Home News Dharmasthala: ಧರ್ಮಸ್ಥಳ ಪ್ರಕರಣ – ಶೋಧ ಕಾರ್ಯದ ವೇಳೆ ತಲೆಬುರುಡೆ, 100 ಮೂಳೆ ಪತ್ತೆ !!

Dharmasthala: ಧರ್ಮಸ್ಥಳ ಪ್ರಕರಣ – ಶೋಧ ಕಾರ್ಯದ ವೇಳೆ ತಲೆಬುರುಡೆ, 100 ಮೂಳೆ ಪತ್ತೆ !!

Hindu neighbor gifts plot of land

Hindu neighbour gifts land to Muslim journalist

Dharmasthala : ಧರ್ಮಸ್ಥಳದಲ್ಲಿ ನಿನ್ನೆ ನಡೆದ ಶೋಧ ಕಾರ್ಯ ಮಹತ್ವದ ತಿರುವನ್ನು ಪಡೆದುಕೊಂಡಿತ್ತು. 11ನೇ ಸ್ಪಾಟ್ ಬಿಟ್ಟು ಅನಾಮಿಕ ವ್ಯಕ್ತಿ ಬೇರೆ ಸ್ಥಳಗಳಿಗೆ ಕರೆದೊಯ್ದು ಅಗೆಯಲು ಹೇಳಿದ್ದ. ಈ ವೇಳೆ ಇಡೀ ಮಾನವನ ಅಸ್ತಿಪಂಜರ ಒಂದು ದೊರೆತಿದೆ ಎಂದು ಹೇಳಲಾಗುತ್ತಿದೆ.

ಹೌದು, 11ನೇ ಸ್ಥಳ ಉತ್ಘನನ ವೇಳೆ ದೂರುದಾರ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಹೆದ್ದಾರಿ ಬದಿಯ ಕಾಡಿಗೆ ಕರೆದೊಯ್ದಿದ್ದ.

ಇಲ್ಲಿ ಕಳೆದ ನಾಲ್ಕು ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು ಇಲ್ಲಿ ಮನುಷ್ಯನ ಮೃತದೇಹದ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಅದರಲ್ಲಿ ಒಂದು ತಲೆಬುರುಡೆ, ಬೆನ್ನು ಮೂಳೆ ಸೇರಿ ಸುಮಾರು 100 ಮೂಳೆ ಸಿಕ್ಕಿವೆ’ ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿರುವುದಾಗಿ ವರದಿ ಮಾಡಿದೆ. ಇನ್ನು ಉದ್ದನೆಯ ಬೆನ್ನುಮೂಳೆಯೂ ಸ್ಥಳದಲ್ಲಿತ್ತು. ತಜ್ಞರ ತಂಡವು ಅದನ್ನು ವೈಜ್ಞಾನಿಕವಾಗಿ ಸಂಗ್ರಹ ಮಾಡಿದೆ. ಈ ಸ್ಥಳದಲ್ಲೇ ಗಂಟು ಹಾಕಿರುವ ಸೀರೆ ಸಹ ಸಿಕ್ಕಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಈ ಮಧ್ಯೆ ದೂರುದಾರನ ಪರ ವಕೀಲರು ಮತ್ತಷ್ಟು ಪಾಯಿಂಟ್ ಗುರುತಿಸಲು ಅವಕಾಶ ಕೊಡಿ ಎಂದು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್‌ಗೆ ಒತ್ತಾಯ ಮಾಡಿದ್ದಾರೆ. ಆದರೆ, ವಕೀಲರ ಮನವಿಯನ್ನು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ತಿರಸ್ಕರಿಸಿದ್ದಾರೆ. ಸದ್ಯಕ್ಕೆ 13 ಸ್ಥಳಗಳಲ್ಲಿ ಮಾತ್ರ ಶೋಧಿಸುತ್ತೇವೆ. ಎಸ್‌ಐಟಿ ಸೂಚಿಸಿದಲ್ಲಿ ಮಾತ್ರ ನಾವು ಪರಿಶೀಲನೆ ಮಾಡುತ್ತೇವೆ ಎಂದು ಎಸಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Dharmasthala burial case: ಧರ್ಮಸ್ಥಳ ಪ್ರಕರಣ: ಅಸ್ಥಿಪಂಜರ ಅವಶೇಷಗಳನ್ನು ಪತ್ತೆಹಚ್ಚಲು ಜಿಪಿಆರ್ ತಂತ್ರಜ್ಞಾನ ಬಳಕೆ – ಎಸ್‌ಐಟಿ ಬಳಸುವ ಸಾಧ್ಯತೆ? – ಮಾದ್ಯಮ ವರದಿ