಪಾಟೀಲ್‌ (Shivaji Patil) ಅವರಿಗೆ ಅಭಿಮಾನಿಗಳು ಆರತಿ ಮಾಡುವ ಸಂದರ್ಭದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಆರತಿ ಮಾಡುವ ಸಂದರ್ಭದಲ್ಲಿ ಜೆಸಿಬಿ ಮೂಲಕ ಕೆಂಪು ಬಣ್ಣದ ಪುಡಿಯನ್ನು ಆರತಿ ಮೇಲೆ ಸುರಿಯಲಾಗಿದೆ. ಈ ವೇಳೆ ಏಕಾಏಕಿ ಭಾರೀ ಪ್ರಮಾಣದ ಬೆಂಕಿ ಹೊತ್ತಿದೆ. ಅವಘಡದಲ್ಲಿ ನೂತನ ಶಾಸಕ ಸೇರಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಂಕಿ ಕಾಣಿಸಿಕೊಂಡಾಗ ನೆರೆದಿದ್ದ ಜನ ಅಲ್ಲಿಂದ ಕಾಲು ಕಿತ್ತಿದ್ದಾರೆ. ಸದ್ಯ ಬೆಂಕಿ ಸಹ ಕೂಡಲೇ ನಿಯಂತ್ರಣಕ್ಕೆ ಬಂದಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ.