Home News Adhar Card: ಆಧಾರ್ ಕಾರ್ಡ್ ಕಳೆದು ಹೋದ್ರೆ ಡೋಂಟ್ ವರಿ – ಜಸ್ಟ್ ಈ ನಂಬರಿಗೆ...

Adhar Card: ಆಧಾರ್ ಕಾರ್ಡ್ ಕಳೆದು ಹೋದ್ರೆ ಡೋಂಟ್ ವರಿ – ಜಸ್ಟ್ ಈ ನಂಬರಿಗೆ ಕಾಲ್ ಕೊಡಿ, ಕ್ಷಣದಲ್ಲಿ ಪಡೆಯಿರಿ

Hindu neighbor gifts plot of land

Hindu neighbour gifts land to Muslim journalist

Adhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಗಡಿಬಿಡಿಯಿಂದಾಗಿ ನಾವು ಆಧಾರ್ ಕಾರ್ಡ್ ಅನ್ನು ಕಳೆದುಕೊಳ್ಳುತ್ತೇವೆ. ನಂತರ ಇದನ್ನು ಪಡೆಯಬೇಕಾದರೆ ಕೆಲವೊಮ್ಮೆ ನಿಯಮಗಳನ್ನು ಅನುಸರಿಸಬೇಕು. ಆದರೆ ಇನ್ನು ಮುಂದೆ ಆ ಚಿಂತೆ ಬೇಕಿಲ್ಲ. ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ ತಕ್ಷಣ ಈ ನಂಬರಿಗೆ ಕರೆ ಮಾಡಿದರೆ ಸಾಕು. ಕೆಲವೇ ಹೊತ್ತಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಕೈ ಸೇರುತ್ತದೆ.

ಹೌದು, ಇನ್ಮೇಲೆ ಆಧಾರ್‌ ಕಾರ್ಡ್‌ ಕಳೆದುಹೋದ್ರೆ ಅಥವಾ ಆಧಾರ್‌ ನಂಬರ್‌ ಮರೆತುಹೋಗಿದ್ರೆ ಚಿಂತಿಸಬೇಡಿ. UIDAI ತಂದಿರುವ ಹೊಸ ಸೇವೆಯ ಮೂಲಕ ಕೇವಲ ಒಂದೇ ಒಂದು ಕಾಲ್‌ ಅಥವಾ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೂಲಕ ನಿಮ್ಮ ಆಧಾರ್‌ ನಂಬರ್‌ ಅನ್ನು ಥಟ್‌ ಅಂತ ಮರಳಿ ಪಡೆಯಬಹುದು.

ಆಧಾರ್ ಕಾರ್ಡನ್ನು ಹೇಗೆ ಪಡೆಯುವುದು?

UIDAI ಜನರ ಅನುಕೂಲಕ್ಕಾಗಿ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. 1947 ನಂಬರ್‌ಗೆ ಕರೆ ಮಾಡಿದ್ರೆ ಸಾಕು ಕ್ಷಣ ಮಾತ್ರದಲ್ಲಿ ನೀವು ಆಧಾರ್‌ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.ಅದಕ್ಕಾಗಿ ನೀವು ನಿಮ್ಮ ಆಧಾರ್ ಲಿಂಕ್‌ ಆಗಿರುವ ಮೊಬೈಲ್ ಸಂಖ್ಯೆಯಿಂದ 1947 ಗೆ ಕರೆ ಮಾಡಿ.

ಅಲ್ಲಿ ನೀವು ಮಾತನಾಡಲು ಬಯಸುವ ಭಾಷೆಯನ್ನು ಆಯ್ಕೆ ಮಾಡಬೇಕು. (ಹಿಂದಿ, ಇಂಗ್ಲಿಷ್ ಅಥವಾ ಇತರ).

