Home News Exam rules: ಬೆತ್ತಲಾಗಿ ಬಂದು ಪರೀಕ್ಷೆ ಬರೆಯಿರಿ ಅನ್ನದಿದ್ರೆ ಸಾಕು: ಪರೀಕ್ಷೆಗೂ ಮುನ್ನ ಅದೇನೇನು ಬಿಚ್ಚಿ...

Exam rules: ಬೆತ್ತಲಾಗಿ ಬಂದು ಪರೀಕ್ಷೆ ಬರೆಯಿರಿ ಅನ್ನದಿದ್ರೆ ಸಾಕು: ಪರೀಕ್ಷೆಗೂ ಮುನ್ನ ಅದೇನೇನು ಬಿಚ್ಚಿ ಹೋಗಬೇಕೋ?

Hindu neighbor gifts plot of land

Hindu neighbour gifts land to Muslim journalist

Exam rules: ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು(exam) ಬರೆಯೋದಂದ್ರೆ ಅಭ್ಯರ್ಥಿಗಳಿಗೆ(Candidates) ಭಯ ಶುರುವಾಗಿದೆ. ಅಲ್ಲಿ ಯಾವಾಗ ಏನು ರೂಲ್ಸ್‌ ತರ್ತಾರೋ ಅನ್ನೋದೆ ಭಯ. ವಾಚ್‌ ಕಟ್ಟುವಂಗಿಲ್ಲ, ಕರಿಮಣಿ ಹಾಕುವಂಗಿಲ್ಲ, ಬಳೆ ತೊಡುವಂಗಿಲ್ಲ, ಕಿವಿ ಓಲೆ ಧರಿಸುವಂತಿಲ್ಲ. ಇನ್ನು ವಾಚ್‌, ಫೋನ್‌ ಅವೆಲ್ಲಾ ಇಲ್ಲ ಬಿಡಿ. ಇದೀಗ ಹೊಸ ರೂಲ್ಸ್‌ ಒಂದು ಜಾರಿ ಮಾಡಿದ್ದಾರೆ. ಹೆಣ್ಣು ಮಕ್ಕಳು ಮೂಗಿಗೆ ಮೂಗುಬೊಟ್ಟು(Nose ring) ಹಾಕಿಕೊಂಡು ಪರೀಕ್ಷೆ ಹಾಲ್‌ಗೆ(Exam hall) ಹೋಗುವಂತಿಲ್ಲ. ಹೋದರೆ ನಿಮ್ಮ ಮೂಗಿಗೆ ಕತ್ತರಿ ಬೀಳೂದು ಪಕ್ಕಾ! ಬೈ ಮಿಸ್‌ ಆದ್ರೆ.

ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ರವಿವಾರ ಬಾಗಲಕೋಟೆಯಲ್ಲಿ ಪರೀಕ್ಷೆ ನಡೆದಿತ್ತು. ಎಂದಿನಂತೆ ವಮಹಿಳಾ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಧಾವಂತದಲ್ಲಿ ಬಂದಿದ್ದಾರೆ. ಪರೀಕ್ಷೆ ಬರೆಯೋ ಗುಂಗಿನಲ್ಲಿದ್ದ ಅಭ್ಯರ್ಥಿಗಳಿಗೆ ಅಲ್ಲಿನ ಪರಿಕ್ಷಾ ರೂಲ್ಸ್‌ ಕೇಳಿ ಮೂಗು ಮುರಿದಿದ್ದಾರೆ. ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಮಹಿಳಾ ಅಭ್ಯರ್ಥಿಗಳ ಮೂಗುಬೊಟ್ಟು ಕತ್ತರಿಸಿ ಪ್ರವೇಶ ಕಲ್ಪಿಸಲಾಗಿದೆ.

