Home News Dr Manjunath : ಶಾಸಕ ಮುನಿರತ್ನಗೆ ಮೊಟ್ಟೆ ದಾಳಿ ಪ್ರಕರಣ – ಆಸ್ಪತ್ರೆಗೆ ಭೇಟಿ ನೀಡಿದ...

Dr Manjunath : ಶಾಸಕ ಮುನಿರತ್ನಗೆ ಮೊಟ್ಟೆ ದಾಳಿ ಪ್ರಕರಣ – ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ಡಾ. ಮಂಜುನಾಥ್

Hindu neighbor gifts plot of land

Hindu neighbour gifts land to Muslim journalist

Dr Manjunath : ಬೆಂಗಳೂರಿನ ಆರ್‌ಆರ್ ನಗರ (RR Nagar) ಕ್ಷೇತ್ರದ ಬಿಜೆಪಿ ಶಾಸಕ (BJP MLA) ಮುನಿರತ್ನ (Munirathna) ಅವರ ಮೇಲೆ ಕಿಡಿಗೇಡಿಗಳು ಮೊಟ್ಟೆ ದಾಳಿ (Attack) ಮಾಡಿದ್ದು ವೈದ್ಯರ ಸಲಹೆಯ ಮೇರೆಗೆ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ (KC General Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ಸಂಸದ ಡಾಕ್ಟರ್ ಸಿಎನ್ ಮಂಜುನಾಥ್(Dr Manjunath)ಅವರು ಮುನಿರತ್ನ ಅವರನ್ನು ಭೇಟಿಮಾಡಿದ್ದಾರೆ.

ಮುನಿರತ್ನ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಸಂಸದ ಡಾ. ಮಂಜುನಾಥ್ ಅವರು, ನಾನು ಮುನಿರತ್ನ ಅವರನ್ನು ನೋಡಿ ಅವರ ಜೊತೆ ಮಾತನಾಡಿದೆ, ಪರೀಕ್ಷೆ ಸಹ ಮಾಡಿದೆ. ಅವರ ತಲೆಗೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ, ಕೆಮಿಕಲ್‌ ಮಾದರಿಯ ಪದಾರ್ಥದಿಂದ ಹೊಡೆದಿದ್ದಾರೆ. ಕೆಮಿಕಲ್‌ ಮಾದರಿಯ ಪದಾರ್ಥದಿಂದ ಅವರಿಗೆ ಹೊಡೆದಿದ್ದಾರೆ. ಇದರಿಂದ ತಲೆ ಸುತ್ತು, ವಾಂತಿ ಬಂದಂತೆ ಆಗುತ್ತಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊಟ್ಟೆ ದಾಳಿಯಿಂದ ಮುನಿರತ್ನ ಕೂದಲು ಸ್ವಲ್ಪ ಬರ್ನ್ ಆಗಿದೆ. ಹಲವು ತಿಂಗಳಿಂದ ಕೆಲವು ರಾಜಕೀಯ ಘಟನೆಗಳನ್ನು ನೋಡಿದ್ರೆ ಮುನಿರತ್ನ ನಾಯ್ಡುಗೆ ಟಾರ್ಗೆಟ್ ಮಾಡುತ್ತಿದ್ದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ರಾಜಕೀಯ ಮಾಡಬೇಕು ಎಂದರು.