Home News ಖ್ಯಾತ ಪಾಪ್‌ ಗಾಯಕ ಜಸ್ಟಿನ್‌ ಬೀಬರ್‌ ದಾಂಪತ್ಯದಲ್ಲಿ ಬಿರುಕು!

ಖ್ಯಾತ ಪಾಪ್‌ ಗಾಯಕ ಜಸ್ಟಿನ್‌ ಬೀಬರ್‌ ದಾಂಪತ್ಯದಲ್ಲಿ ಬಿರುಕು!

Hindu neighbor gifts plot of land

Hindu neighbour gifts land to Muslim journalist

ಖ್ಯಾತ ಪಾಪ್‌ ಗಾಯಕ ಜಸ್ಟಿನ್‌ ಬೀಬರ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಕೋರಿ ಜಸ್ಟಿನ್‌ ಬೀಬರ್‌ ಪತ್ನಿ ಹೈಲಿ ರೋಡ್‌ ಬೀಬರ್‌ ನ್ಯಾಯಾಲಯದ ಮೆಟ್ಟಿಲನ್ನೇರುವ ಸಾಧ್ಯತೆ ಇದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಜಸ್ಟಿನ್‌ ಬೀಬರ್‌ ತಮ್ಮ ಪತ್ನಿ ಹೈಲಿಗೆ ಡಿವೋರ್ಸ್‌ ನೀಡಿದ್ದೇ ಆದಲ್ಲಿ $300 ಮಿಲಿಯನ್‌ ಜೀವನಾಂಶ ನೀಡಬೇಕಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಅಂದ ಹಾಗೆ ಜಸ್ಟೀನ್‌ ಬೀಬರ್‌ ಮತ್ತು ಹೈಲಿ ಸೆಪ್ಟೆಂಬರ್‌ 2018 ರಲ್ಲಿ ಮದುವೆಯಾಗಿದ್ದರು. ಇವರಿಬ್ಬರಿಗೆ ಜ್ಯಾಕ್‌ ಬ್ಲೂಸ್‌ ಬೀಬರ್‌ ಎನ್ನುವ ಪುಟ್ಟ ಮಗುವಿದೆ. ಜಸ್ಟೀನ್‌ ಬೀಬರ್‌ಗೆ ಮತ್ತೆ ಮಾದಕ ದ್ರವ್ಯ ಚಟ ಅಂಟಿಕೊಂಡಿರುವುದರಿಂದ ತಮ್ಮ ಮಗುವಿನ ಭವಿಷ್ಯಕ್ಕೋಸ್ಕರ ಹೈಲಿ ಆತಂಕಗೊಂಡಿದ್ದು, ತಂದೆಯ ನಡವಳಿಕೆ ಮಗನ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕಗೊಂಡಿದ್ದಾರೆ ಎಂದು ನ್ಯಾಷನಲ್‌ ಎನ್ಕ್ವೈರ್‌ ವರದಿ ಮಾಡಿದೆ.