Home News BJP: ಬಿಜೆಪಿಯಲ್ಲಿ ಧರ್ಮಸ್ಥಳ ಚಲೋ ಯಾತ್ರೆ ಕುರಿತು ಭಿನ್ನಮತ – ಅಸಮಾಧಾನ ಸೃಷ್ಟಿಸಿದ ವಿಜಯೇಂದ್ರ ಹೊಸ...

BJP: ಬಿಜೆಪಿಯಲ್ಲಿ ಧರ್ಮಸ್ಥಳ ಚಲೋ ಯಾತ್ರೆ ಕುರಿತು ಭಿನ್ನಮತ – ಅಸಮಾಧಾನ ಸೃಷ್ಟಿಸಿದ ವಿಜಯೇಂದ್ರ ಹೊಸ ನಡೆ

Hindu neighbor gifts plot of land

Hindu neighbour gifts land to Muslim journalist

BJP: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಇದು ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಅನೇಕ ರಾಜಕೀಯ ಪಕ್ಷದ ನಾಯಕರಗಳು ಧರ್ಮಸ್ಥಳ ಯಾತ್ರೆಯನ್ನು ಕೈಗೊಂಡು ಧರ್ಮ ಸಂರಕ್ಷಣಾ ಸಭೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಧರ್ಮಸ್ಥಳಕ್ಕೆ ಹಾಗೂ ವೀರೇಂದ್ರ ಹೆಗಡೆಯವರಿಗೆ ಬೆಂಬಲವನ್ನು ಘೋಷಿಸುತ್ತಿದ್ದಾರೆ. ಅದರಲ್ಲೂ ಕೂಡ ಈ ಬಗ್ಗೆ ಬಿಜೆಪಿ ಹೆಚ್ಚು ಆಸಕ್ತಿಯನ್ನು ತೋರಿಸಿದೆ.

ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣೆ ಯಾತ್ರೆಯನ್ನು ಹಮ್ಮಿಕೊಂಡಿರುವ ಬಿಜೆಪಿ ನಾಯಕರು ಸೌಜನ್ಯ ಮನೆಗೂ ಕೂಡ ಭೇಟಿ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸೌಜನ್ಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸೌಜನ್ಯ ಮನೆಯವರು ಸುಪ್ರೀಂಕೋರ್ಟಿಗೆ ಪ್ರಕರಣದ ಮರೆತನಿಗೆ ಅರ್ಜಿ ಸಲ್ಲಿಸಲು ಹೋದರೆ ಅದರ ಸಂಪೂರ್ಣ ಖರ್ಚನ್ನು ತಾವೇ ಬರಿಸುವುದಾಗಿ ಬಿಜೆಪಿ ಹೇಳಿದೆ. ಇದರ ಬೆನ್ನಲ್ಲೇ ಧರ್ಮಸ್ಥಳ ಛಲೋ ವಿಚಾರದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಆ ನಡೆ ಕುರಿತು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ (BY Vijayendra) ಅವರು ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದು ಈಗ ಬಿಜೆಪಿಯೊಳಗೇ ಆಕ್ಷೇಪಕ್ಕೆ ಕಾರಣವಾಗಿದೆ.

ಅಸಮಾಧಾನಕ್ಕೆ ಕಾರಣ:

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೊನೆಯ ಕ್ಷಣದಲ್ಲಿ ಸೌಜನ್ಯ ನಿವಾಸಕ್ಕೆ ಭೇಟಿ ನಿಗದಿಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಭೇಟಿಗೆ 15 ನಿಮಿಷಗಳ ಮೊದಲು ನಾಯಕರಿಗೆ ಮಾಹಿತಿ ರವಾನೆ ಮಾಡಿದ್ದು, ಉಳಿದ ನಾಯಕರಿಗೆ ಮಾಹಿತಿ ಹೋಗುವ ವೇಳೆ ಅವರೆಲ್ಲ ಧರ್ಮಸ್ಥಳದಿಂದ ಬೆಂಗಳೂರು ಹಾದಿ ಹಿಡಿದಾಗಿತ್ತು ಎನ್ನಲಾಗಿದೆ. ಇನ್ನು ಮಾಹಿತಿ ಬರುವ ವೇಳೆ ಪ್ರಹ್ಲಾದ್ ಜೋಶಿ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿ. ಸುನೀಲ್ ಕುಮಾರ್, ಡಿ.ವಿ. ಸದಾನಂದ ಗೌಡ ಬೆಂಗಳೂರಿನತ್ತ ಹೊರಟಿದ್ದರು. ನಳೀನ್ ಕುಮಾರ್ ಕಟೀಲ್ ಮಂಗಳೂರಿನತ್ತ ಹೊರಟಿದ್ದರು. ಹೀಗಾಗಿ ಕೊನೆ ಕ್ಷಣದಲ್ಲಿ ಮಾಹಿತಿ ನೀಡಿ ಸೌಜನ್ಯ ಮನೆಗೆ ಭೇಟಿ ನೀಡಿದ ವಿಜಯೇಂದ್ರ ನಡೆಯ ಕುರಿತು ಬಿಜೆಪಿಯಲ್ಲಿ ಆಪಸ್ವರ ಎದ್ದಿದೆ. ಜೊತೆಗೆ ಸೌಜನ್ಯ ‌ನಿವಾಸಕ್ಕೆ ಭೇಟಿ ನೀಡಬೇಕಾದ ಅವಶ್ಯಕತೆ ಏನಿತ್ತು ಎಂಬ ಆಕ್ಷೇಪವನ್ನೂ ಆಂತರಿಕವಾಗಿ ಕೆಲವು ಮಂದಿ ಬಿಜೆಪಿ ನಾಯಕರು ಎತ್ತಿದ್ದಾರೆ ಎನ್ನಲಾಗಿದೆ.

Viral Video : ಫೋನ್ ಪಿಕ್ ಮಾಡದ ಲವ್ವರ್ !! ಇಡೀ ಊರಿಗೇ ಕರೆಂಟ್ ಇಲ್ಲದಂತೆ ಮಾಡಿದ ಪಾಗಲ್ ಪ್ರೇಮಿ