Home News Masjid: ದಸರಾ ಮೂರ್ತಿ ವಿರ್ಸಜನೆ: ಮಸೀದಿ ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ...

Masjid: ದಸರಾ ಮೂರ್ತಿ ವಿರ್ಸಜನೆ: ಮಸೀದಿ ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಮಾರಮಾರಿ!

Hindu neighbor gifts plot of land

Hindu neighbour gifts land to Muslim journalist

Masjid: ಹುಕ್ಕೇರಿ (Hukkeri) ತಾಲೂಕಿನ ಸೊಲ್ಲಾಪುರ (Solapur) ಗ್ರಾಮದಲ್ಲಿ, 9 ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸಿ ಭಾನುವಾರ ವಿಸರ್ಜನೆ ಸಂದರ್ಭದಲ್ಲಿ ಮಸೀದಿ (Masjid) ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ.

ನವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸಿ ಭಾನುವಾರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮಸೀದಿ ಎದುರು ಶಿವಾಜಿ (Shivaji) ಅಫ್ಜಲ್ ಖಾನ್ ಕೊಂದಿದ್ದ ಹಾಡನ್ನ ಜೋರಾಗಿ ಹಾಕಿದ್ದು, ಇದರಿಂದ ಕೋಪಗೊಂಡ ಒಂದು ಕೋಮಿನ ಗುಂಪು ಮೆರವಣಿಗೆ ಮುಗಿಸಿ ಬರುತ್ತಿದ್ದ ಯುವಕರ ಮೇಲೆ ರಾಡ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗಲಾಟೆಯಲ್ಲಿ 5 ಕ್ಕೂ ಹೆಚ್ಚು ಬೈಕುಗಳು ಹಾಗೂ ಎರಡು ಕಾರುಗಳಿಗೆ ಹಾನಿಯಾಗಿದೆ‌‌. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್‌ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಇಲ್ಲಿಯವರೆಗೆ ಯಾರನ್ನು ಕೂಡ ವಶಕ್ಕೆ ಪಡೆದಿಲ್ಲ ಎನ್ನುವ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದು ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.