ನಂತರ ನೀವು “ಆಧಾರ್ ಸೇವೆಗಳು” ಅಥವಾ “ಆಧಾರ್ ಸ್ಟೇಟಸ್” ಎಂಬ ಆಯ್ಕೆಗಳನ್ನು ಸೆಲೆಕ್ಟ್‌ ಮಾಡಬೇಕು.

ಏಜೆಂಟ್‌ನೊಂದಿಗೆ ಮಾತನಾಡಲು ಆಯ್ಕೆ ಮಾಡಿ.

ನೀವು ಯಾರೆಂಬುದನ್ನು ಚೆಕ್‌ ಮಾಡಲು ನಿಮ್ಮ ಹೆಸರು, ಜನ್ಮ ದಿನಾಂಕ ಅಥವಾ ಪಿನ್‌ಕೋಡ್‌ನಂತಹ ಮಾಹಿತಿಯನ್ನು ನೀಡಬೇಕು.

ಈ ಎಲ್ಲಾ ಹಂತಗಳನ್ನು ಫಾಲೋ ಮಾಡಿದ ನಂತರ, ಏಜೆಂಟ್ ನಿಮ್ಮ ಎನ್‌ರೋಲ್‌ಮೆಂಟ್ ಐಡಿ (EID) ಅಥವಾ ಆಧಾರ್ ಸಂಖ್ಯೆಯನ್ನು (UID) ನಿಮಗೆ ನೀಡುವ ಪ್ರಯತ್ನ ಮಾಡುತ್ತಾರೆ.

ಈ ಸೌಲಭ್ಯವು 24×7 ಲಭ್ಯವಿದ್ದು, ಇದನ್ನು ಯಾವುದೇ ನೆಟ್‌ವರ್ಕ್‌ನಿಂದ ಪ್ರವೇಶಿಸಬಹುದು.

 

 

ಈ ಹಂತಗಳನ್ನು ಫಾಲೋ ಮಾಡಿ

ಮೊದಲಿಗೆ ಗೂಗಲ್‌ನಲ್ಲಿ https://uidai.gov.in ಗೆ ಹೋಗಿ.

ವೆಬ್‌ಸೈಟ್ ಓಪನ್‌ ಮಾಡಿದಾಗ “My Aadhaar” ಟ್ಯಾಬ್‌ಗೆ ಹೋಗಿ “Retrieve Lost or Forgotten UID/EID” ಮೇಲೆ ಕ್ಲಿಕ್ ಮಾಡಬೇಕು.

ಬಳಿಕ “Aadhaar Number” ಅಥವಾ “Enrollment ID” ಆಯ್ಕೆಮಾಡಿ.

ಅದಾದ ನಂತರ ನಿಮ್ಮ ಹೆಸರು, ಲಿಂಕ್‌ ಮಾಡಲಾದ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ನಮೂದಿಸಿ.

ಕ್ಯಾಪ್ಚಾ ಕೋಡ್ ಭರ್ತಿ ಮಾಡಿ “Send OTP” ಮೇಲೆ ಕ್ಲಿಕ್ ಮಾಡಬೇಕು.

ತಕ್ಷಣ ನಿಮ್ಮ ಮೊಬೈಲ್‌ಗೆ OTP ಬರುತ್ತದೆ, ಅದನ್ನು ಅಲ್ಲಿ ಸೇರಿಸಬೇಕು ಮತ್ತು “Verify OTP” ಮೇಲೆ ಕ್ಲಿಕ್ ಮಾಡಬೇಕು.

ಅಷ್ಟೆಲ್ಲಾ ಆದ ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ EID ಅನ್ನು ನಿಮ್ಮ ಮೊಬೈಲ್‌ಗೆ SMS ಮೂಲಕ ಕಳುಹಿಸಲಾಗುತ್ತದೆ.

ಇದನ್ನೂ ಓದಿ:RCB ಗೆ ವಿರಾಟ್ ಕೊಹ್ಲಿ ವಿದಾಯ?