Home News Kodi Mutt Shri: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ – ನಿಜವಾಯ್ತು ಕೋಡಿ ಶ್ರೀಗಳು...

Kodi Mutt Shri: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ – ನಿಜವಾಯ್ತು ಕೋಡಿ ಶ್ರೀಗಳು ನುಡಿದ ಭವಿಷ್ಯ!!

Hindu neighbor gifts plot of land

Hindu neighbour gifts land to Muslim journalist

Kodi Mutt Shri ಗಳ ಭವಿಷ್ಯಕ್ಕೆ ತುಂಬಾ ಮಹತ್ವವಿದೆ. ಅವರ ಎಲ್ಲಾ ಭವಿಷ್ಯಗಳು ನಿಜವಾಗಿವೆ. ರಾಜಕೀಯವಾಗಿ, ಜಾಗತಿಕವಾಗಿ, ರಾಷ್ಟ್ರದ ವಿಚಾರವಾಗಿ ಹಾಗೂ ಮಳೆ, ಬೆಳೆ, ಪ್ರವಾಹಗಳ ಕುರಿತಾಗಿಯೂ ಅವರು ಭವಿಷ್ಯ ನುಡಿದಿದ್ದು ಅವೆಲ್ಲವೂ ಸಂಭವಿಸಿವೆ, ಸಂಭವಿಸುತ್ತಿವೆ. ಅಂತೆಯೇ ಇದೀಗ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಾವಿನ ವಿಚಾರವಾಗಿಯೂ ಕೂಡ ಕೋಡಿ ಶ್ರೀಗಳ ಭವಿಷ್ಯ ನಿಜವಾಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದ ಭವಿಷ್ಯ ಕೂಡ ನಿಜವಾಗಿದೆ. ಅದೇನೆಂದರೆ ಈ ವರ್ಷದ ಜೂನ್‌ 25 ರಂದು ಧಾರವಾಡದಲ್ಲಿ ಮಾತನಾಡುವ ವೇಳೆ, ಭಾರತೀಯ ಪರಂಪರೆಯ ಪ್ರಕಾರ ಪ್ರಸ್ತುತ ನಾವು ಕ್ರೋಧಿನಾಮ ಸಂವತ್ಸರದಲ್ಲಿದ್ದು, ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗಲಿದೆ, ಇಬ್ಬರು ಪ್ರಧಾನಿಗಳು ಸಾಯುತ್ತಾರೆ ಎಂದು ಹೇಳಿದ್ದರು. ಹೀಗಾಗಿ ಇದೀಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗಿದೆ.

ಶ್ರೀಗಳು ಹೇಳಿದ್ದೇನು?
ಈ ವರ್ಷದ ಜೂನ್‌ ತಿಂಗಳಲ್ಲಿ ಧಾರವಾಡದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಶ್ರೀಗಳು, ಭಾರತೀಯ ಪರಂಪರೆಯ ಪ್ರಕಾರ ಪ್ರಸ್ತುತ ನಾವು ಕ್ರೋಧಿನಾಮ ಸಂವತ್ಸರದಲ್ಲಿದ್ದು, ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗಲಿದೆ ಎಂದು ಹೇಳಿದ್ದರು. ಅವರು 4 ತಿಂಗಳ ಮೊದಲೇ ಹೇಳಿದಂತೆ ವಿದೇಶದಲ್ಲಿ ಭೀಕರ ಮಳೆಯಾಗ್ತದೆ, ಇಬ್ಬರು ಪ್ರಧಾನಿಗಳು ಸಾಯುತ್ತಾರೆ, ಸಾವು ನೋವುಗಳು ಸಂಭವಿಸುತ್ತವೆ, ದೊಡ್ಡ ದೊಡ್ಡವರಿಗೆ ಭಾರಿ ದುಃಖ, ನೋವು, ತಾಪ ಎದುರಾಗುತ್ತದೆ ಎಂದು ಹೇಳಿದ್ದರು.

ಕೆಲವು ತಿಂಗಳ ಹಿಂದೆ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್‌ ದುರಂತದಲ್ಲಿ ಕೊನೆಯುಸಿರೆಳೆದಿದ್ದರು. ಅದೇ ರೀತಿ ಈಗ ವರ್ಷದ ಕೊನೆಯ ಹಂತದಲ್ಲಿ ಮನಮೋಹನ್‌ ಸಿಂಗ್‌ ನಿಧನದೊಂದಿಗೆ ಅವರು ನುಡಿದಿದ್ದ ಪ್ರಮುಖ ಮಾತು ನಿಜವಾಗಿದೆ. ಶ್ರೀಗಳು ನುಡಿದ ರೀತಿ ಆಗಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.