Home News Charmadi Ghat: ಎಲ್ಲೆಲ್ಲೂ ಭೂ ಕುಸಿತದ ಭೀತಿ : ಚಾರ್ಮಾಡಿ ಘಾಟ್ನಲ್ಲಿ ಮುನ್ನೆಚ್ಚರಿಕಾ ಕ್ರಮ :...

Charmadi Ghat: ಎಲ್ಲೆಲ್ಲೂ ಭೂ ಕುಸಿತದ ಭೀತಿ : ಚಾರ್ಮಾಡಿ ಘಾಟ್ನಲ್ಲಿ ಮುನ್ನೆಚ್ಚರಿಕಾ ಕ್ರಮ : ಡಿಆರ್ ತುಕಡಿ ನಿಯೋಜನೆ

Charmadi Ghat

Hindu neighbor gifts plot of land

Hindu neighbour gifts land to Muslim journalist

Charmadi Ghat: ಚಾರ್ಮಾಡಿ ಘಾಟ್‌ಗೆ ಭೂಕುಸಿತದ ಎಚ್ಚರಿಕೆ ನೀಡಲಾಗಿರುವುದರಿಂದ ಕರ್ನಾಟಕದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಪ್ರಸ್ತುತ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ ವಯನಾಡ್‌ನಲ್ಲಿ ವಿನಾಶಕಾರಿ ಭೂಕುಸಿತದ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ಚಾರ್ಮಾಡಿ ಘಾಟ್ (Charmadi Ghat) ಆರಂಭದ ಸ್ಥಳವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ (Kottigehara Check Post) ಬಳಿ ಡಿಆರ್‌ ತುಕಡಿಯನ್ನು ನಿಯೋಜನೆ ಮಾಡಿಲಾಗಿದೆ.

ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ಚಿಕ್ಕಮಗಳೂರು-ಮಂಗಳೂರಿಗೆ (Chikkamagaluru-Mangaluru) ಸಂಪರ್ಕ ಕಲ್ಪಿಸುವ ಘಾಟ್‌ ರಸ್ತೆ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾವುದೇ ತೆರನಾದ ಅನಾಹುತ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮವನ್ನು ಮುಂಚಿತವಾಗಿಯೇ ಕೈಗೊಂಡಿದೆ.

ಚಾರ್ಮಾಡಿ ಘಾಟ್‌ಗೆ ಭೂಕುಸಿತದ ಭೀತಿ ಎದುರಾಗಿದ್ದು, ಚಿಕ್ಕಮಗಳೂರಿನ ತಪ್ಪಲಿನಲ್ಲಿರುವ ನಿವಾಸಿಗಳು ಮತ್ತು ಪ್ರಯಾಣಿಕರು ಆತಂಕವನ್ನು ಅನುಭವಿಸುತ್ತಿದ್ದಾರೆ. ಕಿರಿದಾದ 22 ಕಿಲೋಮೀಟರ್ ರಸ್ತೆ, ಕಡಿದಾದ ಬೆಟ್ಟಗಳು, ಶಾರ್ಪ್‌ ತಿರುವುಗಳು ಇರುವುದರಿಂದ ಇದು ಸಾದ ಆತಂಕದ ದಾರಿಯೇ. ಇತ್ತೀಚಿನ ನಡೆದ ವಯನಾಡ್ ದುರಂತದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲೂ ಸಂಭಾವ್ಯ ಮಣ್ಣು ಮತ್ತು ಬಂಡೆ ಕುಸಿತದ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.

ಶಿರಾಡಿ ಘಾಟ್‌ನಲ್ಲಿ ನಡೆಯುತ್ತಿರುವ ಭೂಕುಸಿತಗಳ ಹಿನ್ನೆಲೆಯಲ್ಲಿ ಇಲ್ಲೂ ಅದೇ ಪರಿಸ್ಥಿತಿಯ ಆತಂಕ ಹೆಚ್ಚಿಸಿದೆ.
ಇತ್ತೀಚಿನ ಬೆಳವಣಿಗೆಗಳು 2019 ರಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ನಡೆದ ಮಣ್ಣಿನ ಕುಸಿತವನ್ನು ನೆನಪಿಸುತ್ತವೆ. ಇದು ಇನ್ನು ಸ್ಥಳೀಯರಲ್ಲಿ ನೆನಪಿನಲ್ಲಿ ಹಾಗೆ ಇನ್ನೂ ಉಳಿದಿದೆ. ಉತ್ತರ ಕನ್ನಡದ ಶಿರೂರು (Shiruru Landslide), ಕೇರಳದ ವಯನಾಡು (Wayanad Landslide) ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲೂ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಡಿಆರ್ ವ್ಯಾನ್‌ನಲ್ಲಿ ಓರ್ವ ಅಧಿಕಾರಿ ಸೇರಿ 7-8 ಸಿಬ್ಬಂದಿಗಳು ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಒಂದು ವೇಳೆ ಭಾರೀ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಏನಾದರೂ ಅನಾಹುತ ನಡೆದರೆ ತಕ್ಷಣ ಕಾರ್ಯಪ್ರವೃತ್ತರಾಗಲು ಸಹಾಯಕ್ಕೆ ಅಲ್ಲಿನ ಪೊಲೀಸರು ಸನ್ನದ್ಧರಾಗಲಿದ್ದಾರೆ. ಈ ಕಾರಣಕ್ಕೆ ಕೊಟ್ಟಿಗೆಹಾರದಲ್ಲೇ ಒಂದು ವ್ಯಾನ್ ಅನ್ನು ನಿಯೋಜಿಸಿದ್ದಾರೆ.