Home News K N Rajanna: ‘ಧರ್ಮಸ್ಥಳ ಸಂಘ’ ಮೈಕ್ರೋಫೈನಾನ್ಸ್ ವ್ಯಾಪ್ತಿಗೆ ಬರುತ್ತಾ ? ಸಹಕಾರ ಸಚಿವರು ಕೊಟ್ರು...

K N Rajanna: ‘ಧರ್ಮಸ್ಥಳ ಸಂಘ’ ಮೈಕ್ರೋಫೈನಾನ್ಸ್ ವ್ಯಾಪ್ತಿಗೆ ಬರುತ್ತಾ ? ಸಹಕಾರ ಸಚಿವರು ಕೊಟ್ರು ಬಿಗ್ ಅಪ್ಡೇಟ್

Hindu neighbor gifts plot of land

Hindu neighbour gifts land to Muslim journalist

K N Rajanna: ನಾಡಿನ ಪುಣ್ಯ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಗ್ರಾಮ ಅಭಿವೃದ್ಧಿ ಯೋಜನೆಯ ಧರ್ಮಸ್ಥಳ ಸಂಘದ ಕುರಿತು ಇತ್ತೀಚಿಗೆ ಹಲವು ಅಪಪ್ರಚಾರಗಳು, ಆರೋಪಗಳು ಕೇಳಿಬಂದಿದ್ದವು. ಈ ನಡುವೆ ಮೈಕ್ರೋ ಫೈನಾನ್ಸ್ ಅವರ ಹಾವಳಿ ಹೆಚ್ಚಾದಾಗ ಧರ್ಮಸ್ಥಳ ಸಂಘವು ಕೂಡ ಅದರ ವ್ಯಾಪ್ತಿಗೆ ಬರುತ್ತದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಈ ಕುರಿತು ಸಹಕಾರ ಸಚಿವ K Nರಾಜಣ್ಣ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಧರ್ಮಸ್ಥಳ ಸಂಘ (Dharmasthala Association)ಮೈಕ್ರೋ ಫೈನಾನ್ಸ್‌ ವ್ಯಾಪ್ತಿಗೆ ಬರಲ್ಲ ಅಂತ ಸಚಿವ ಕೆ.ಎನ್‌ ರಾಜಣ್ಣ (KN Rajanna) ಹೇಳಿದ್ದಾರೆ. ಹಾಸನದಲ್ಲಿ (Hassan) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಧರ್ಮಸ್ಥಳ ಸಂಘದ ಸಾಲ ಸೌಲಭ್ಯದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದಾಗ ಅವರು ಈ ಸ್ಪಷ್ಟಿಕರಣ ನೀಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು ‘ಮೈಕ್ರೋ ಫೈನಾನ್ಸ್ (Micro Finance) ವ್ಯಾಪ್ತಿಯಲ್ಲಿ ಧರ್ಮಸ್ಥಳ ಸಂಘ ಬರಲ್ಲ. ಅವರು ಗ್ರಾಮೀಣ ಯೋಜನೆ ಅಂತ ಮಾಡಿಕೊಂಡಿದ್ದಾರೆ. ಸ್ವ-ಸಹಾಯ ಸಂಘ ಮಾಡಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವ-ಸಹಾಯ ಸಂಘಗಳಿಗೆ ಅವರು ಸಾಲ ಕೊಡ್ತಾರೆ. ಧರ್ಮಸ್ಥಳದ ಹಣ ಅನ್ನುತ್ತಿದ್ದಂತೆ ಯಾರೂ ಸಹ ಉಳಿಸಿಕೊಳ್ಳಲ್ಲ. ಅವರು ಹೀಗೆ ಕಿರುಕುಳ ನೀಡಿದ್ದಾರೆ ಅಂತ ನಮಗೆ ಯಾವುದೇ ದೂರು ಬಂದಿಲ್ಲ’ ಎಂದು ಹೇಳಿದರು.