Home News Ashwini Punith Rajkumar: ಅವಹೇಳನಕಾರಿ ಪೋಸ್ಟ್ ವಿಚಾರ- ಕೊನೆಗೂ ಮೌನ ಮುರಿದ ಅಶ್ವಿನಿ ಪುನೀತ್ ರಾಜ್...

Ashwini Punith Rajkumar: ಅವಹೇಳನಕಾರಿ ಪೋಸ್ಟ್ ವಿಚಾರ- ಕೊನೆಗೂ ಮೌನ ಮುರಿದ ಅಶ್ವಿನಿ ಪುನೀತ್ ರಾಜ್ ಕುಮಾರ್

Ashwini Punith Rajkumar

Hindu neighbor gifts plot of land

Hindu neighbour gifts land to Muslim journalist

Ashwini Punith Rajkumr: RCB ಸೋಲಿಗೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ (Ashwini Puneeth Rajkumar) ಅವರೇ ಕಾರಣ ಎನ್ನುವಂತೆ ಅಸಭ್ಯ ಪದ ಬಳಸಿ ಅವಹೇಳನಕಾರಿ ಪೋಸ್ಟ್ (Post) ಮಾಡಿದವರ ವಿರುದ್ಧ ದೂರು ದಾಖಲಾದರೂ ಭಾರೀ ಆಕ್ರೋಶ ಕೇಳಿಬರುತ್ತಿದೆ. ಸಿನಿಮಾ ರಂಗದ ಅನೇಕರು ಪೋಸ್ಟ್ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಕೂಡ ಕಠಿಣ ಕ್ರಮದ ಮಾತುಗಳನ್ನು ಆಡಿದ್ದಾರೆ. ಈ ಬೆನ್ನಲ್ಲೇ ಪೋಸ್ಟ್ ವಿಚಾರವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮೊದಲ ಸಲ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಅವಹೇಳನಕಾರಿ ಪೋಸ್ಟ್ ಬಗ್ಗೆ ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. “ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳೆಯರೇ ರಾತ್ರಿ ಬ್ರಾ ಧರಿಸಿ ಮಲಗುತ್ತೀರಾ? ಇದರಿಂದಾಗುವ ದುಷ್ಪರಿಣಾಮ ಏನು ಅಂತ ನಿಮಗೆ ಗೊತ್ತಾ?

ಏನಿದು ಪ್ರಕರಣ?
ಕಳೆದ ಮಾರ್ಚ್ ತಿಂಗಳು 19ನೇ ತಾರೀಕಿನಂದು ಬೆಂಗಳೂರಿನ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್‌ಸಿಬಿ ತಂಡ ಕೆಲ ಪಂದ್ಯಗಳಲ್ಲಿ ಸೋತಿದೆ. ಈ ಸಮಯದಲ್ಲಿ ನಟ ದರ್ಶನ್ ಅಭಿಮಾನಿಗಳ ಗಜಪಡೆ ಟ್ವಿಟರ್ ಪೇಜ್‌ನಿಂದ ಹಾಕಿದ್ದ ಪೋಸ್ಟ್‌ವೊಂದು ಕಳೆದೆರಡು ದಿನಗಳಿಂದ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್(Ashwini puneeth rajkumar) ಕುರಿತು ಮಾಡಲಾಗಿದ್ದ ಆ ಅವಹೇಳನಕಾರಿ ಪೋಸ್ಟ್‌(Derogatory Post) ಬಗ್ಗೆ ಈಗಾಗಲೇ ದೂರು ಕೂಡ ದಾಖಲಾಗಿದೆ.

ಇದನ್ನೂ ಓದಿ: Ram Gopal Verma: ಮಲಯಾಳಂ ನಟಿಯ ಅಂದಕ್ಕೆ ಮಾರಿಹೋದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ : ಯಾರು ಈ ಮೋಹಕ ಸುಂದರಿ?