Home News Dowry Dispute: ವರದಕ್ಷಿಣೆ ಕಿರುಕುಳ: ಸೊಸೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹಾವು ಬಿಟ್ಟ ಅತ್ತೆ-ಮಾವ

Dowry Dispute: ವರದಕ್ಷಿಣೆ ಕಿರುಕುಳ: ಸೊಸೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹಾವು ಬಿಟ್ಟ ಅತ್ತೆ-ಮಾವ

Plants

Hindu neighbor gifts plot of land

Hindu neighbour gifts land to Muslim journalist

Dowry Dispute: ವರದಕ್ಷಿಣೆ ನೀಡದ ಕಾರಣ ಕಾನ್ಪುರದ ನವವಿವಾಹಿತ ಮಹಿಳೆಯನ್ನು ಆಕೆಯ ಅತ್ತೆ ಮಾವ ಕೋಣೆಯೊಳಗೆ ಕೂಡಿಹಾಕಿ, ಅಲ್ಲಿ ಹಾವನ್ನು ಬಿಟ್ಟ ಘಟನೆ ನಡೆದಿದೆ. ಹಾವು ಕಚ್ಚಿದ ನಂತರ ಮಹಿಳೆಯ ಸ್ಥಿತಿ ಹದಗೆಟ್ಟರೂ, ಆಕೆಗೆ ಸಹಾಯ ಮಾಡಲಿಲ್ಲ. ಆಕೆಯ ಸಹೋದರಿ ಮಧ್ಯಪ್ರವೇಶಿಸಿದ ನಂತರ ಕೊನೆಗೆ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಈ ಘಟನೆ ಸೆಪ್ಟೆಂಬರ್ 18 ರಂದು ನಗರದ ಕರ್ನಲ್ಗಂಜ್‌ನಲ್ಲಿ ನಡೆದಿದೆ. ಮಹಿಳೆಯ ಸಹೋದರಿ ರಿಜ್ವಾನಾ ಮಾತನಾಡಿ, ರೇಷ್ಮಾಳನ್ನು ಕೋಣೆಯಲ್ಲಿ ಬಂಧಿಸಿ, ಹಾವನ್ನು ಬಿಡಲಾಯಿತು. ತಡರಾತ್ರಿ, ಹಾವು ರೇಷ್ಮಾಳ ಕಾಲಿಗೆ ಕಚ್ಚಿದೆ. ನೋವಿನಿಂದ ಕಿರುಚಿಕೊಂಡರೂ ಗಂಡನ ಕುಟುಂಬ ಸದಸ್ಯರು ಬಾಗಿಲು ತೆರೆಯದೆ ಹೊರಗೆ ನಿಂತು ನಗುತ್ತಿದ್ದರು.

ಹೇಗೋ, ರೇಷ್ಮಾ ರಿಜ್ವಾನಾ ಅವರನ್ನು ಫೋನ್ ಮೂಲಕ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಆಕೆ ಕೂಡಲೇ ಬಂದಿದ್ದು, ರಿಜ್ವಾನಾ ಗಂಭೀರ ಸ್ಥಿತಿಯಲ್ಲಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಅಲ್ಲಿ ಮಹಿಳೆಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.

ಮಾರ್ಚ್ 19, 2021 ರಂದು ಶಹನವಾಜ್ ಅವರನ್ನು ರೇಷ್ಮಾ ಮದುವೆಯಾದ ಸ್ವಲ್ಪ ಸಮಯದ ನಂತರ ಸಮಸ್ಯೆಗಳು ಪ್ರಾರಂಭವಾದವು ಎಂದು ರಿಜ್ವಾನಾ ಹೇಳಿದರು. ಮದುವೆಯಾದಾಗಿನಿಂದ, ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಅವಳನ್ನು ನಿಂದಿಸಲು ಮತ್ತು ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ, ಮಹಿಳೆಯ ಕುಟುಂಬವು ವರದಕ್ಷಿಣೆಯಾಗಿ 1.5 ಲಕ್ಷ ರೂ.ಗಳನ್ನು ನೀಡಿತ್ತು, ಆದರೆ ಹೆಚ್ಚುವರಿ ವರದಕ್ಷಿಣೆಯಾಗಿ 5 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದು, ಕೊಡದ ಕಾರಣ ಸೊಸೆಯನ್ನು ಸಾಯಿಸಲು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ:Madhu Bangarappa: ಜಾತಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಸಿಹಿ ಸುದ್ದಿ

ರಿಜ್ವಾನಾ ಅವರ ದೂರಿನ ಆಧಾರದ ಮೇಲೆ, ಪೊಲೀಸರು ಶಹನವಾಜ್, ಅವರ ಪೋಷಕರು, ಅಣ್ಣ, ತಂಗಿ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.