Home News H D kumarswamy: ಡಿ ಕೆ ಶಿವಕುಮಾರ್ ಒಬ್ಬ ನಪುಂಸಕ, ಗಂಡಸ್ತನ ರಾಜಕೀಯ ಮಾಡಲು ಅವನಿಗೆ...

H D kumarswamy: ಡಿ ಕೆ ಶಿವಕುಮಾರ್ ಒಬ್ಬ ನಪುಂಸಕ, ಗಂಡಸ್ತನ ರಾಜಕೀಯ ಮಾಡಲು ಅವನಿಗೆ ಬರಲ್ಲ – ಡಿಕೆಶಿ ವಿರುದ್ಧ HDK ವಾಗ್ದಾಳಿ !!

H D Kumarswamy

Hindu neighbor gifts plot of land

Hindu neighbour gifts land to Muslim journalist

H D Kumarswamy: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D kumarswamy) ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K.Shivkumar) ವಿರುದ್ಧ ವಾಗ್ದಾಳಿ ನಡೆಸಿದ್ದು, ಶಿವಕುಮಾರ್ ಅವರನ್ನು ನಪುಂಸಕ ಎಂದು ಜರಿದಿದ್ದಾರೆ.

ನಿನ್ನೆ(ಆ 9) ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಶಿವಕುಮಾರ್‌ಗೆ ವ್ಯಕ್ತಿತ್ವ ಎಂಬುದಿದೆಯಾ? ಆತನದ್ದು ಒಂದು ನಾಲಿಗೆನಾ.. ಆತ ಮನುಷ್ಯನಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧೈರ್ಯವಿದ್ದರೆ ಗಂಡಸ್ತನದಿಂದ ರಾಜಕೀಯ ಮಾಡಬೇಕು. ನಪುಂಸಕನ ಕೆಲಸ ಮಾಡುತ್ತಿದ್ದಾನೆ ಎಂದು ಹರಿಹಾಯ್ದರು. ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿರ್ಧಾರ ಮಾಡುತ್ತಾರೆ. ಮೊದಲು ನೆಟ್ಟಗೆ ಬದುಕು. ನನ್ನನ್ನು ಕೆಣಕಬೇಡ ಶಿವಕುಮಾರ್..ಹುಷಾರು!’ ಎಂದು ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟರು.

ಜೊತೆಗೆ ಸಿದ್ದರಾಮಯ್ಯ(C M Siddaramaiah) ವಿರುದ್ಧ ಹರಿಹಾಯ್ದ ಅವರು ‘ನನ್ನದು ಪಾರಾದರ್ಶಕ ಆಡಳಿತ. ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ರೀಡು ಹೆಸರಿನಲ್ಲಿ ಲೂಟಿ ಹೊಡೆದಿದ್ದೀರಿ. ಕೆಂಪಣ್ಣ ವರದಿ ಏನಾಯಿತು? ಸದನ ಸಮಿತಿ ವರದಿ ಎಲ್ಲಿ ಇಟ್ಕೊಂಡಿದ್ದೀರಿ? ಕೆಟ್ಟ ಪದ ಬಳಸ ಬಾರದು. ಇವತ್ತು ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ಎ ಕೆ ಸುಬ್ಬಯ್ಯ ಕಾಲದಿಂದಲೂ ದೇವೇಗೌಡರನ್ನು ಮುಗಿಸಲು ಯತ್ನ ಮಾಡಲಾಯಿತು. ಯಾವ ಸಂಚು ಮಾಡಿ ಬಿಡುಗಡೆ ಮಾಡಿದ್ದೀಯಾ ಪೊಣ್ಣನ್ನ? ಎಂದು ವಾಗ್ದಾಳಿ ನಡೆಸಿದರು.