Home News Dinesh Gundu Rao: ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳದಲ್ಲಿ ದಿನೇಶ್ ಗುಂಡೂರಾವ್ ಸ್ವೀಮ್ಮಿಂಗ್ – ಕಾಲೆಳೆದ...

Dinesh Gundu Rao: ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳದಲ್ಲಿ ದಿನೇಶ್ ಗುಂಡೂರಾವ್ ಸ್ವೀಮ್ಮಿಂಗ್ – ಕಾಲೆಳೆದ ಬಿಜೆಪಿ, ಟಾಂಗ್ ಕೊಟ್ಟ ಸಚಿವ !!

Hindu neighbor gifts plot of land

Hindu neighbour gifts land to Muslim journalist

 

Dinesh Gundu Rao: ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ(Dakshina Kannada) ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ತಾವೊಬ್ಬ ಒಳ್ಳೆಯ ಈಜುಪಟು ಎಂಬುದನ್ನು ತೋರಿಸಿದ್ದಾರೆ. ಶನಿವಾರ ಬೆಳಗ್ಗೆ ಪಾಂಡೇಶ್ವರದ(Pandeshwara) ಎಮ್ಮೆಕೆರೆಯಲ್ಲಿರುವ ಅಂತಾರಾಷ್ಟ್ರೀಯ ಈಜುಕೊಳಕ್ಕೆ ಭೇಟಿ ನೀಡಿದ ಸಚಿವರು, 45 ನಿಮಿಷಗಳ ಕಾಲ ಈಜಾಡಿ ಖುಷಿಪಟ್ಟರು. ಕಳೆದ ವರ್ಷ ಈಜುಕೊಳ ಉದ್ಘಾಟನೆಯ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಆಗಮಿಸಿರಲಿಲ್ಲ. ಈಜಾಡುವ ಮೂಲಕವೇ ಉದ್ಘಾಟನೆ ಮಾಡುವುದಾಗಿ ಅವರು ಹಿಂದೆ ಹೇಳಿದ್ದರು. ಇದೀಗ ಕಾರ್ಯನಿಮಿತ್ತ ಜಿಲ್ಲೆಗೆ ಬಂದಿರುವ ಗುಂಡೂರಾವ್ ಈಜಾಡಿ ಗಮನ ಸೆಳೆದಿದ್ದಾರೆ.

 

ಗುಂಡುರಾವ್ ಅವರು ಈಜಾಡುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ(BJP) ಇದನ್ನು ಹಂಚಿಕೊಂಡು ಸರ್ಕಾರಕ್ಕೆ ಹಾಗೂ ಸಚಿವರಿಗೆ ಟಾಂಗ್ ನೀಡಿತ್ತು. ಬಳಿಕ ಸಚಿವರು ಇದಕ್ಕೆ ತಿರುಗಿ ಕೌಂಟ್ರು ಕೊಟ್ಟು ಬಿಜೆಪಿಯ ಆತ್ಮಗೌರವವನ್ನು ಭಂಗತರುವಂತೆ ಮಾಡಿದ್ದಾರೆ. ಹಾಗಿದ್ರೆ ಬಿಜೆಪಿ ಹೇಳಿದ್ದೇನು? ಸಚಿವರು ಕೊಟ್ಟ ತಿರುಗೇಟೇನು?

 

ಬಿಜೆಪಿ ಹೇಳಿದ್ದೇನು?

ನಗರಗಳೆಲ್ಲಾ ಕೊಚ್ಚೆ, ಕೊಳಚೆಯಿಂದ ನಾರಿ ಡೆಂಗ್ಯೂ, ಮಲೇರಿಯಾದಂತಹ ಖಾಯಿಲೆಗಳು ಮರಣ ಮೃದಂಗ ಬಾರಿಸುತ್ತಿದ್ದರೂ, ಬಡವರ ಪರ @INCKarnataka ಸರ್ಕಾರ ಸ್ವಚ್ಛ ಈಜುಕೊಳದಲ್ಲಿ ತೇಲಾಡುತ್ತಿದೆ. ನೀರಿನಲ್ಲಿ ಆರೋಗ್ಯ ಇಲಾಖೆಯ ನೀರೋ ರಾವ್ ಎಂದು ದಿನೇಶ್ ಗುಂಡೂರಾವ್ ಅವರನ್ನು ಟ್ಯಾಗ್ ಮಾಡಿದೆ.

 

ದಿನೇಶ್ ಗುಂಡುರಾವ್ ಟಾಂಗ್:

ಬಿಜೆಪಿಯವರಿಗೆ ಈಜು ಒಂದು ಮೋಜಿನ ರೀತಿ ಕಾಣುತ್ತೆ.. ಈಜು, ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟವರು ಬಿಜೆಪಿ ಪಕ್ಷದಲ್ಲಿರುವಾಗ ಬಿಜೆಪಿ ಇದನ್ನ ಕ್ರೀಡೆಯಾಗಿ ಹೇಗೆ ನೋಡಲು ಸಾಧ್ಯ.. ಬಿಜೆಪಿಗರಿಗೆ ಈಜುವುದು ಮೋಜು ಮಸ್ತಿಯೇ..!

 

ನಾನು ಇಂದು ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳಕ್ಕೆ ಭೇಟಿ ನೀಡಿ ಈಜಿದ್ದು ಮೋಜು ಮಸ್ತಿಗಲ್ಲ.‌ ಜಿಲ್ಲಾ ಉಸ್ತುವಾರಿ ಸಚಿವನಾಗಿ ಈ ಹಿಂದೆ ಈಜುಕೊಳ ಉದ್ಘಾಟನೆಯಲ್ಲಿ ನನಗೆ ಪಾಲ್ಗೊಳ್ಳಲು ಆಗಿರಲಿಲ್ಲ. ಆ ಸಂದರ್ಭದಲ್ಲಿ ಅಲ್ಲಿಯ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ಹಿನ್ನೆಲೆಯಲ್ಲಿ ನಾನು ಇನ್ನಮ್ಮೆ ಭೇಟಿ ನೀಡಿ ಈಜುಕೊಳದಲ್ಲಿ ಈಜುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ ಇಂದು ಬೆಳಗ್ಗೆಯೇ ಸಮಯ ಬಿಡುವು ಮಾಡಿಕೊಂಡು ಈಜುಕೊಳ್ಳಕ್ಕೆ ಭೇಟಿ ನೀಡಿದೆ.

 

ನಾನು ಈಜುವುದಕ್ಕೂ ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳಕ್ಕು ಎತ್ತಣ ಸಂಬಧ ಸ್ವಾಮಿ. ಅಷ್ಟಕ್ಕೂ ಮಂಗಳೂರಿಗೆ ಬಂದು ನಾನು ಮೊದಲ ಮಾಡಿದ ಕೆಲಸವೇ ಡೆಂಗ್ಯೂ ತಪಾಸಣೆ. ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳ ನಾಶ ಪಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ. ಮನೆ ಮನೆಗೆ ತೆರಳಿ ನೀರು ಶೇಖರಣೆಯಾದ ಸ್ಥಳಗಳನ್ನ ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

https://x.com/dineshgrao/status/1809634259256373469?t=Pp5-irEnf7hHJ8h8t9AkBw&s=19