Home News Viral Video : ರೈಲು ಹಳಿಯ ಬಳಿಯೇ ಮರಿಗೆ ಜನ್ಮ ನೀಡಿದ ಆನೆ – 2...

Viral Video : ರೈಲು ಹಳಿಯ ಬಳಿಯೇ ಮರಿಗೆ ಜನ್ಮ ನೀಡಿದ ಆನೆ – 2 ಗಂಟೆ ನಿಂತು ಮತ್ತೆ ಚಲಿಸಿದ ರೈಲು, ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

Hindu neighbor gifts plot of land

Hindu neighbour gifts land to Muslim journalist

Viral Video : ಜಾರ್ಖಂಡ್‌ನ ಬರ್ಕಾಕನ ಹಾಗೂ ಹಾಜಿರ್‌ಬಾಗ್ ರೈಲು ನಿಲ್ದಾಣಗಳ ನಡುವಿನ ಕಾಡು ಪ್ರದೇಶದಲ್ಲಿ ಗರ್ಭಿಣಿ ಆನೆಯೊಂದು ರೈಲು ಹಳಿಗಳ ಪಕ್ಕದಲ್ಲಿಯೇ ಮರಿಗೆ ಜನ್ಮ ನೀಡಲು ಮುಂದಾಗಿತ್ತು. ಹೀಗಾಗಿ ರೈಲು 2 ಗಂಟೆಗಳ ಕಾಲ ನಿಂತು ಮತ್ತೆ ಸಂಚರಿಸಿದ ಘಟನೆ ನಡೆದಿದೆ.

ಹೌದು, ಸರಿಸುಮಾರು ಮುಂಜಾನೆ 3 ಗಂಟೆ ಸಮಯ. ವೈಗವಾಗಿ ಗೂಡ್ಸ್ ರೈಲು ಬರ್ಕಾಕಾನ ಹಾಗೂ ಹಜರಿಬಾಗ್ ರೈಲು ನಿಲ್ದಾಣಗಳ ನಡುವೆ ಸಾಗಿತ್ತು. ಕಲ್ಲಿದ್ದಲು ತುಂಬಿಕೊಂಡು ರೈಲು ಸಾಗಿತ್ತು. ಆದರೆ ಇದೇ ಕಾಡು ಪ್ರದೇಶದಲ್ಲಿ ಗರ್ಭಿಣಿ ಆನೆ ಪ್ರಸವ ವೇದನೆಯಿಂದ ತಿರುಗಾಡುತ್ತಿರುವುದನ್ನು ಅರಣ್ಯಾಧಿಕಾರಿಗಳು ಗಮಿನಿಸಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಕಾಡಾನೆ ಅತ್ತಿಂದಿತ್ತ ಓಡಾಡಿ ಕೊನೆಗೆ ರೈಲು ಹಳಿಯತ್ತ ಆಗಮಿಸಿದೆ. ತಕ್ಷಣವೇ ಅರಣ್ಯಾಧಿಕಾರಿಗಳು ರೈಲು ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ರೈಲು ಹಳಿ ಮೂಲಕ ಸಾಗುವ ರೈಲನ್ನು ನಿಲ್ಲಿಸಲು ಸೂಚಿಸಿದ್ದಾರೆ. ಅದೇ ಸಮಯಕ್ಕೆ ಈ ಮಾರ್ಗವಾಗಿ ಬಂದ ಗೂಡ್ಸ್ ರೈಲು ಅಲ್ಲಿಯೇ ನಿಂತಿದೆ.

ಮರಿ ಆನೆ ಹಾಗೂ ತಾಯಿ ಆನೆ ಮರಿ ಹಳಿಯಿಂದ ದಾಟಿ ಹೋಗುವವರೆಗೂ ರೈಲನ್ನು ನಿಲ್ಲಿಸಲಾಗಿದೆ. ಎರಡೂ ಆನೆಗಳು ಹಳಿ ದಾಟಿದ ಮೇಲಷ್ಟೇ ರೈಲು ಮುಂದಕ್ಕೆ ಹೋಗಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು. ಜನ ರೈಲು ಡ್ರೈವರ್‌ನ ಸಮಯ ಪ್ರಜ್ಞೆಗೆ ಫಿದಾ ಆಗಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು, ಮಾನವ-ಪ್ರಾಣಿ ಸಂಘರ್ಷದ ನಡುವೆ ಈ ವಿಡಿಯೋ ಮಾನವ-ಪ್ರಾಣಿ ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ತೋರಿಸುತ್ತದೆ. ಈ ವಿಡಿಯೋವನ್ನು ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ

ಇದನ್ನೂ ಓದಿ: Fake License: ಬಂದೂಕು ಸೌಲಭ್ಯ ದುರುಪಯೋಗ – ಲೈಸನ್ಸ್‌ಗಾಗಿ ನಕಲಿ ದಾಖಲೆ ಸೃಷ್ಟಿ