Hindu neighbor gifts plot of land

Hindu neighbour gifts land to Muslim journalist

R V Deshpande : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿ ಯೋಜನೆಗಳ ಕುರಿತಾಗಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಆಗಾಗ ಸ್ವತಹ ಕಾಂಗ್ರೆಸ ಶಾಸಕರೇ ಈ ಗ್ಯಾರಂಟಿಗಳನ್ನು ಟೀಸುತ್ತಿದ್ದಾರೆ. ಇದೀಗ ಮತ್ತೊಬ್ಬ ಪ್ರಬಲ ಕಾಂಗ್ರೆಸ್ ನಾಯಕ ಹಾಗೂ ಶಾಸಕ ‘ಜನರಿಗೆ ಯಾವುದನ್ನು ಫ್ರೀ ಕೊಡಬೇಡಿ’ ಎಂದು ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ.

 

ಹೌದು, ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್ವಿ ದೇಶಪಾಂಡೆ ಕೂಡ ಉಚಿತ ಯೋಜನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಬಗ್ಗೆ ಅಪಸ್ವರ ಕೇಳಿಬರುತ್ತಿವೆ. ಉಚಿತ ಪ್ರಯಾಣ ಮಾಡಿದ್ದರಿಂದ ಹೆಚ್ಚಾಗಿ ಮಹಿಳೆಯರು ಬಸ್ನಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಗಂಡು ಮಕ್ಕಳಿಗೆ ಜಾಗ ಇಲ್ಲದಂತಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿವೆ. ಇದೀಗ ಆರ್.ವಿ ದೇಶಪಾಂಡೆ ಗ್ಯಾರೆಂಟಿ ಯೋಜನೆಗಳ ವಿರುದ್ಧ ಧ್ವನಿಯೆತ್ತಿದ್ದಾರೆ

 

ಕೊಪ್ಪಳದಲ್ಲಿಂದು ಮಾತನಾಡಿದ ದೇಶಪಾಂಡೆ, ಹೆಣ್ಮಕ್ಕಳು ಎಲ್ಲೊಂದರಲ್ಲಿ ಹೋಗುತ್ತಿದ್ದಾರೆ. ಹೀಗಾಗಿ ಗಂಡು ಮಕ್ಕಳಿಗೆ ಬಸ್ನಲ್ಲಿ ಹತ್ತಲು ಆಗುತ್ತಿಲ್ಲ. ಪರಿಸ್ಥಿತಿ ಕೆಟ್ಟದಾಗಿದೆ ಎಂದರು.

‘ಉಚಿತ ಯೋಜನೆಗಳು ಅಪಾಯಕಾರಿ’ಉಚಿತ ಕೊಡುಗೆ ಎಂಬುದು ಅಪಾಯಕಾರಿ ಎಂದು ಆರ್ವಿ ದೇಶಪಾಂಡೆ ಹೇಳಿದ್ದಾರೆ. ಉಚಿತ ಕೊಡುಗೆ ಎಂಬುದು ಅಪಾಯಕಾರಿ ಪದ. ಜನರಿಗೆ ಏನನ್ನೂ ಉಚಿತವಾಗಿ ನೀಡಬಾರದು ಮತ್ತು ಪ್ರತಿಯೊಂದು ಸೇವೆಗೂ ಶುಲ್ಕ ನಿಗದಿಪಡಿಸಬೇಕು ಎಂದು ಆರ್ವಿ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

 

 

 

 

 

ಇದನ್ನೂ ಓದಿ: HDK: ‘ಆ ಮಂತ್ರಿಯನ್ನು ಪಕ್ಕದಲ್ಲೇ ಕೂರಿಸಿಕೊಳ್ತಾರಲ್ಲ, ಸಿದ್ದರಾಮಯ್ಯಗೆ ನಾಚಿಕೆಯ ಆಗಲ್ವಾ?’ – ಕುಮಾರಸ್ವಾಮಿ ಹೀಗೆ ಹೇಳಿದ್ದು ಯಾರಿಗೆ