ನಗರದ ಡಿಪ್ಲೊಮಾ ಕಾಲೇಜು ಕೇಂದ್ರವೂ ಸೇರಿದಂತೆ ಹಲವೆಡೆ ಪರೀಕ್ಷೆ ನಡೆದಿತ್ತು. ಪರೀಕ್ಷಾ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ಮಹಿಳೆಯರ ಮೂಗುಬೊಟ್ಟು ಕತ್ತರಿಸಿ ಒಳಗೆ ಬಿಟ್ಟಿದ್ದಾರೆ. ನುರಿತ ಅಕ್ಕಸಾಲಿಗರಾಗಿದ್ದರೆ ಸರಿಯಾಗಿ ಕತ್ತರಿಸಬಹುದು ಆದರೆ ಸಿಬ್ಬಂದಿಗೆ ಮೂಗುಬೊಟ್ಟು ಕತ್ತರಿಸುವ ಕತ್ತರಿ ನೀಡಿ ನಿಲ್ಲಿಸಿರುವುದು ಆಕ್ಷೇಪಕ್ಕೆ ಕಾರಣವಾಯಿತು. ಮೂಗುಬೊಟ್ಟು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಪಿ ತಡೆಯುವ ನೆಪದಲ್ಲಿ ಅವೈಜ್ಞಾನಿಕವಾಗಿ ಈ ಮಟ್ಟಿಗೆ ಇಳಿಯುತ್ತಿರುವುದು ಸರಿಯಲ್ಲ ಎಂದು ಅಭ್ಯರ್ಥಿಗಳು ಸಿಬ್ಬಂದಿ ಎದುರು ಆಕ್ಷೇಪ ವ್ಯಕ್ತಪಡಿಸಿಯೇ ಪರೀಕ್ಷೆಗೆ ತೆರಳಿದರು.

ಈ ಘಟನೆಯ ನೋಡಿದರೆ, ಜನರಿಗೆ ಗ್ಯಾರಂಟಿ ಎಂಬ ಆಮಿಶ ತೋರಿಸಿ ಅಧಿಕಾರ ಹಿಡಿದ ಸಿದ್ಧರಾಮಯ್ಯ ಸರ್ಕಾರ ಅಧಿಕಾರದ ಎಲ್ಲ ದಾರಿಗಳನ್ನು ಉಪಯೋಗಿಸಿ ಈ ನೆಲದ ಶೃದ್ಧೆಗಳನ್ನು ಅವಮಾನಿಸುವ ಪಣತೊಟ್ಟಂತೆ ಇದೆ.

ಕಾಪಿ ತಡೆಯುವ ನೆಪದಲ್ಲಿ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಮಹಿಳೆಯರ ಮೂಗುಬಟ್ಟನ್ನು ತೆಗೆದರೆ(ತೆಗೆಯಲು ಬರದಿದ್ದರೆ ಕತ್ತರಿಸಿದರೆ) ಮಾತ್ರ ಪರಿಕ್ಷೆಗೆ ಒಳಗೆ ಪ್ರವೇಶ ಎಂಬ ತುಘಲಕ್ ನಡೆ ನಡೆಸಿರುವುದು ಅಧಿಕಾರ ದುರುಪಯೋಗ ಮಾಡಿಕೊಂಡು ಆಳುವವರು ಈ ನೆಲದ ಮಹಿಳೆಯರ ಭಾವನೆಗಳಿಗೆ ಧಕ್ಕೆ ಮಾಡುವ ಕುತಂತ್ರ ನಡೆಸಿದ್ದಾರೆ ಎನ್ನುವದರ ಸಾಕ್ಷಿ ಆಗಿದೆ.

ಅಂದಹಾಗೆ ಅದ್ಯಾವ ಮಾಯೆಯಿಂದ ಮೂಗಬೊಟ್ಟು ಉಪಯೋಗಿಸಿ ಹೇಗೆ ಕಾಪಿ ಹೊಡೆಯುತ್ತಾರೆ? ಎಂಬ ಪರಮ ರಹಸ್ಯವನ್ನು ಈ ತುಘಲಕ್ ಆದೇಶ ಮಾಡಿದವರೇ ಹೇಳಬೇಕು ಅನ್ನೋದು ಕೆಲವರ ಅಭಿಪ್ರಾಯ.