Home News Medical College: ಮೆಡಿಕಲ್ ಕಾಲೇಜು ನಿರೀಕ್ಷೆ ಸುಳ್ಳಾಗಿದೆ! ಮುಂದಿನ ಕ್ರಮವಾದರು ಏನು!

Medical College: ಮೆಡಿಕಲ್ ಕಾಲೇಜು ನಿರೀಕ್ಷೆ ಸುಳ್ಳಾಗಿದೆ! ಮುಂದಿನ ಕ್ರಮವಾದರು ಏನು!

Medical College
Image source: Zee nws

Hindu neighbor gifts plot of land

Hindu neighbour gifts land to Muslim journalist

Medical College: ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಈ ಕುರಿತು 2021-22 ನೇ ಸಾಲಿನಲ್ಲಿ ಸರ್ಕಾರ ಆದೇಶ ಮಾಡಿತ್ತು. ಆದರೆ ಮೆಡಿಕಲ್ ಕಾಲೇಜು(Medical College) ನಿರ್ಮಾಣ ನಿರೀಕ್ಷೆಯಲ್ಲಿ ಇದ್ದ ವಿದ್ಯಾರ್ಥಿಗಳ ಕನಸು ಹುಸಿಯಾಗಿದೆ.

ಹೌದು, ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಹಿಂದಿನಿಂದ ಈ ವಿಚಾರ ಚರ್ಚೆಯಲ್ಲೇ (Discussion) ಇತ್ತು ಹೊರತಾಗಿ ಕಾರ್ಯರೂಪಕ್ಕೆ ಬಂದಿರಲಿಲ್ಲ. ಬಿಎಸ್ ವೈ ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ಆರಂಭ ಮಾಡುವುದಾಗಿ ತಿಳಿಸಲಾಗಿತ್ತು. ಅಲ್ಲದೆ ಜಿಲ್ಲೆಯ DMF ಹಣದಲ್ಲಿ 500 ಕೋಟಿ ಹಣ ಮೀಸಲಿಡಲು ಆದೇಶ ನೀಡಲಾಗಿತ್ತು.

ಮುಖ್ಯವಾಗಿ ಇನ್ನೊಂದಿಷ್ಟು ಜನರಿಗೆ ತಮ್ಮ ಹತ್ತಿರದ ಪ್ರದೇಶದಲ್ಲಿ ಉದ್ಯೋಗ ಕೂಡಾ ಸೃಷ್ಟಿಯಾಗುತ್ತಿತ್ತು. ಆದರೆ ಈಗ ಅದೂ ಇಲ್ಲದಂತಾಗಿದೆ. ಮೆಡಿಕಲ್‌ ಕಾಲೇಜಿಗೆ ಒಂದು ರೂಪಾಯಿಯೂ ಹಣ ಬಿಡುಗಡೆ ಇಲ್ಲ ಎಂದು ಹೇಳಲಾಗುತ್ತಿದೆ. ಇಲ್ಲಿವರೆಗೆ ಮೆಡಿಕಲ್ ಕಾಲೇಜು ಪ್ರಾರಂಭ ಎನ್ನುತ್ತಿದ್ದ ಜನಪ್ರತಿನಿಧಿಗಳು ಈಗ ಮಾತ್ರ ಆ ಬಗ್ಗೆ ಮಾತೇ ಆಡುತ್ತಿಲ್ಲ. ಇದರ ನಡುವೆ ಹಣ ಮಂಜೂರಾಗುವುದಿಲ್ಲ, ಮೆಡಿಕಲ್ ಕಾಲೇಜು ನಿರ್ಮಾಣವಾಗಲ್ಲ ಎಂಬ ಅಧಿಕೃತ ಹೇಳಿಕೆ ಕೂಡಾ ಹೊರಬಿದ್ದಿದೆ.

ದಶಕಗಳಿಂದ ಹೋರಾಟ ಮಾಡಿದ್ದ ಜಿಲ್ಲೆಯ ಹಲವು ಸಂಘಟನೆಗಳು ಈ ಕಾಲೇಜ್ ಆರಂಭವಾಗುತ್ತದೆ ಎಂಬ ಕನಸು ಕಾಣುತ್ತಿದ್ದರು. ಇದೀಗ 2023-24 ರ ಸಾಲಿಗೆ ಪ್ರಾರಂಭ ವಾಗಬೇಕಿದ್ದ ಮೆಡಿಕಲ್ ಕಾಲೇಜು ಹಣ ಬಿಡುಗಡೆ ಆಗದೆ, ಸ್ಥಳ ನಿಗದಿ ಆಗದೆ ಪ್ರಕ್ರಿಯೆ ನಿಂತು ಹೋಗಿದೆ.

ಸದ್ಯ ಮಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಇಲ್ಲ ಎಂದಿರುವ ಎಲ್ಲರಿಗೂ ಬೇಸರ ತಂದಿದೆ. ಮೆಡಿಕಲ್ ಕಾಲೇಜು ವಿಶೇಷ ಆಧಿಕಾರಿ ಯುವರಾಜ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಣ ಬಿಡುಗಡೆ ಆಗದ ವಿಚಾರಕ್ಕೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿ, ಬಜೆಟ್ ತೀರ್ಮಾನ ಆದ ತಕ್ಷಣ ಹಣ ಬಿಡುಗಡೆ ಆಗೋದಿಲ್ಲ.ಇದು ಕೇವಲ ಕ್ಯಾಬಿನೆಟ್ ತೀರ್ಮಾನ ಅಲ್ಲ , ಬಜೆಟ್ ಘೋಷಣೆ. ಅದಕ್ಕೆ ಪ್ರೊಸಿಜರ್ ಇದೆ ಎಂದು ಹೇಳಿದ್ದಾರೆ.

ಇನ್ನು ಕೇಂದ್ರ ಸರ್ಕಾರಕ್ಕೆ, ಮೆಡಿಕಲ್ ಅಸೋಸಿಯೇಶನ್ ರಿಪೋಟ್ ಮಾಡುತ್ತದೆ. ಟೆಕ್ನಿಕಲ್‌ಟೀಂ ರಿಪೋರ್ಟ್ ಮಾಡುತ್ತದೆ ಅದಕ್ಕೆ 5-6 ತಿಂಗಳಾಗಿದೆ. ಹಣವಿದೆ, ಅದು ತಾಂತ್ರಿಕವಾಗಿ ಟ್ರಾನ್ಫರ್ ಆಗಿಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಭರವಸೆಗೂ, ನಿರೀಕ್ಷೆಗೂ ಒಂದಕ್ಕೊಂದು ಸಂಬಂಧ ಇಲ್ಲದಂತೆ ಆಗಿದೆ.

ಇದನ್ನೂ ಓದಿ: Court Recruitment 2023: ಮೈಸೂರು ಕೋರ್ಟ್ ನಲ್ಲಿ ಖಾಯಂ ಹುದ್ದೆ ಪಡೆಯಲು ಸುವರ್ಣ ಅವಕಾಶ! ಅರ್ಜಿ ಸಲ್ಲಿಕೆಗೆ ಗ್ರೀನ್ ಸಿಗ್ನಲ್