Home News Cosmetics: ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಔಷಧ ಇಲಾಖೆ ಕಣ್ಣು! ಎಲ್ಲಾ ಕಾಸ್ಮೆಟಿಕ್ಸ್ಗಳ ಪರೀಕ್ಷೆಗೆ ಸೂಚನೆ

Cosmetics: ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಔಷಧ ಇಲಾಖೆ ಕಣ್ಣು! ಎಲ್ಲಾ ಕಾಸ್ಮೆಟಿಕ್ಸ್ಗಳ ಪರೀಕ್ಷೆಗೆ ಸೂಚನೆ

Hindu neighbor gifts plot of land

Hindu neighbour gifts land to Muslim journalist

Cosmetics: ಕಾಸ್ಮೆಟಿಕ್ಸ್ಗಳು (Cosmetics) ಆರೋಗ್ಯಕ್ಕೆ ಹಾನಿಕಾರಕವಾಗ್ತಿವೆ. ಸಡನ್ ಮುಖ ಹೊಳಪು ಬರಬೇಕು ಅಂತಾ ಹಿಂದೆ ಮುಂದೆ ನೋಡದೆ ಸ್ಟೀರಾಯ್ಡ್ ಬೇಸ್ ಕ್ರೀಮ್‌ಗಳನ್ನ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಇತ್ತೀಚೆಗೆ ಕುಂಕುಮ, ಪ್ಯಾರಸಿಟಮೋಲ್ ಸೇರಿ 15 ಔಷಧ ನಿರ್ಬಂಧ ಮಾಡಲಾಗಿತ್ತು. ಇದೀಗ ಅನೇಕ ಕಾಸ್ಮೆಟಿಕ್ಸ್‌ಗಳ ಮೇಲೆ ಔಷಧ ನಿಯಂತ್ರಣ ಇಲಾಖೆ ಕಣ್ಣಿಟ್ಟಿದೆ. ಈಗ ಮತಷ್ಟು ಸೌಂದರ್ಯ ವರ್ಧಕಗಳ ಸ್ಯಾಂಪಲ್ಸ್ಗೆ ಔಷಧ ನಿಯಂತ್ರಣ ಇಲಾಖೆ ಮುಂದಾಗಿದೆ.

ಮುಖ ಹೊಳಪಿಗೆ ಬಳಸುವ ಫೋಲಿಕ್ ಆಸಿಡ್, ಸ್ಟೀರಾಯಡ್ ಬೇಸ್ ಕ್ರೀಮ್, ವಿಟಮಿನ್ ಡಿ, ಸಿ ಕ್ರೀಮ್, ಸಿರಮ್ಗಳು ಗುಣಮಟ್ಟದ್ದಲ್ಲ ಅನ್ನೋದು ಈಗ ಸಾಬೀತಾಗಿದೆ. ಅನೇಕ ಜನರು ಮುಖದ ಕಾಂತಿ ಹೆಚ್ಚಿಸೋದಕ್ಕೆ ವಿಟಮಿನ್ ಸಿ ಗಳ ಸೀರಮ್ ಕ್ರೀಮ್‌, ಸನ್‌ಸ್ಕ್ರೀನ್ ಕ್ರೀಮ್‌ಗಳನ್ನ ಬಳಸುತ್ತಾರೆ. ಅದರಲ್ಲೂ ಫೊಲಿಕ್ ಆಸಿಡ್, ವಿಟಮಿನ್ ಒಳಗೊಂಡಿರುವ ಲಿಕ್ವಿಡ್ ಕ್ರೀಮ್ ಬಳಸಲಾಗುತ್ತಿದೆ. ಆದರೆ ಅನೇಕ ಕ್ರೀಮ್‌ಗಳು ಕಳಪೆ ಗುಣಮಟ್ಟದ್ದಾಗಿವೆ.

ಈ ಹಿನ್ನೆಲೆ ಕಾಂತಿವರ್ಧಕ ಉತ್ಪನ್ನಗಳ ಮೇಲೆ ಆಹಾರ ಸುರಕ್ಷತ ಔಷಧ ಇಲಾಖೆ ಸಮರ ಸಾರಿದೆ. ಇನ್ಮುಂದೆ ಎಲ್ಲಾ ಕಾಸ್ಮೆಟಿಕ್ಸ್ಗಳ ಪರೀಕ್ಷೆಗೆ ಆದೇಶ ಮಾಡಲಾಗಿದ್ದು, ಬಾಡಿಲೋಷನ್, ಲಿಪ್ಸ್ಟಿಕ್, ಕ್ರೀಮ್, ಸೇರಿದಂತೆ ಎಲ್ಲವೂ ಪರೀಕ್ಷೆಗೆ ಒಳಪಡಲಿದೆ. ಈ ಬಗ್ಗೆ ಲಿಸ್ಟ್ ತಯಾರಿಸಿರುವ ಇಲಾಖೆ, ಈಗಾಗಲೇ ಅಧಿಕಾರಿಗಳಿಗೆ ಯಾವೆಲ್ಲಾ ಕಾಂತಿವರ್ಧಕಗಳನ್ನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚನೆ ನೀಡಿದೆ. ಎಲ್ಲಾ ಬ್ರಾಂಡೆಡ್ಗಳ ಕಾಂತಿವರ್ಧಕಗಳು ಪರೀಕ್ಷೆಗೆ ಒಳಪಡಿಸಲಿದ್ದು, ಹೊಸ ಆ್ಯಕ್ಟ್ ಮೂಲಕ ಕಾಸ್ಮೆಟಿಕ್ಸ್ಗಳ ಮೇಲೆ ನಿಯಂತ್ರಣಕ್ಕೆ ಮುಂದಾಗಿದೆ.

ಈ ರೀತಿಯ ಸ್ಟೀರಾಯ್ಡ್ ಬೇಸ್ಡ್ ಕ್ರೀಮ್, ವಿಟಮಿನ್ ಸಿ ಕ್ರೀಮ್‌ಗಳಲ್ಲಿ ಅನೇಕ ಕ್ರೀಮ್ಗಳು ಸಿರಮ್‌ಗಳು ಕಳಪೆ ಗುಣಮಟ್ಟದ ಉತ್ಪನ್ನಗಳು ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿದ್ದು, ಇವುಗಳ ಬಳಕೆಯಿಂದ ತ್ವಚೆಗೆ ಹಾನಿ ಉಂಟಾಗುವುದು ಎಂದು ಚರ್ಮ ರೋಗದ ತಜ್ಞ ವೈದ್ಯ ಡಾ.ಯೋಗಿಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಆಹಾರ ಸುರಕ್ಷತಾ ಹಾಗೂ ಔಷಧ ನಿಯಂತ್ರಣ ಇಲಾಖೆ ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್‌ ಹಾಗೂ ತಿನಿಸುಗಳ ಮಾರಾಟರಗಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಮುಂದಿನ ದಿನದಲ್ಲಿ ಹೊಸ ಕಾಸ್ಮೆಟಿಕ್ಸ್ ಆ್ಯಕ್ಟ್ ರೂಪಿಸಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ: New Delhi: ಮಳೆಯಲ್ಲಿ ಆಟವಾಡಲು ಬಯಸಿದ ಮಗು, ಚಾಕು ಇರಿದು ಹತ್ಯೆಗೈದ ತಂದೆ