Home News Dress Code: ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ, ಶಾರ್ಟ್ಸ್, ಜಾರಿದ ಜೀನ್ಸ್ ತೊಟ್ಟವರಿಗೆ ಪ್ರವೇಶ ನಿಷಿದ್ಧ

Dress Code: ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ, ಶಾರ್ಟ್ಸ್, ಜಾರಿದ ಜೀನ್ಸ್ ತೊಟ್ಟವರಿಗೆ ಪ್ರವೇಶ ನಿಷಿದ್ಧ

Dress Code
Image source: Pinterest

Hindu neighbor gifts plot of land

Hindu neighbour gifts land to Muslim journalist

Dress Code: ವಿದ್ಯಾಮಂದಿರ ಮತ್ತು ದೇವಾಲಯಗಳಲ್ಲಿ ವಿನಯತೆ, ಶ್ರದ್ಧೆ ಭಕ್ತಿಯಲ್ಲಿ ಸಮಾನ ಪ್ರಾಧಾನ್ಯತೆ ಹೊಂದಿದೆ ಎಂದರೆ ತಪ್ಪಾಗಲಾರದು. ಅಂತೆಯೇ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಬರಬೇಕು ಎಂಬ ನಿಯಮದಂತೆ, ಇದೀಗ ದೇವಾಲಯಗಳಲ್ಲೂ ವಸ್ತ್ರಸಂಹಿತೆ( Dress Code) ಜಾರಿಗೆ ಬಂದಿದ್ದು, ಹರಿದ ಜೀನ್ಸ್‌, ಶಾರ್ಟ್ಸ್‌ ಸೇರಿ ಮೈ ಕಾಣುವ ಯಾವುದೇ ಬಟ್ಟೆಗಳನ್ನು ಧರಿಸಿ ಬರುವ ಹೆಣ್ಣುಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಹೌದು, ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ 16 ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ದೇವಾಲಯಗಳ ಎದುರು ಈ ಕುರಿತು ಬೋರ್ಡ್‌ಗಳನ್ನು ಹಾಕಲಾಗಿದೆ. “ಮೈ ಕಾಣಿಸುವ, ಪ್ರಚೋದನಾತ್ಮಕವಾಗಿರುವ ಅಥವಾ ಅಸಭ್ಯ ಎನಿಸುವ ಉಡುಪುಗಳನ್ನು ಧರಿಸಿ ಬರುವವರಿಗೆ ದೇವಾಲಯದ ಆವರಣಕ್ಕೆ ಪ್ರವೇಶವಿಲ್ಲ” ಎಂದು ಬೋರ್ಡ್‌ಗಳ ಮೇಲೆ ಮರಾಠಿಯಲ್ಲಿ ಬರೆಯಲಾಗಿದೆ.

ಈಗಾಗಲೇ ನಾಗ್ಪುರದ ನಾಲ್ಕು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಧಂತೋಲಿಯಲ್ಲಿರುವ ಗೋಪಾಲಕೃಷ್ಣ ದೇವಾಲಯ, ಕನೋಲಿಬರದಲ್ಲಿರುವ ಬೃಹಸ್ಪತಿ ದೇವಾಲಯ ಸೇರಿ ನಾಲ್ಕು ದೇವಾಲಯಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ಮಹಾರಾಷ್ಟ್ರ ಮಂದಿರ ಮಹಾಸಂಘವು ಈ ತೀರ್ಮಾನ ತೆಗೆದುಕೊಂಡಿದೆ.

ಸದ್ಯ ಮಂದಿರ ಮಹಾಸಂಘ ಹಾಗೂ ಹಿಂದೂ ಜನಜಾಗೃತಿ ಸಂಘಟನೆಗಳು ಹೊಸ ನಿಯಮ ಜಾರಿಗೆ ತಂದಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಮುಂದಿನ ಎರಡು ತಿಂಗಳಲ್ಲಿ ಅಹ್ಮದ್‌ನಗರ ಜಿಲ್ಲೆ ಸೇರಿ ರಾಜ್ಯಾದ್ಯಂತ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಂಘಟನೆಗಳು ತಿಳಿಸಿವೆ. ಇದಲ್ಲದೆ, ಸರ್ಕಾರದ ವ್ಯಾಪ್ತಿಯ ಶಿರಡಿ ಸಾಯಿಬಾಬಾ ಸೇರಿ ಹಲವು ದೇವಾಲಯಗಳಲ್ಲಿ ಸರ್ಕಾರ ಕೂಡ ಇಂತಹ ವಸ್ತ್ರಸಂಹಿತೆಯ ನಿಯಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿವೆ.

ಇದನ್ನೂ ಓದಿ: Free Electricity: ಇವರಿಗೆ ಮಾತ್ರ 200 ಯೂನಿಟ್ ವಿದ್ಯುತ್ ?: ನಿಮಗೂ ವಿದ್ಯುತ್ ಉಚಿತ ಸಿಗಲು ಜಸ್ಟ್ ಈ ರೂಲ್ಸ್ ಫಾಲೋ ಮಾಡಿ!