Home News Belagavi: ಬಸ್ ಸೀಟಿಗಾಗಿ ಜಗಳ – ಯುವಕರನ್ನು ಕರೆಸಿ ಹಿಂದೂ ದಂಪತಿಗೆ ಹೊಡೆಸಿದ ಮುಸ್ಲಿಂ ಮಹಿಳೆಯರು!!...

Belagavi: ಬಸ್ ಸೀಟಿಗಾಗಿ ಜಗಳ – ಯುವಕರನ್ನು ಕರೆಸಿ ಹಿಂದೂ ದಂಪತಿಗೆ ಹೊಡೆಸಿದ ಮುಸ್ಲಿಂ ಮಹಿಳೆಯರು!! ಗರ್ಭಿಣಿಯನ್ನೂ ಲೆಕ್ಕಿಸದೆ ಮನಬಂದಂತೆ ಥಳಿಸಿದ 10 ಮುಸ್ಲಿಂ ಯುವಕರು

Hindu neighbor gifts plot of land

Hindu neighbour gifts land to Muslim journalist

Belagavi: ನಲ್ಲಿ ಸೀಟಿಗಾಗಿ ಗಂಡ ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು, ಬೆಳಗಾವಿ(Belqgavi) ಜಿಲ್ಲೆಯ, ಹುಕ್ಕೇರಿ ತಾಲೂಕಿನ, ಮಸರಗುಪ್ಪಿ ಕ್ರಾಸ್ ಬಳಿ ಸಂಕೇಶ್ವರದಿಂದ ಗೋಕಾಕ್​ಗೆ ಹೊರಟ್ಟಿದ್ದ ಬಸ್‌ನಲ್ಲಿ ಸುನೀತಾ ಪರಪ್ಪ ನಾಶಿಪುಡಿ ಮತ್ತು ಶಿವಪ್ಪ ಪರಪ್ಪ ನಾಶಿಪುಡಿ ಎಂಬ ಗಂಡ-ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಗಲಾಟೆ ನಡೆದಿದ್ದು, ಜಗಳ ವಿಕೋಪಕ್ಕೆ ಹೋಗಿದೆ. ಬಳಿಕ ಮಾತಿನ ಚಕಮಕಿಯ ಮೂಲಕ ಆರಂಭವಾದ ಜಗಳ ತಾರಕ್ಕಕ್ಕೆ ಹೋಗಿ ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಸಿನಿಮಾ ಶೈಲಿಯಲ್ಲಿ ಸುಮಾರು 10 ಮುಸ್ಲಿಂ ಯುವಕರು ಬಸ್​​ನ್ನು ಹಿಂಬಾಲಿಸಿಕೊಂಡು ಬಂದಿದ್ದು, ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿದ್ದಾರೆ.

ಬಸ್ ಅಡ್ಡಗಟ್ಟಿದ ಯುವಕರು ಸುನೀತಾ ಪರಪ್ಪ ನಾಶಿಪುಡಿ ಮತ್ತು ಶಿವಪ್ಪ ಪರಪ್ಪ ನಾಶಿಪುಡಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಸುನಿತಾ ಅವರು ಗರ್ಭಿಣಿ ಎಂದು ತಿಳಿದರು ಕೂಡ ಮನಬಂದಂತೆ ಥಳಿಸಿದ್ದಾರೆ. ಬಸ್ನಲ್ಲಿದ್ದ ಸಹ ಪ್ರಯಾಣಿಕರು ದಯವಿಟ್ಟು ಬಿಡಿ ಎಂದು ಬೇಡಿದರು ಕೂಡ ಯಾವುದನ್ನು ಲೆಕ್ಕಿಸದೆ ಬಂದಂತೆ ಹಲ್ಲೆ ಮಾಡಿದ್ದಾರೆ. ಸದ್ಯ ಕೃತ್ಯ ಸಂಭಂದ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